ಬೆಂಗಳೂರು : ಮಧುಮೇಹ ಜೀವನ ಪರ್ಯಂತ ಕಾಡುವ ಕಾಯಿಲೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧುಮೇಹ ರೋಗಿಗಳು ಆಹಾರವನ್ನು ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರ ವಹಿಸಬೇಕು. ಮಾತ್ರವಲ್ಲ ಮಧುಮೇಹವನ್ನು ನಿಯಂತ್ರಿಸಬಲ್ಲ ಆಹಾರವನ್ನು ಬಳಸಬೇಕು. ಬೇಕಾ ಬಿಟ್ಟಿ ಆಹಾರ ಸೇವಿಸಿದರೆ ಶುಗರ್ ಲೆವೆಲ್ ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ.  ಹೀಗಾದಾಗ ಡಯಾಬಿಟೀಸ್ ಜೊತೆಗೆ ಇನ್ನೂ ಅನೇಕ ರೋಗಗಳು ಕಾಡಲು ಆರಂಭಿಸುತ್ತವೆ.  ಮಧುಮೇಹ ಮತ್ತು ಕೊಲೆಸ್ಟ್ರಾಲ್‌ಗೆ ನಿಕಟ ಸಂಬಂಧವಿದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಮಧುಮೇಹ, ಅಧಿಕ ರಕ್ತದೊತ್ತಡ, ಪರಿಧಮನಿಯ ಕಾಯಿಲೆ ಮತ್ತು ಹೃದಯಾಘಾತದಂತಹ ಅಪಾಯಕಾರಿ ಕಾಯಿಲೆಗಳ ಅಪಾಯ ಕೂಡಾ ಹೆಚ್ಚಾಗುತ್ತದೆ. ಆದ್ದರಿಂದ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಬೆಂಡೆ ಕಾಯಿ ಮಧುಮೇಹ ಮತ್ತು ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ರಾಮ ಬಾಣ : 
ಭಾರತದ ಪ್ರಸಿದ್ಧ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್  ಪ್ರಕಾರ, ಬೆಂಡೆಕಾಯಿ ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್‌ಗೆ ಚಿಕಿತ್ಸೆಯಾಗಿ ಬಳಸಬಹುದು.  ಬೆಂಡೆಕಾಯಿ  ಕೊಲೆಸ್ಟ್ರಾಲ್ ಮತ್ತು ಮಧುಮೇಹ ಎರಡೂ ಕಾಯಿಲೆಗಳ ಮೇಲೆ ಪ್ರಹಾರ ಮಾಡಬಹುದಾದ ತರಕಾರಿಯಾಗಿದೆ. 


ಇದನ್ನೂ ಓದಿ : Monsoon Food Tips : ಮಳೆಗಾಲದಲ್ಲಿ ಹುಳಿ ಪದಾರ್ಥ ಸೇವನೆ ಆರೋಗ್ಯಕ್ಕೆ ಎಷ್ಟು ಲಾಭ? ಇಲ್ಲಿದೆ ನೋಡಿ


ಬೆಂಡೆಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು :
ಬೆಂಡೆಕಾಯಿ ಒಂದು ಆರೋಗ್ಯಕರ ತರಕಾರಿ.  ಎಂದು ಪರಿಗಣಿಸಲಾಗುತ್ತದೆ, ಇದನ್ನು ಇಂಗ್ಲಿಷ್‌ನಲ್ಲಿ  ಓಕ್ರಾ ಮತ್ತು ಲೇಡೀಸ್ ಫಿಂಗರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನೀಸಿಯಮ್, ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಎಲ್ಲಾ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. 


[[{"fid":"248889","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ದೈನಂದಿನ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇರಿಸಿ :
ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬೇಕಾದರೆ ದೈನಂದಿನ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇರಿಸಿ. ಸಾಮಾನ್ಯವಾಗಿ ಈ ತರಕಾರಿಯನ್ನು ಹುಲಿ, ಪಲ್ಯ, ಈ ರೀಯಿಯಾಗಿ ಬಳಸಲಾಗುತ್ತದೆ.  ಆದರೆ ಬೆನ್ದೆಕಾಯಿಯನ್ನು ಕೆಳಗೆ ಹೇಳುವ ವಿಧಾನದಲ್ಲಿ ಸೇವಿಸಿದರೆ ಕೆಲವೇ ದಿನಗಳಲ್ಲಿ ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣಕ್ಕೆ ತರುತ್ತದೆ.  


ಇದನ್ನೂ ಓದಿ : ಈ ಮೂರು ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆ


ಈ ರೀತಿಯಾಗಿ ಬೆಂಡೆಕಾಯಿ  ತಿನ್ನಿರಿ : 
 4 ರಿಂದ 5 ಹಸಿ ಬೆಂಡೆಕಾಯಿ ತೆಗೆದುಕೊಂಡು ಅವುಗಳನ್ನು ಒಂದು ಲೋಟ ನೀರಿನಲ್ಲಿ ನೆನಸಿಡಿ. ರಾತ್ರಿಯಿಡೀ ನೆನೆಸಿಟ್ಟ ಬೆನ್ದೆಕಾಯಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಇದರೊಂದಿಗೆ ನೆನೆಸಿಟ್ಟ ನೀರನ್ನೂ ಕುಡಿಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಶೀಘ್ರದಲ್ಲೇ ಪರಿಣಾಮ ಕಾಣಿಸುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ