ನವದೆಹಲಿ : Fruits Eating Tips : ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಣ್ಣುಗಳ ಸೇವೆನೆ ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಎನ್ನುವುದು ಕೂಡಾ ಎಲ್ಲರಿಗೂ ಗೊತ್ತು. ಹಣ್ಣುಗಳು ಆರೋಗ್ಯವಂತ ವ್ಯಕ್ತಿಗೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ, ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ (Fruit eating time) ಯಾವುದು ಎಂದು ನಿಮಗೆ ತಿಳಿದಿದೆಯೇ? ಅನೇಕ ಜನರಿಗೆ ಸಂಜೆ ಅಥವಾ ಊಟದ ನಂತರ ಹಣ್ಣುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಯಾವುದೋ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವ ಬದಲು ಹಾನಿಯಾಗುವುದೇ ಹೆಚ್ಚು.  


COMMERCIAL BREAK
SCROLL TO CONTINUE READING

ಹಣ್ಣುಗಳನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿ (Fruits on empty stamoch) ತಿನ್ನಬೇಕು. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸಿದರೆ, ಅದು ಸುಲಭವಾಗಿ ಜೀರ್ಣವಾಗುತ್ತದೆ. ಹಣ್ಣುಗಳನ್ನು ಯಾವಾಗಲೂ ಊಟ ಮಾಡುವ ಅರ್ಧ ಗಂಟೆ ಮೊದಲೇ ತಿನ್ನಬೇಕು.ಅಥವಾ ಊಟ ಮಾಡಿದ ನಂತರ ಕಡಿಮೆ ಅಂದರೂ, ಒಂದು ಗಂಟೆಯ ನಂತರ ಹಣ್ಣು ಸೇವಿಸಬೇಕು. ಇಲ್ಲದಿದ್ದರೆ ಜೀರ್ಣಕ್ರಿಯೆ ಮತ್ತು ಆಸಿಡಿಟಿ (Acidity) ಸಮಸ್ಯೆ ಎದುರಾಗುತ್ತದೆ.  


ಇದನ್ನೂ ಓದಿ :Badam Oil For Dark Circles: ಡಾರ್ಕ್ ಸರ್ಕಲ್ ನಿವಾರಣೆಗಾಗಿ ಬಾದಾಮಿ ಎಣ್ಣೆಯನ್ನು ಈ ರೀತಿ ಬಳಸಿ


ಬೆಳಿಗ್ಗೆ ಹಣ್ಣುಗಳ ಸೇವನೆಯು ಆರೋಗ್ಯ ಮತ್ತು ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ (Benefits of fruits). ಆದರೆ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು ಎನುವುದನ್ನು ಕೂಡಾ ನೆನಪಿನಲ್ಲಿಟ್ಟುಕೊಳ್ಳಬೇಕು.  ಹೌದು, ಸಿಟ್ರಿಕ್ ಅಂದರೆ ಸಿಟ್ರಸ್ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಸಿಡಿಟಿ ಸಮಸ್ಯೆ  ಹೆಚ್ಚಾಗಬಹುದು.  


ಸಂಜೆಯ ವೇಳೆ, ದೇಹದ ಚಯಾಪಚಯವು ನಿಧಾನವಾಗುವುದರಿಂದ ಹಣ್ಣುಗಳನ್ನು ಸಂಜೆ ತಿನ್ನಬಾರದು. ಹಣ್ಣುಗಳು ತಿಂದ ತಕ್ಷಣ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಏಕೆಂದರೆ, ಅವುಗಳಲ್ಲಿ ಸಿಂಪಲ್ ಕಾರ್ಬೋಹೈಡ್ರೇಟ್‌ಗಳು ಮತ್ತು ಡೈರೆಕ್ಟ್ ಶುಗರ್ (Direct sugar) ಕೂಡಾ ಇರುತ್ತೆ. ಯಾವಾಗ ದೇಹದ ಚಯಾಪಚಯವು ನಿಧಾನವಾಗುತ್ತದೆಯೋ ಆ ಸಂದರ್ಭದಲ್ಲಿ ಸಿಂಪಲ್ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಒಳ್ಳೆಯದಲ್ಲ.


ಇದನ್ನೂ ಓದಿ : Coffee Face Pack: ಕಾಫಿ ಪುಡಿಯ ಸಹಾಯದಿಂದ ಚರ್ಮದ ಹಲವು ಸಮಸ್ಯೆಗಳಿಗೆ ಹೇಳಿ ಬೈ, ಬೈ


ನಿಮ್ಮ ರುಚಿಗೆ ತಕ್ಕಂತೆ ಹಣ್ಣುಗಳನ್ನು ಆರಿಸಿ. ನಿಮಗೆ ನೆಗಡಿ ಇದ್ದರೆ ಬಾಳೆಹಣ್ಣು (Banana), ಕಿತ್ತಳೆ, ಅನಾನಸ್ ಮುಂತಾದ ಹಣ್ಣುಗಳನ್ನು ಹೆಚ್ಚು ತಿನ್ನಬೇಡಿ. ಮತ್ತೊಂದೆಡೆ, ನಿಮ್ಮ ದೇಹ ಪ್ರವೃತಿ ಹೀಟ್ ಆಗಿದ್ದರೆ ಕೂಡಾ, ಮಾವು (Mango) ಮತ್ತು ಪಪ್ಪಾಯದಂತಹ ಹಣ್ಣುಗಳ ಬಳಕೆಯನ್ನು ಕಡಿಮೆ ಮಾಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ