Onion Benefits: ವೈದ್ಯರಿಂದ ದೂರ ಉಳಿಯಲು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಕಚ್ಚಾ ಈರುಳ್ಳಿ

ಆಹಾರದ ರುಚಿ ಹೆಚ್ಚಿಸುವ ಈರುಳ್ಳಿ ಕೇವಲ ರುಚಿಯ ದೃಷ್ಟಿಯಿಂದ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಕಚ್ಚಾ ಈರುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಹಲವು ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?

ಬೆಂಗಳೂರು: ಹಸಿ ಈರುಳ್ಳಿ ತಿಂದ ನಂತರ ಬಾಯಿಯಲ್ಲಿ ವಾಸನೆ ಬರುವುದರಿಂದ ಅನೇಕ ಜನರು ಹಸಿ ಈರುಳ್ಳಿ ತಿನ್ನಲು ಇಷ್ಟಪಡುವುದಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಅವರು ತಮ್ಮ ಆಹಾರದಲ್ಲಿ ಈರುಳ್ಳಿಯನ್ನು ಬಳಸಿದರೂ ಕೂಡ ಕಚ್ಚಾ ಈರುಳ್ಳಿ ತಿನ್ನಲು ಹಿಂದೇಟು ಹಾಕುತ್ತಾರೆ.  ಆದರೆ ಕಚ್ಚಾ ಈರುಳ್ಳಿ ಇಲ್ಲದೆ ತಮ್ಮ ಊಟವೇ ಪೂರ್ಣಗೊಳ್ಳುವುದಿಲ್ಲ ಎಂದು ಹೇಳುವವರೂ ಇದ್ದಾರೆ. ಅದಲ್ಲದೆ ಈರುಳ್ಳಿ ಕತ್ತರಿಸುವಾಗ ಕಣ್ಣಿನಿಂದ ನೀರು ಬರುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಯಾವ ಸಮಯದಲ್ಲಿ ಈರುಳ್ಳಿ ಸೇವಿಸಿದರೆ ಅದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನಾವಿಂದು ತಿಳಿಸುತ್ತಿದ್ದೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಬೇಸಿಗೆ ಕಾಲದಲ್ಲಿ ಹಸಿ ಈರುಳ್ಳಿ ತಿನ್ನಬೇಕು ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರಬಹುದು. ಇದಕ್ಕೆ ಕಾರಣವೆಂದರೆ ಈರುಳ್ಳಿ ಬೇಸಿಗೆಯ ಸಾಮಾನ್ಯ ಕಾಯಿಲೆಯ ಹೊಡೆತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈರುಳ್ಳಿ ಹೃದಯ ಸಂಬಂಧಿತ ಕಾಯಿಲೆಗಲು, ಹೊಟ್ಟೆ ಸಂಬಂಧಿತ ಕಾಯಿಲೆಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಗಳಿಂದ ಸಮೃದ್ಧವಾಗಿರುವ ಈರುಳ್ಳಿಯನ್ನು ಸೇವಿಸಿದರೆ, ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಬಲಗೊಳ್ಳುತ್ತದೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲಾಗುತ್ತದೆ. ಈರುಳ್ಳಿಯಲ್ಲಿರುವ ಕೆಲವು ಸಂಯುಕ್ತಗಳು ಅಡುಗೆ ಮಾಡಿದ ನಂತರ ನಾಶವಾಗುತ್ತವೆ, ಆದ್ದರಿಂದ ಈರುಳ್ಳಿಯನ್ನು ಹಸಿಯಾಗಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

2 /6

ಕಚ್ಚಾ ಈರುಳ್ಳಿಯಲ್ಲಿ ಅನೇಕ Flavanoids ಕಂಡುಬರುತ್ತವೆ, ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತವನ್ನು ಶುದ್ದೀಕರಿಸಲು ಸಹ ಸಹಾಯಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಮಾರಕ ಕಾಯಿಲೆಗಳ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.

3 /6

ಯುಎಸ್ ಕೃಷಿ ಇಲಾಖೆಯ ಪ್ರಕಾರ, ಒಂದು ಈರುಳ್ಳಿ 25.3 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ ಮತ್ತು ನಮ್ಮ ಮೂಳೆಗಳಿಗೆ ಕ್ಯಾಲ್ಸಿಯಂ ಎಷ್ಟು ಮುಖ್ಯ ಎಂಬುದನ್ನು ನೀವು ತಿಳಿದಿರಬೇಕು. ಆದ್ದರಿಂದ, ಕಚ್ಚಾ ಈರುಳ್ಳಿಯನ್ನು ಸಲಾಡ್ ಆಗಿ ಸೇವಿಸುವುದರಿಂದ ನಿಮ್ಮ ಮೂಳೆಗಳು ಆರೋಗ್ಯಕರವಾಗಿ ಮತ್ತು ದೃಢವಾಗಿರುತ್ತವೆ. ಇದನ್ನೂ ಓದಿ - ಈ 5 ಸರಳ ಅಭ್ಯಾಸಗಳು ನಿಮ್ಮ ದೇಹದ ಜೊತೆಗೆ ಮನಸ್ಸನ್ನೂ ಸದೃಢವಾಗಿರಿಸುತ್ತೆ

4 /6

ಈರುಳ್ಳಿ ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್ (Cancer) ವಿರೋಧಿ ಗುಣಗಳನ್ನು ಹೊಂದಿದ್ದು ದೇಹದ ಪ್ರತಿರಕ್ಷೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ - Blood Cancer Signs: ನಿಮಗೂ ಈ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ

5 /6

ಅನೇಕ ಬಾರಿ, ಅಲರ್ಜಿಯಿಂದಾಗಿ ಉಸಿರಾಟದ ಸಮಸ್ಯೆ ಕೂಡ ಕಂಡು ಬರುತ್ತದೆ. ಇಂತಹವರಿಗೆ ಹಸಿ ಈರುಳ್ಳಿ ಸಹಕಾರಿಯಾಗಿದೆ. ಇದಲ್ಲದೆ ಆಸ್ತಮಾ (Asthma) ಇರುವವರಿಗೆ ಈರುಳ್ಳಿ ತುಂಬಾ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿರುವ ಫ್ಲೇವನಾಯ್ಡ್ಗಳು ಆಸ್ತಮಾ ರೋಗಿಗಳಿಗೆ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.

6 /6

ಮಧುಮೇಹ ಅಥವಾ ಪ್ರಿಡಿಯಾಬಿಟಿಸ್ ಇರುವವರಿಗೆ ಈರುಳ್ಳಿ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  (ಗಮನಿಸಿ: ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ. ಜೀ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.)