papaya fruit disadvantages: ಹಣ್ಣುಗಳ ವಿವಾಚರಕ್ಕೆ ಬಂದರೇ ಪಪ್ಪಾಯಿ ಹಣ್ಣು ಸಹ ಅಗ್ರಸ್ಥಾನದಲ್ಲಿರುತ್ತದೆ.. ಇದು ವರ್ಷವಿಡೀ ಲಭ್ಯವಿರುವ ಹಣ್ಣಾಗಿದ್ದು.. ಸುವಾಸನೆ ಮತ್ತು ರಸಭರಿತವಾದ ರುಚಿಯಿಂದ ತುಂಬಿರುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿದೆ.. ಉತ್ತಮ ಆರೋಗ್ಯಕ್ಕೆ ಇದು ಮುಖ್ಯವಾಗಿದೆ.. ಪಪ್ಪಾಯಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ತೂಕ ಕೂಡ ಕಡಿಮೆಯಾಗುತ್ತದೆ... ಆದರೆ ಒಂದು ಕಾಯಿಲೆ ಇರುವವರು ಎಂದಿಗೂ ಪಪ್ಪಾಯಿ ಹಣ್ಣನ್ನು ಸೇವಿಸಬಾರದಂತೆ... 


COMMERCIAL BREAK
SCROLL TO CONTINUE READING

ಹಳದಿ ಬಣ್ಣದ, ಮಾಗಿದ ಪಪ್ಪಾಯಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ರುಚಿಯ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿಯಾಗಿರುತ್ತವೆ... ಪಪ್ಪಾಯಿಯಲ್ಲಿ ಜೀವಸತ್ವಗಳು, ಫೈಬರ್ ಮತ್ತು ಖನಿಜಗಳಿದ್ದು.. ಇವು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ..  


ಇದನ್ನೂ ಓದಿ-ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ತಪ್ಪಿಸಬಲ್ಲ ಇಮ್ಯುನೊಥೆರಪಿ ನಿಮಗೆಷ್ಟು ಗೊತ್ತು?


ಇನ್ನು ಈ ಪಪ್ಪಾಯಿ ಹಣ್ಣನ್ನು ಪ್ರತಿ ದಿನ ತಿಂದರೇ ಬೊಜ್ಜು ನಿಯಂತ್ರಣದಲ್ಲಿರುತ್ತದೆ. ಅಲ್ಲದೇ ಮಧುಮೇಹ, ಹೃದಯ ಮತ್ತು ಕ್ಯಾನ್ಸರ್ ಕಾಯಿಲೆಗಳನ್ನು ಹೊಂದಿರುವವರಿಗೆ ಪಪ್ಪಾಯಿ ಅಮೃತವಿದ್ದಂತೆ ಎನ್ನಲಾಗಿದೆ.. ಆದರೂ ಕೆಲವು ಕಾಯಿಲೆಗಳನ್ನಜು ಹೊಂದಿರುವ ರೋಗಿಗಳಿಗೆ ಪಪ್ಪಾಯಿ ವಿಷಕ್ಕೆ ಸಮ ಎನ್ನಲಾಗಿದೆ.. 


ಕಿಡ್ನಿ ಸ್ಟೋನ್ ರೋಗಿಗಳು ಪಪ್ಪಾಯಿಯನ್ನು ತಿನ್ನಬಾರದು: 
ಕಿಡ್ನಿ ಸ್ಟೋನ್ ಇರುವವರು ಪಪ್ಪಾಯಿಯನ್ನು ತಿನ್ನಬಾರದು. ಏಕೆಂದರೆ ಪಪ್ಪಾಯಿಯಲ್ಲಿ ವಿಟಮಿನ್ ಸಿ ಇರುವಿಕೆ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನಲಾಗುತ್ತದೆ ಹಾಗಾದರೆ ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಪಪ್ಪಾಯಿ ಒಳ್ಳೆಯದಲ್ಲ..


ಇದನ್ನೂ ಓದಿ-ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ತಪ್ಪಿಸಬಲ್ಲ ಇಮ್ಯುನೊಥೆರಪಿ ನಿಮಗೆಷ್ಟು ಗೊತ್ತು?


 ಸ್ಲೋ ಹಾರ್ಟ್‌ ಬೀಟ್‌ ಇರುವವವರು ಪಪ್ಪಾಯಿಯನ್ನು ತಿನ್ನಬಾರದು: 
ಹೃದ್ರೋಗವನ್ನು ನಿಯಂತ್ರಿಸುವಲ್ಲಿ ಪಪ್ಪಾಯಿ ತುಂಬಾ ಸಹಾಯ ಮಾಡುತ್ತದೆ. ಆದರೆ ವೇಗ ಅಥವಾ ನಿಧಾನವಾದ ಹೃದಯ ಬಡಿತ ಇರುವವರು ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಯಲ್ಲಿರುವ ಕೆಲವು ಅಂಶಗಳು ಹೃದಯ ಬಡಿತಕ್ಕೆ ತೊಂದರೆಯನ್ನುಂಟು ಮಾಡಬಹುದು.. 


ಗರ್ಭಾವಸ್ಥೆಯಲ್ಲಿ  ಪಪ್ಪಾಯಿಯನ್ನು ತಿನ್ನಬಾರದು: 
ಪಪ್ಪಾಯಿಯನ್ನು ಗರ್ಭಿಣಿಯರು ತಿನ್ನಬಾರದು. ಇದು ಪ್ರೀ ಡೆಲಿವರಿ ಅಪಾಯವನ್ನು ಹೆಚ್ಚಿಸುತ್ತದೆ... ಮತ್ತು ಇದರಲ್ಲಿರುವ ಕೆಲವು ಅಂಶಗಳು ಹೆರಿಗೆ ನೋವನ್ನು ಪ್ರಚೋದಿಸುತ್ತವೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.