ಕರೋನಾ ಮೂರನೇ ಅಲೆಯ ಭಯ.! ಮಹಾರಾಷ್ಟ್ರ ಸರ್ಕಾರ ಮಾಡುತ್ತಿರುವುದೇನು ಗೊತ್ತಾ..?

ಮುಂಬಯಿಯಲ್ಲಿ ಮಾತನಾಡಿದ  ಆರೋಗ್ಯ ಸಚಿವ ರಾಜೇಶ್ ಟೋಪೆ  ಮಹಾರಾಷ್ಟ್ರದಲ್ಲಿ ಕರೋನಾ ಮೂರನೇ ಅಲೆ ಅಪ್ಪಳಿಸುವ  ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಈ ಕುರಿತು ತಜ್ಞರ  ಹೇಳಿಕೆಯ ಆಧಾರ ನೀಡಿದ ಸಚಿವ ಟೊಪೆ ಜುಲೈ ಅಥವಾ ಆಗಸ್ಟ್ ನಲ್ಲಿ ಮೂರನೇ ಅಲೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.   

Written by - Ranjitha R K | Last Updated : Apr 30, 2021, 09:17 AM IST
  • ಕರೋನಾ ಮೂರನೇ ಅಲೆ ಅಪ್ಪಳಿಸುವ ಅಪಾಯದಲ್ಲಿ ಮಹಾರಾಷ್ಟ್ರ
  • ಈಗಾಗಲೇ ಸಿದ್ದರೆ ಆರಂಭಿಸಿರುವ ಉದ್ದವ್ ಠಾಕ್ರೆ ಸರ್ಕಾರ
  • ಆಮ್ಲಜನಕದ ಸಂಗ್ರಹಕ್ಕೆ ಕಟ್ಟುನಿಟ್ಟಿನ ಸೂಚನೆ
ಕರೋನಾ ಮೂರನೇ ಅಲೆಯ ಭಯ.! ಮಹಾರಾಷ್ಟ್ರ ಸರ್ಕಾರ ಮಾಡುತ್ತಿರುವುದೇನು ಗೊತ್ತಾ..? title=
ಕರೋನಾ ಮೂರನೇ ಅಲೆ ಅಪ್ಪಳಿಸುವ ಅಪಾಯದಲ್ಲಿ ಮಹಾರಾಷ್ಟ್ರ (photo Zee news)

ಮುಂಬಯಿ : ಕರೋನಾ (Coronavirus) ರಕ್ಕಸ ಮಹಾಮಾರಿಯ  ಸುಂಟರಗಾಳಿಗೆ ತತ್ತರಿಸಿ ಹೋಗಿರುವ ಮಹಾರಾಷ್ಟ್ರ ಇದೀಗ ಮೂರನೇ ಅಲೆಯ  ಅಪಾಯ ಎದುರಿಸುತ್ತಿದೆ. ಕರೋನಾ ರಕ್ಕಸನ ಆರ್ಭಟಕ್ಕೆ ಸಂಪೂರ್ಣ ಮಹಾರಾಷ್ಟ್ರವೇ ತತ್ತರಿಸಿಹೋಗಿದೆ. ವಾಣಿಜ್ಯ ರಾಜಧಾನಿ ಮುಂಬಯಿ (Mumbai) ನಲುಗಿ ಹೋಗಿದೆ. ಈ ನಡುವೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ (Rajesh Tope) ದಿಗಿಲು ಹುಟ್ಟಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ.

ಮಹಾರಾಷ್ಟ್ರ  ಆರೋಗ್ಯ ಸಚಿವರು ಹೇಳಿದ್ದೇನು..?
ಮುಂಬಯಿಯಲ್ಲಿ ಮಾತನಾಡಿದ  ಆರೋಗ್ಯ ಸಚಿವ ರಾಜೇಶ್ ಟೋಪೆ (Rajesh Tope) ಮಹಾರಾಷ್ಟ್ರದಲ್ಲಿ ಕರೋನಾ ಮೂರನೇ ಅಲೆ ಅಪ್ಪಳಿಸುವ  ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಈ ಕುರಿತು ತಜ್ಞರ  ಹೇಳಿಕೆಯ ಆಧಾರ ನೀಡಿದ ಸಚಿವ ಟೊಪೆ ಜುಲೈ ಅಥವಾ ಆಗಸ್ಟ್ ನಲ್ಲಿ ಮೂರನೇ ಅಲೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.  ಅದರಿಂದ ಬಚಾವ್ ಆಗುವ  ಎಲ್ಲಾ ತಂತ್ರಗಳನ್ನು ಈಗಾಗಲೇ ಅಳವಡಿಸಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ (Maharastra) ಸರ್ಕಾರ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Coronavirus: Covishield ಬಳಿಕ ಇದೀಗ Covaxin ದರದಲ್ಲಿಯೂ ಇಳಿಕೆಯ ಘೋಷಣೆ ಮಾಡಿದ ಭಾರತ್ ಬಯೋಟೆಕ್

ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಉದ್ಧವ್ ಠಾಕ್ರೆ :
ಮುಂಬರುವ ಆಪತ್ತಿನ ಮುನ್ಸೂಚನೆ ಪಡೆದಿರುವ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕರೋನಾ (Coronavirus) ಸಂಕ್ರಮಣ ತಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆಮ್ಲಜನಕದ (Oxygen) ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಅಂತಹ ಸಮಸ್ಯೆ ಎದುರಾದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ. ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಆಮ್ಲಜನಕ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಲಸಿಕೆ ಅಭಿಯಾನ ವಿಳಂಬ :
ಮೇ 1 ರಿಂದ 18 ವರ್ಷ ಮೇಲ್ಪಟ್ಟ ವಯೋವರ್ಗದವರಿಗೆ ಲಸಿಕೆ ನೀಡುವ ಅಭಿಯಾನ ಕೊಂಚ ವಿಳಂಬವಾಗಲಿದೆ ಎಂದು ರಾಜೇಶ್ ಟೋಪೆ ಹೇಳಿದ್ದಾರೆ.  ರಾಜ್ಯದಲ್ಲಿ ಈಗ ವ್ಯಾಕ್ಸಿನ್ (Vaccine) ಸ್ಟಾಕ್ ಇಲ್ಲ. ವ್ಯಾಕ್ಸಿನೇಶನ್ ಶುರು ಮಾಡಲು 20 ರಿಂದ 30 ಲಕ್ಷ ವ್ಯಾಕ್ಸಿನ್ ಡೋಸ್ ಬೇಕು. ಅಷ್ಟೊಂದು ಡೋಸ್ ರಾಜ್ಯಕ್ಕೆ ಸಿಕ್ಕಿಲ್ಲ. ವ್ಯಾಕ್ಸಿನೇಶನ್ (Vaccination) ನಾಲ್ಕರಿಂದ ಐದು ದಿನ ವಿಳಂಬವಾಗಲಿದೆ ಎಂದು ಟೋಪೆ ಹೇಳಿದ್ದಾರೆ.

ಇದನ್ನೂ ಓದಿ : ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಶರೀರದಲ್ಲಿ ವ್ಯಾಕ್ಸಿನ್ ಕೆಲಸ ಮಾಡುತ್ತಿದೆ ಎಂದರ್ಥ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News