ಏನಿದು 6 ಮಿನಿಟ್ ವಾಕ್ ಟೆಸ್ಟ್ ? ಕರೋನಾ ಸೋಂಕಿತರಿಗೆ ಏನು ಪ್ರಯೋಜನ?
ಕರೋನಾ ವೈರಸ್ ಸೋಂಕು ಶ್ವಾಸಕೋಶದ ಮೇಲೆ ಎಷ್ಟರ ಮಟ್ಟಿಗೆ ಹೇಗೆ ಪರಿಣಾಮ ಬೀರಿದೆ ಎನ್ನುವುದನ್ನು ಕಂಡು ಹಿಡಿಯಲು ಈ ವಾಕ್ ಟೆಸ್ಟ್ ನೆರವಾಗುತ್ತದೆ. ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಪುಣೆಯಲ್ಲಿ, ಹೋಂ ಐಸೋಲೇಶನ್ ನಲ್ಲಿರುವ ರೋಗಿಗಳಿಗೆ ದಿನಕ್ಕೆ ಎರಡು ಬಾರಿ ಈ 6 ಮಿನಿಟ್ ವಾಕ್ ಟೆಸ್ಟ್ ಮಾಡುವಂತೆ ಸೂಚಿಸಲಾಗಿದೆ.
ನವದೆಹಲಿ : ಕರೋನಾ (Coronavirus) ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ (Hospital) ಹಾಸಿಗೆಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರೂ ಆಮ್ಲಜನಕ (Oxygen) ಪೂರೈಕೆಯಾಗುತ್ತಿಲ್ಲ ಎಂಬ ದೂರು. ಆಮ್ಲಜನಕದ ಕೊರತೆಯಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಕರೋನಾ ಸೋಂಕಿತರ ದೇಹದ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು 6 ಮಿನಿಟ್ ವಾಕ್ ಟೆಸ್ಟ್ (6 Minut walk test) ಮಾಡಲು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಿದ್ದಾರೆ.
6 ನಿಮಿಷಗಳ ವಾಕ್ ಟೆಸ್ಟ್ ನಿಂದ ಶ್ವಾಸಕೋಶದ ಸ್ಥಿತಿಯನ್ನು ತಿಳಿಯಬಹುದಾಗಿದೆ :
ಕರೋನಾ ವೈರಸ್ (Coronavirus) ಸೋಂಕು ಶ್ವಾಸಕೋಶದ ಮೇಲೆ ಎಷ್ಟರ ಮಟ್ಟಿಗೆ ಹೇಗೆ ಪರಿಣಾಮ ಬೀರಿದೆ ಎನ್ನುವುದನ್ನು ಕಂಡು ಹಿಡಿಯಲು ಈ ವಾಕ್ ಟೆಸ್ಟ್ ನೆರವಾಗುತ್ತದೆ. ಮಹಾರಾಷ್ಟ್ರದ (Maharastra) ಕೊಲ್ಹಾಪುರ ಮತ್ತು ಪುಣೆಯಲ್ಲಿ, ಹೋಂ ಐಸೋಲೇಶನ್ ನಲ್ಲಿರುವ (Isolation) ರೋಗಿಗಳಿಗೆ ದಿನಕ್ಕೆ ಎರಡು ಬಾರಿ ಈ 6 ಮಿನಿಟ್ ವಾಕ್ ಟೆಸ್ಟ್ ಮಾಡುವಂತೆ ಸೂಚಿಸಲಾಗಿದೆ. ಇದರಿಂದ ಶ್ವಾಸಕೋಶ (Lungs) ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದನ್ನೂ ಕೂಡಾ ಕಂಡುಹಿಡಿಯಬಹುದಾಗಿದೆ.
ಇದನ್ನೂ ಓದಿ : ಬಿಸಿಲ ಝಳಕ್ಕೆ ಕಾಯಿ ಮಾವಿನ ಜ್ಯೂಸ್ ಕುಡಿಯಿರಿ. ತುಂಬಾ ಸಿಂಪಲ್, ಆರೋಗ್ಯಕ್ಕೂ ಹಿತಕಾರಿ
ಏನಿದು 6 ಮಿನಿಟ್ ವಾಕ್ ಟೆಸ್ಟ್ :
ವೈದ್ಯರ ಪ್ರಕಾರ, ಹೋಂ ಐಸೋಲೇಶನ್ ನಲ್ಲಿರುವ ರೋಗಿಗಳು ಕಾಲಕಾಲಕ್ಕೆ ತಮ್ಮ ದೇಹದ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುತ್ತಿರಬೇಕು. ಈ ಆಮ್ಲಜನಕದ ಮಟ್ಟವನ್ನು ಕಂಡುಹಿಡಯಲು 6 ಮಿನಿಟ್ ವಾಕ್ ಟೆಸ್ಟ್ ಸಹಾಯ ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಐಸೋಲೇಶನ್ ನಲ್ಲಿರುವ ರೋಗಿಗಳು ಮೊದಲು ಆಕ್ಸಿಮಿಟರ್ ನ (Pulse Oximeter) ಸಹಾಯದಿಂದ ಆಕ್ಸಿಜನ್ ಲೆವೆಲ್ ಪರೀಕ್ಷಿಸಬೇಕು. ಈ ಸಂದರ್ಭದಲ್ಲಿ ನೆನಪಿರಲಿ ದೇಹದ ಆಕ್ಸಿಜನ್ ಲೆವೆಲ್ 93 %ಕ್ಕಿಂತ ಕಡಿಮೆ ಇರಬಾರದು. ಇದಾದ ಮೇಲೆ ಕೋಣೆಯೊಳಗೆ 6 ನಿಮಿಷಗಳವರೆಗೆ ವಾಕಿಂಗ್ ಮಾಡಬೇಕು. 6 ನಿಮಿಷಗಳ ವಾಕ್ ಮುಗಿದ ನಂತರ ಮತ್ತೆ ದೇಹದ Oxygen saturation level ಪರೀಕ್ಷೆ ಮಾಡಬೇಕು. ಈಗ ವಾಕಿಂಗ್ ಗಿಂತ ಮೊದಲು ಪರೀಕ್ಷಿಸಿದ ಆಮ್ಲಜನಕ ಮಟ್ಟ ಮತ್ತು ವಾಕಿಂಗ್ ನಂತರದ ಆಕ್ಸಿಜನ್ ಲೆವೆಲ್ ಅನ್ನು ಹೋಲಿಸಿ ನೋಡಿ. ಈ ಸಂದರ್ಭದಲ್ಲಿ ಮೊದಲ ರೀಡಿಂಗಿಗಿಂತ ಎರಡನೇ ರಿಡೀಂಗ್ ನಲ್ಲಿ 3 %ಕ್ಕಿಂತ ಹೆಚ್ಚು ಕುಸಿತ ದಾಖಲಾಗಿರಬಾರದು. ಒಂದು ವೇಳೆ ಹಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಹೋಂ ಐಸೋಲೇಶನ್ ನಲ್ಲಿರುವವರು ದಿನಕ್ಕೆ 2ರಿಂದ 3 ಬಾರಿ ಟೆಸ್ಟ್ ಮಾಡುತ್ತಿರಬೇಕು :
ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು, ರೋಗಿಯು ದಿನದಲ್ಲಿ 2ರಿಂದ 3 ಬಾರಿ ಈ ಪರೀಕ್ಷೆಯನ್ನು ಮಾಡಬೇಕು. ವೈದ್ಯರ ಪ್ರಕಾರ, Mild symptoms ಹೊಂದಿರುವವರು ಕೂಡಾ ಆಮ್ಲಜನಕದ ಮಟದಟವನ್ನು ಪರೀಕ್ಷಿಸುತ್ತಿರಬೇಕು. ಯಾಕೆಂದರೆ ಒಂದು ಸಲ ದೇಹದ ಆಮ್ಲಜನಕದ ಮಟ್ಟ ಕುಸಿದರೆ ನಂತರ ಪರಿಸ್ಥಿತಿ ಗಂಭೀರವಾಗುತ್ತದೆ. ಕರೋನಾ ಸೋಂಕು (COVID-19) ತಗುಲಿದ 5ನೇ ದಿನದಿಂದ 12 ದಿನಗಳವರೆಗೆ ಪ್ರತಿ ದಿನ ದೇಹದ ಆಕ್ಸಿಜನ್ ಲೆವೆಲ್ ಕಂಡು ಹಿಡಿಯುತ್ತಿರಬೇಕು.
ಇದನ್ನೂ ಓದಿ : Steam ಪಡೆಯುವುದರಿಂದ ಕರೋನಾದಿಂದ ರಕ್ಷಣೆ ಪಡೆಯಬಹುದೇ? ಇಲ್ಲಿದೆ ಸತ್ಯಾಸತ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.