Weight Loss By Black Pepper: ಕರಿಮೆಣಸಿನಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ, ಹೇಗೆ ಇಲ್ಲಿ ತಿಳಿದುಕೊಳ್ಳಿ

Black Pepper Health Benefits - ಕರಿಮೆಣಸು ಒಂದಲ್ಲ ಹಲವು ಮಹತ್ವದ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಇದು ತೂಕವನ್ನು ಕಡಿಮೆ ಮಾಡುವುದರಿಂದ ಹಿಡಿದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವವರೆಗೆ ಎಲ್ಲಾ ರೀತಿಯ ಗುಣಗಳನ್ನು ಹೊಂದಿದೆ.  

Written by - Nitin Tabib | Last Updated : Jul 10, 2022, 10:21 PM IST
  • ಕರಿಮೆಣಸು ಒಂದಲ್ಲ ಹಲವು ಮಹತ್ವದ ಆರೋಗ್ಯಕರ ಲಾಭಗಳನ್ನು ಹೊಂದಿದೆ.
  • ಇದು ತೂಕವನ್ನು ಕಡಿಮೆ ಮಾಡುವುದರಿಂದ ಹಿಡಿದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವವರೆಗೆ ಎಲ್ಲಾ ರೀತಿಯ ಗುಣಗಳನ್ನು ಹೊಂದಿದೆ.
Weight Loss By Black Pepper: ಕರಿಮೆಣಸಿನಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ, ಹೇಗೆ ಇಲ್ಲಿ ತಿಳಿದುಕೊಳ್ಳಿ title=
Black Pepper Health Benefits

Black Pepper Health Benefits - ಕರಿಮೆಣಸು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಿಗುವ ಒಂದು ಸಾಮಾನ್ಯ ಸಾಂಬಾರ ಪದಾರ್ಥವಾಗಿದೆ, ಆದರೆ ಕರಿಮೆಣಸಿನಲ್ಲಿ ಒಂದಲ್ಲ ಹಲವಾರು ಮಹತ್ವದ ಆರೋಗ್ಯಕರ ಪ್ರಯೋಜನಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಒಂದು ವೇಳೆ ನೀವೂ ಕೂಡ ಕರಿಮೆಣಸಿನಿಂದ ದೂರ ಓಡಿಹೋಗುತ್ತಿದ್ದರೆ, ಇಂದೇ ಅದನ್ನು ಮಾರುಕಟ್ಟೆಯಿಂದ ಖರೀದಿಸಿ ಮತ್ತು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ. ಸ್ಥೂಲಕಾಯವನ್ನು ಕಡಿಮೆ ಮಾಡುವುದರಿಂದ ಹಿಡಿದು ಕೊಲೆಸ್ಟ್ರಾಲ್ ನಿಯಂತ್ರಣದವರೆಗೆ, ಕರಿಮೆಣಸು ಉಪಯುಕ್ತವಾಗಿದೆ. ಇದರ ಹೊರತಾಗಿ ಕರಿಮೆಣಸು ಯಾವ ಪ್ರಯೋಜನಗಳನ್ನು ಹೊಂದಿದೆ ತಿಳಿದುಕೊಳ್ಳೋಣ ಬನ್ನಿ.

ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ
ಕರಿಮೆಣಸು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ . ಅಂದರೆ, ಕರಿಮೆಣಸಿನೊಂದಿಗೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಮೂಲಕ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆಗೆ ಸಹಾಯ ಮಾಡುತ್ತದೆ
ಬದಲಾಗುತ್ತಿರುವ ಜೀವನಶೈಲಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸ್ಥೂಲಕಾಯ ಸಮಸ್ಯೆಯಿಂದ ತೊಂದರೆಗೊಳಗಾಗಿರುವುದು ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅದನ್ನುತಪ್ಪಿಸಲು, ನಿಮ್ಮ ಆಹಾರದಲ್ಲಿ ಕರಿಮೆಣಸನ್ನು ನೀವು ಸೇರಿಸಿಕೊಳ್ಳಬಹುದು. ನೀವು ಬೇಕಾದರೆ, ನಿಮ್ಮ ಚಹಾದಲ್ಲಿ ಕರಿಮೆಣಸು ಬೆರೆಸಿ ಕುಡಿಯಬಹುದು.

ಶೀತ ಮತ್ತು ಕೆಮ್ಮಿನಲ್ಲಿ ಪ್ರಯೋಜನಕಾರಿ
ಕರಿಮೆಣಸು ಶೀತ ಮತ್ತು ಕೆಮ್ಮಿನಲ್ಲೂ ತುಂಬಾ ಉಪಯುಕ್ತವಾಗಿದೆ. ಕರಿಮೆಣಸು ಹಲವು ಅಂಶಗಳಿಂದ ಸಮೃದ್ಧವಾಗಿದೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪೆಪ್ಪರಿನ್ ಎಂಬ ಪ್ರಮುಖ ಸಂಯುಕ್ತವನ್ನು ಹೊಂದಿದೆ, ಇದು ಶೀತ, ಕೆಮ್ಮು ಮತ್ತು ನೆಗಡಿಯಂತಹ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Blood Pressure ನಿಯಂತ್ರಣಕ್ಕೆ ಸಹಕಾರಿ ಪರಂಗಿ, ಇತರ ಲಾಭಗಳನ್ನು ತಿಳಿದುಕೊಳ್ಳಲು ವರದಿ ಓದಿ

ಕೀಲು ನೋವು ಕೂಡ ಕಡಿಮೆಯಾಗುತ್ತದೆ
ಕರಿಮೆಣಸು ಕೀಲುಗಳಲ್ಲಿನ ನೋವಿನ ದೂರುಗಳನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಕರಿಮೆಣಸಿನಲ್ಲಿ ಉರಿಯೂತ ನಿವಾರಕ ಅಂಶಗಳು ಕೂಡ ಕಂಡುಬರುತ್ತವೆ, ಇದು ಕೀಲು ನೋವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Heart Attack Risk: ಈ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಹೃದಯಾಘಾತದ ಅಪಾಯದಿಂದ ಪಾರಾಗಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News