Fruits To Avoid During Kidney Stones: ಮಾನವನ ದೇಹದ ಮೂತ್ರಪಿಂಡಗಳು (ಕಿಡ್ನಿ)  ದೇಹದ ಫಿಲ್ಟರ್ ಎಂದು ಹೇಳಲಾಗುತ್ತದೆ. ಮೂತ್ರಪಿಂಡಗಳು ಮನುಷ್ಯನ ದೇಹದ ಕೊಳಕನ್ನು ದೇಹದಿಂದ ಹೊರಹಾಕುವ ಕೆಲಸ ಮಾಡುತ್ತವೆ. ಇದರಿಂದಾಗಿ ವ್ಯಕ್ತಿಯು ರೋಗಗಳ ಅಪಾಯದಿಂದ ದೂರ ಉಳಿಯಬಹುದು. ಹಾಗಾಗಿಯೇ ವ್ಯಕ್ತಿ ಆರೋಗ್ಯವಂತನಾಗಿರಲು ಕಿಡ್ನಿ ಬಹಳ ಮುಖ್ಯವಾದ ಅಂಗವಾಗಿದೆ. 


COMMERCIAL BREAK
SCROLL TO CONTINUE READING

ಬದಲಾದ ಜೀವನಶೈಲಿ, ಕೆಟ್ಟ ಆಹಾರಪದ್ದತಿ ಹೀಗೆ ಹಲವು ಕಾರಣಗಳಿಂದಾಗಿ ಪ್ರಸ್ತುತ ಕಿಡ್ನಿ ಸ್ಟೋನ್ ಸಮಸ್ಯೆ ಹಲವರನ್ನು ಬಾಧಿಸುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಅಸಹನೀಯ ಹೊಟ್ಟೆ ನೋವು, ಮೂತ್ರದ ಸೋಂಕು ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಇದರಿಂದ ಉಂಟಾಗಬಹುದಾಗ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು. ಇದಲ್ಲದೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಕೆಲವು ಹಣ್ಣುಗಳಿಂದಲೂ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. 


ಇದನ್ನೂ ಓದಿ- Camellia Sinensis Benefits: ನೀವು ಎಂದಾದರು ಕ್ಯಾಮಲಿಯಾ ಸೈನೆನ್ಸಿಸ್ ಟೀ ಟ್ರೈ ಮಾಡಿದ್ದೀರಾ?


ವಾಸ್ತವವಾಗಿ, ಉತ್ತಮ ಆರೋಗ್ಯಕ್ಕೆ ಸೊಪ್ಪು-ತರಕಾರಿಗಳಂತೆ ಹಣ್ಣುಗಳು ಕೂಡ ಬಹಳ ಮುಖ್ಯ. ಹಣ್ಣುಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಎಳನೀರು, ಕಲ್ಲಂಗಡಿ, ಕಿತ್ತಳೆ ಮತ್ತು ದ್ರಾಕ್ಷಿಯನ್ನು ತಿನ್ನಬಹುದು. ಹೀಗೆ ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳು ಪ್ರಯೋಜನಕಾರಿ ಆಗಿವೆ. ಆದರೆ, ಕಿಡ್ನಿ ಸ್ಟೋನ್ ರೋಗಿಗಳಿಗೆ ಹಣ್ಣುಗಳನ್ನು ತಿನ್ನುವುದನ್ನು ನಿರ್ಬಂಧಿಸಲಾಗಿದೆ.


ಇದನ್ನೂ ಓದಿ- Quick Glowing skin tips : ಹಾಲಿನಂತ ತ್ವಚೆ ಪಡೆಯಲು 3 ಸೂಪರ್‌ ಟಿಪ್ಸ್‌..! ಟ್ರೈ ಮಾಡಿ


ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಈ ಹಣ್ಣುಗಳು ಅಪಾಯಕಾರಿ: 
ಮೂತ್ರಪಿಂಡದ ಕಲ್ಲಿನ ಕಾಯಿಲೆ ಹೊಂದಿದ್ದರೆ ಅಂತಹವರು ಕೆಲವು ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಅದರಲ್ಲೂ ಆಕ್ಸಲೇಟ್ಸ್ ಸಮೃದ್ಧವಾಗಿರುವ ಹಣ್ಣುಗಳನ್ನು ತಪ್ಪಿಯೂ ತಿನ್ನಬಾರದು ಎಂದು ಹೇಳಲಾಗುತ್ತದೆ.  ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಸ್ಟ್ರಾಬೆರಿ, ಬ್ಲೂಬೆರ್ರಿ, ದಾಳಿಂಬೆ, ಸೀಬೆಹಣ್ಣು ಮತ್ತು ಡ್ರೈ ಫ್ರೂಟ್ಸ್ ಗಳನ್ನು ತಿನ್ನದೇ ಇರುವುದು ಉತ್ತಮ ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.