Lemon peel chutney: ಸಾಮಾನ್ಯವಾಗಿ ನಮ್ಮ ರಕ್ತದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ ಕೀಲು ನೋವು ಮತ್ತು ಊತ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ನೋವು ಮತ್ತು ಊತವನ್ನು ಕಡಿಮೆ ಮಾಡಲು ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಯೂರಿಕ್ ಆಸಿಡ್ ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನವಾಗಿದೆ. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು ಆಹಾರಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಹಸಿರು ಎಲೆಯ ಒಂದು ಹನಿ ರಸ ಬ್ಲಡ್‌ ಶುಗರ್‌ ಅನ್ನು ನಿಮಿಷಗಳಲ್ಲಿ ನಿಯಂತ್ರಣಕ್ಕೆ ತರುವುದು!


ಯೂರಿಕ್ ಆಮ್ಲವನ್ನು ನಿಯಂತ್ರಿಸಲು ನಿಂಬೆ ಸಿಪ್ಪೆ ಚಟ್ನಿ:


ನಿಂಬೆಹಣ್ಣಿನ ಸಿಪ್ಪೆಯಲ್ಲಿ ಯೂರಿಕ್ ಆಸಿಡ್ ಕಡಿಮೆಗೊಳಿಸುವ ಗುಣಲಕ್ಷಣಗಳಿವೆ. ನಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿ ಉರಿಯೂತದ ಗುಣಲಕ್ಷಣಗಳಿವೆ, ಇದು ದೇಹದಲ್ಲಿ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ನಿಂಬೆ ಸಿಪ್ಪೆಯೊಂದಿಗೆ ತಯಾರಿಸಿದ ಚಟ್ನಿಯನ್ನು ಸೇವಿಸಬಹುದು.


ನಿಂಬೆ ಸಿಪ್ಪೆ ಚಟ್ನಿ ಮಾಡಲು ಬೇಕಾದ ಸಾಮಗ್ರಿಗಳು : 


ನಿಂಬೆ ಸಿಪ್ಪೆಗಳು - 1/2 ಕಪ್
ಜೀರಿಗೆ - 1/2 ಟೀಸ್ಪೂನ್
ಅರಿಶಿನ ಪುಡಿ - 1/2 ಟೀಸ್ಪೂನ್
ಸಕ್ಕರೆ - 1 ಟೀಸ್ಪೂನ್
ಉಪ್ಪು - 1/2 ಟೀಸ್ಪೂನ್
ಎಣ್ಣೆ - 1 ಸ್ಪೂನ್


ಇದನ್ನೂ ಓದಿ: High BP : ಈ ಕೆಂಪು ತರಕಾರಿ ಎಷ್ಟೇ ಹೈ ಬಿಪಿ ಇದ್ದರೂ ಕ್ಷಣದಲ್ಲೇ ಕಂಟ್ರೋಲ್‌ ಮಾಡುತ್ತೆ !


ನಿಂಬೆ ಸಿಪ್ಪೆ ಚಟ್ನಿ ಮಾಡುವ ವಿಧಾನ:


ನಿಂಬೆ ಸಿಪ್ಪೆಯ ಚಟ್ನಿ ತಯಾರಿಸಲು ಮೊದಲು 1 ಕಪ್ ನಿಂಬೆ ಸಿಪ್ಪೆಯನ್ನು ತೆಗೆದುಕೊಳ್ಳಿ. ಸಿಪ್ಪೆಯನ್ನು ಬಿಸಿ ನೀರಿನಲ್ಲಿ ಕುದಿಸಿ, ನಂತರ ಈ ನೀರನ್ನು ಸೋಸಿಕೊಳ್ಳಿ. ನಂತರ ಮಿಕ್ಸರ್ ಜಾರ್‌ನಲ್ಲಿ ಹಾಕಿ, ಉಪ್ಪು ಸೇರಿಸಿ ಮತ್ತು ರುಬ್ಬಿಕೊಳ್ಳಿ. ಈಗ ಬಾಣಲೆಯಲ್ಲಿ 1 ಚಮಚ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ. ನಂತರ ಅರಿಶಿನ, ಸಕ್ಕರೆ ಸೇರಿಸಿ ಚಟ್ನಿ ಹಾಕಿ ಹುರಿಯಿರಿ. 2 ನಿಮಿಷಗಳ ಕಾಲ ಕುದಿಸಿ. ಈಗ ನಿಂಬೆ ಹಣ್ಣಿನ ಚಟ್ನಿ ಸವಿಯಲು ಸಿದ್ಧ.


ಸೂಚನೆ: ಈ ಮಾಹಿತಿ ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಅಗತ್ಯ. ಜೀ ಕನ್ನಡ ನ್ಯೂಸ್‌ ಯಾವ ರೀತಿಯಲ್ಲೂ ಹೊಣೆಯಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.