Onion Benefits: ಭಾರತೀಯ ಖಾದ್ಯದಲ್ಲಿ ಈರುಳ್ಳಿಗೆ ವಿಶೇಷ ಸ್ಥಾನವಿದೆ. ಬಹುತೇಕ ಭಾರತೀಯ ಆಹಾರಗಳು ಈರುಳ್ಳಿ ಇಲ್ಲದೆ ರುಚಿ ಎನಿಸುವುದಿಲ್ಲ. ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಬೇಸಿಗೆಯಲ್ಲಿ ಈರುಳ್ಳಿ ಸೇವಿಸುವುದರಿಂದ ಶಾಖದ ಹೊಡೆತದಿಂದ ರಕ್ಷಣೆ ಸಿಗಲಿದೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ಈರುಳ್ಳಿಯ ಇತರ ಕೆಲವು ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ, ಅದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು.


COMMERCIAL BREAK
SCROLL TO CONTINUE READING

ಈರುಳ್ಳಿಯ ಪ್ರಯೋಜನಗಳು :-
ನೀವು ಮಲಗುವಾಗ ಈರುಳ್ಳಿಯನ್ನು (Onion) ನಾಲ್ಕು ತುಂಡುಗಳಾಗಿ ಕತ್ತರಿಸಿ ಅದನ್ನು ಹಾಸಿಗೆಯ ಬಳಿ ಇರಿಸಿದರೆ ಇದರಿಂದ  ಶೀತ ಮತ್ತು ಕೆಮ್ಮಿನ ಸಮಸ್ಯೆ ನಿವಾರಣೆಗೊಳ್ಳಲಿದೆ. ಏಕೆಂದರೆ ಈರುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕು ಹರಡುವುದನ್ನು ತಡೆಯುತ್ತದೆ. ಇದರೊಂದಿಗೆ, ಈರುಳ್ಳಿಯನ್ನು ಹಾಸಿಗೆಯ ಬಳಿ ಇಟ್ಟು ಮಲಗುವಂತೆ ಹಿರಿಯರು ಸಲಹೆ ನೀಡುತ್ತಾರೆ.


ಇದನ್ನೂ ಓದಿ -  Onion Benefits: ವೈದ್ಯರಿಂದ ದೂರ ಉಳಿಯಲು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಕಚ್ಚಾ ಈರುಳ್ಳಿ


ಪಾದಗಳನ್ನು ಡಿಟಾಕ್ಸ್ ಮಾಡಿ- ಪಾದಗಳನ್ನು ನಿರ್ವಿಷಗೊಳಿಸಲು, ಈರುಳ್ಳಿ ಕೂಡ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ನೀವು ಈರುಳ್ಳಿಯನ್ನು ತುಂಡುಗಳಾಗಿ ಕತ್ತರಿಸಿ ನಿಮ್ಮ ಪಾದದ ಅಡಿಯಲ್ಲಿ ಇರಿಸಿ ಮತ್ತು ತೆಳುವಾದ ಬಟ್ಟೆಯನ್ನು ಸುತ್ತಿರಿ. ರಾತ್ರಿಯಿಡೀ ಪಾದಗಳನ್ನು ಈ ರೀತಿ ಇರಿಸಿ. ಇದು ಪಾದಗಳನ್ನು ನಿರ್ವಿಷಗೊಳಿಸುತ್ತದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ.


ಮಲಬದ್ಧತೆಗೆ ಪ್ರಯೋಜನಕಾರಿ- ಗ್ಯಾಸ್ಟ್ರಿಕ್ ಸಿಂಡ್ರೋಮ್ ಮತ್ತು ಮಲಬದ್ಧತೆಗೆ ಈರುಳ್ಳಿ ತಿನ್ನುವುದು ಪ್ರಯೋಜನಕಾರಿ. ಈರುಳ್ಳಿಯಲ್ಲಿರುವ (Onion Benefits) ನಾರುಗಳು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತವೆ.


ಇದನ್ನೂ ಓದಿ -  Vinegar Onion Benefits: ಈರುಳ್ಳಿ ತಿನ್ನುವ ಮೊದಲು ಈ ಕೆಲಸ ಮಾಡಿ; ಈ 10 ಅದ್ಭುತ ಪ್ರಯೋಜನ ಪಡೆಯಿರಿ!


ಮುಟ್ಟಿನ ನೋವನ್ನು ನಿವಾರಿಸಲು ಸಹಕಾರಿ - ಈರುಳ್ಳಿ ಮುಟ್ಟಿನ ಅವಧಿಯಲ್ಲಿ ಉಂಟಾಗುವ ಸಮಸ್ಯೆಗಳನ್ನು ತೊಡೆದುಹಾಕಲು ಬಹಳ ಪರಿಣಾಮಕಾರಿ. ಮುಟ್ಟಿನ ಸಮಯದಲ್ಲಿ ಹಸಿ ಈರುಳ್ಳಿ ತಿನ್ನುವುದರಿಂದ ಮುಟ್ಟಿನ ನೋವು ನಿವಾರಿಸಬಹುದು ಎಂದು ಹೇಳಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.