Corn silk benefits: ಜೋಳ ಮಾತ್ರ ಅಲ್ಲ ಅದರ ನಾರು ಕೂಡಾ ಈ ಐದು ರೋಗಗಳಿಗೆ ರಾಮಬಾಣ !
Amazing health benefits of corn silk: ಜೋಳದ ಕಾಳುಗಳನ್ನು ಬೇಯಿಸುವಾಗ ನಾವು ಅದರ ನಾರನ್ನು ಎಸೆಯುತ್ತೇವೆ. ಆದರೆ ಜೋಳ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಅದರ ಕೂದಲು ಅಥವಾ ನಾರು ಕೂಡಾ ಅಷ್ಟೇ ಲಾಭದಯಕವಾಗಿದೆ.
Benefits of corn silk for health : ಜೋಳವು ದೇಸಿ ಆಹಾರವಾಗಿದ್ದು, ಇದರ ರುಚಿ ಅನೇಕರಿಗೆ ಇಷ್ಟವಾಗುತ್ತದೆ. ನಮ್ಮಲ್ಲಿ ಇದನ್ನು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ ಅಥವಾ ಬೇಯಿಸಿ ತಿನ್ನುತ್ತಾರೆ. ಜೋಳದ ಧಾನ್ಯಗಳು ಫೈಬರ್, ವಿಟಮಿನ್ ಸಿ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿವೆ. ಹಾಗಾಗಿಯೇ ಇದನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಜೋಳದ ಕಾಳುಗಳನ್ನು ಬೇಯಿಸುವಾಗ ನಾವು ಅದರ ನಾರನ್ನು ಎಸೆಯುತ್ತೇವೆ. ಆದರೆ, ಜೋಳ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಅದರ ಕೂದಲು ಅಥವಾ ನಾರು ಕೂಡಾ ಅಷ್ಟೇ ಲಾಭದಯಕವಾಗಿದೆ.
ಜೋಳದ ನಾರಿನ ಆರೋಗ್ಯ ಪ್ರಯೋಜನಗಳು :
1.ಕೊಲೆಸ್ಟ್ರಾಲ್ ಕರಗುತ್ತದೆ :
ಪ್ರಸ್ತುತ ಕಾಲದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದು ದೊಡ್ಡ ಸಮಸ್ಯೆಯಾಗಿದೆ. ಅದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಹೃದ್ರೋಗದ ಅಪಾಯವನ್ನು ಎದುರಿಸಬೇಕಾಗುತ್ತದೆ. ಜೋಳದ ನಾರನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿರುವ ಕೊಲೆಸ್ಟ್ರಾಲ್ ಕರಗಲು ಆರಂಭವಾಗುತ್ತದೆ.
ಇದನ್ನೂ ಓದಿ : ನೋಡುವುದಕ್ಕೆ ವಿಚಿತ್ರವಾಗಿ ಕಂಡರೂ ಈ ಐದು ರೋಗಗಳಿಗೆ ದಿವ್ಯೌಷಧಿ ಈ ಹಣ್ಣು !
2.ಮಧುಮೇಹ ನಿಯಂತ್ರಣ :
ಕಾರ್ನ್ ಸಿಲ್ಕ್ ಮಧುಮೇಹದಿಂದ ಬಳಲುತ್ತಿರುವವರಿಗೆ ವರದಾನವೇ ಸರಿ. ಇವುಗಳು ಮಧುಮೇಹವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತದೆ ಎಂದು ಹೇಳಲಾಗುತ್ತದೆ.
3. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ :
ಕರೋನಾ ಅವಧಿಯಿಂದಲೂ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಎಲ್ಲರೂ ಹೆಚ್ಚಿನ ಗಮನ ನೀಡುತ್ತಾರೆ. ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದರೆ ಸೋಂಕಿನ ಅಪಾಯವನ್ನು ತಪ್ಪಿಸಬಹುದು. ಜೋಳದ ನಾರಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
4.ಜೀರ್ಣಕ್ರಿಯೆ ಸುಧಾರಿಸುತ್ತದೆ :
ಹೊಟ್ಟೆಯ ತೊಂದರೆಯಿಂದ ಬಳಲುತ್ತಿರುವವರು ಜೋಳದ ಕೂದಲು ಅಥವಾ ನಾರು ಸೇವಿಸುವುದು ಮುಖ್ಯ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಕಂಡು ಬರುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಹಾಯಕವಾಗಿದೆ.
ಇದನ್ನೂ ಓದಿ : Nighttime Nutrition Alert: ಊಟ ಮಾಡಿ ಮಲಗುವ ಮೊದಲು ಈ ಹಣ್ಣುಗಳನ್ನು ತಿನ್ನಬಾರದು!
5.ಗರ್ಭಿಣಿಯರಿಗೆ ಅನುಕೂಲ :
ಗರ್ಭಿಣಿಯರು ಕಾರ್ನ್ ಫೈಬರ್ ಅನ್ನು ಸೇವಿಸಬೇಕು. ಏಕೆಂದರೆ ಅದರಲ್ಲಿ ಫೋಲಿಕ್ ಆಮ್ಲ ಕಂಡುಬರುತ್ತದೆ. ಇದು ಗರ್ಭಿಣಿ ಮತ್ತು ಹೊಟ್ಟೆಯಲ್ಲಿರುವ ಮಗುವಿಗೆ ಪ್ರಯೋಜನಕಾರಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.