High BP : ಈ ಕೆಂಪು ತರಕಾರಿ ಎಷ್ಟೇ ಹೈ ಬಿಪಿ ಇದ್ದರೂ ಕ್ಷಣದಲ್ಲೇ ಕಂಟ್ರೋಲ್‌ ಮಾಡುತ್ತೆ !

High BP Home Remedy : ಟೊಮೆಟೊಗಳಲ್ಲಿ ಜೀವಸತ್ವಗಳು, ಪೋಷಕಾಂಶಗಳು, ವಿಟಮಿನ್ ಸಿ, ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.

Written by - Chetana Devarmani | Last Updated : Jun 8, 2024, 12:52 PM IST
  • ಅಧಿಕ ರಕ್ತದೊತ್ತಡಕ್ಕೆ ಮನೆಮದ್ದು
  • ಆರೋಗ್ಯಕ್ಕೆ ಟೊಮೆಟೊ ವರದಾನ
  • ಪೊಟ್ಯಾಸಿಯಮ್‌ನಲ್ಲಿ ಸಮೃದ್ಧ ಟೊಮೆಟೊ
High BP : ಈ ಕೆಂಪು ತರಕಾರಿ ಎಷ್ಟೇ ಹೈ ಬಿಪಿ ಇದ್ದರೂ ಕ್ಷಣದಲ್ಲೇ ಕಂಟ್ರೋಲ್‌ ಮಾಡುತ್ತೆ ! title=

Tomato Health Benefits : ಟೊಮೆಟೊ ಎಲ್ಲರ ಅಡುಗೆಮನೆಗಳಲ್ಲಿ ಲಭ್ಯವಿರುವ ತರಕಾರಿಯಾಗಿದೆ. ಇದು ಕೆಂಪು ಬಣ್ಣದಲ್ಲಿದ್ದು ಹುಳಿಯಾಗಿರುತ್ತದೆ. ಟೊಮೆಟೊ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಟೊಮೆಟೊಗಳಲ್ಲಿ ಜೀವಸತ್ವಗಳು, ಪೋಷಕಾಂಶಗಳು, ವಿಟಮಿನ್ ಸಿ, ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೂ ಟೊಮೆಟೊ ವರದಾನವಾಗಿದೆ.

ಹೆಚ್ಚಿನ ಸೋಡಿಯಂ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ ಶುರುವಾಗುತ್ತದೆ. ಆದರೆ ಪೊಟ್ಯಾಸಿಯಮ್ ಭರಿತ ಆಹಾರಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡಬಹುದು. ಟೊಮೆಟೊ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದು ಬಿಪಿ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳು, ಲೈಕೋಪೀನ್ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಇದನ್ನೂ ಓದಿ: ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆ ಜೊತೆ ಬೆರೆಸಿ ಹಚ್ಚಿದರೆ.. ಬಿಳಿ ಕೂದಲು 10 ನಿಮಿಷದಲ್ಲಿ ಕಪ್ಪಾಗಿ, ರೇಷ್ಮೆಯ ನೂಲಿನಂತಾಗುವುದು!

ಟೊಮೆಟೊಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ನಮ್ಮ ಆರೋಗ್ಯಕ್ಕೆ ವರದಾನವಾಗಿದೆ ಮತ್ತು ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್, ಪೊಟ್ಯಾಸಿಯಮ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಇದು ಮಾರಣಾಂತಿಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ ಚರ್ಮಕ್ಕೆ ಆರೋಗ್ಯವನ್ನು ನೀಡುತ್ತದೆ.

ನಮ್ಮ ಆಹಾರದಲ್ಲಿ ಟೊಮೆಟೊ ಸೇವಿಸುವುದರಿಂದ ರುಚಿ ಮಾತ್ರವಲ್ಲದೇ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಲೈಕೋಪೀನ್ ಆಂಟಿ-ಕ್ಯಾಪ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಹೊಟ್ಟೆ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ತಡೆಯುತ್ತವೆ.

ಟೊಮೆಟೊ ಆರೋಗ್ಯಕರ ಖನಿಜಗಳನ್ನು ಹೊಂದಿರುತ್ತದೆ. ಫೈಬರ್, ಕೋಲೀನ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಕಾರಣ ಹೃದಯಕ್ಕೆ ಒಳ್ಳೆಯದು. ಲೈಕೋಪೀನ್ ನಮ್ಮ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ. ಬಿಪಿಯನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: ಕರಿಬೇವಿನ ಎಲೆಯನ್ನು ಹೀಗೆ ತಿಂದರೆ... ದೇಹದಲ್ಲಿ ಶೇಖರಣೆಯಾದ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ !

ಚರ್ಮದ ಆರೋಗ್ಯಕ್ಕಾಗಿ ಟೊಮೆಟೊವನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಮುಖ ಕಾಂತಿಯುತವಾಗುತ್ತದೆ. ಇದಲ್ಲದೆ ಟೊಮೆಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖಕ್ಕೆ ಹೊಳಪು ಬರುತ್ತದೆ. ಮುಖದ ಮೇಲಿನ ಮೊಡವೆಗಳನ್ನು ಹೋಗಲಾಡಿಸುತ್ತದೆ. ಮುಖದ ರಂಧ್ರಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ 

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News