Yellow chutney Recipe for uric Acid : ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟದಲ್ಲಿನ ಹೆಚ್ಚಳವು ಕೀಲುಗಳಲ್ಲಿ ನೋವು ಮತ್ತು ಊತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಬೇಕಾದರೆ ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಯೂರಿಕ್ ಆಮ್ಲ ಪ್ಯೂರಿನ್ ಎಂಬ ರಾಸಾಯನಿಕದ ವಿಭಜನೆಯಿಂದ ರೂಪುಗೊಳ್ಳುತ್ತದೆ. ಪ್ಯೂರಿನ್ ದೇಹದಲ್ಲಿ ಕಂಡುಬರುವ ನೈಸರ್ಗಿಕ ವಸ್ತುವಾಗಿದೆ. ಇವುಗಳು ಮಾಂಸ, ಮೀನು, ಮದ್ಯ ಇತ್ಯಾದಿ ಅನೇಕ ರೀತಿಯ ಆಹಾರ ಪದಾರ್ಥಗಳಲ್ಲಿಯೂ ಕಂಡುಬರುತ್ತವೆ. ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು, ಆಹಾರದ ಮೇಲೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಕೆಲವು ಆಹಾರಗಳನ್ನು ಸೇವಿಸುವುದು ಮುಖ್ಯವಾಗಿರುತ್ತದೆ. ದೇಹದ ಯೂರಿಕ್ ಆಸಿಡ್ ಮಟ್ಟವನ್ನು ರುಚಿಕರವಾದ ಚಟ್ನಿಯ ಸಹಾಯದಿಂದ ಕಡಿಮೆ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಯೂರಿಕ್ ಆಮ್ಲ ಕಡಿಮೆ ಮಾಡುವಲ್ಲಿ ನಿಂಬೆ ಸಿಪ್ಪೆಯ ಚಟ್ನಿ ಹೇಗೆ ಪ್ರಯೋಜನಕಾರಿ? :
ಸಂಧಿವಾತದಿಂದ ಬಳಲುತ್ತಿರುವ ಜನರಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವ ಗುಣವನ್ನು ನಿಂಬೆ ಸಿಪ್ಪೆಯು ಹೊಂದಿದೆ ಎನ್ನುವುದು ಅನೇಕ ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ. ನಿಂಬೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಇದು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದು ದೇಹದ ಊತ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಬಯಸಿದರೆ, ನಿಂಬೆ ಸಿಪ್ಪೆಯಿಂದ ಮಾಡಿದ ಚಟ್ನಿಯನ್ನು ಸೇವಿಸುವುದು ಆರೋಗ್ಯಕರವಾಗಿರುತ್ತದೆ. 


ಇದನ್ನೂ ಓದಿ : ನಮ್ಮ ಸಂತೋಷವನ್ನು ಹೆಚ್ಚಿಸುವ ಹಾರ್ಮೋನ್‌ಗಳು ಯಾವುವು? ಈ ಹ್ಯಾಪಿ ಹಾರ್ಮೋನ್‌ಗಳನ್ನು ಹೆಚ್ಚಿಸಲು ಏನು ಮಾಡಬೇಕು?


ಮನೆಯಲ್ಲಿ ನಿಂಬೆ ಸಿಪ್ಪೆಯ ಚಟ್ನಿ ಮಾಡುವುದು ಹೇಗೆ? :
ಚಟ್ನಿಗೆ ಬೇಕಾಗುವ ಅಗತ್ಯ ಪದಾರ್ಥಗಳು


-ನಿಂಬೆ ಸಿಪ್ಪೆಗಳು - 1/2 ಕಪ್
-ಜೀರಿಗೆ - 1/2 ಟೀಸ್ಪೂನ್
-ಅರಿಶಿನ - 1/2 ಟೀಸ್ಪೂನ್
-ಸಕ್ಕರೆ - 1 ಟೀಸ್ಪೂನ್
-ಉಪ್ಪು - 1/2 ಟೀಸ್ಪೂನ್
-ಎಣ್ಣೆ - 1 ಟೀಸ್ಪೂನ್


ಚಟ್ನಿ ಮಾಡುವ ವಿಧಾನ :
ನಿಂಬೆ ಸಿಪ್ಪೆಯ ಚಟ್ನಿ ಮಾಡಲು, ಮೊದಲು 1 ಕಪ್ ನಿಂಬೆ ಸಿಪ್ಪೆಯನ್ನು ತೆಗೆದುಕೊಳ್ಳಿ. ಈಗ ಇದನ್ನು ನೀರಿಗೆ ಹಾಕಿ ಸ್ವಲ್ಪ ಸಮಯ ಕುದಿಸಿ. ನಂತರ ಸಿಪ್ಪೆಯನ್ನು ನೀರಿನಿಂದ ಹೊರಗೆ ತೆಗೆಯಿರಿ. ಹೀಗೆ ಮಾಡುವುದರಿಂದ ನಿಂಬೆ ಸಿಪ್ಪೆಯ ಕಹಿಯನ್ನು ತೆಗೆದುಹಾಕುತ್ತದೆ. ನಂತರ, ಎಲ್ಲಾ ಮಸಾಲೆಗಳನ್ನು ಮಿಶ್ರಣ ಮಾಡಿ ನುಣ್ಣಗೆ ರುಬ್ಬಿಕೊಳ್ಳಿ. ಇಷ್ಟು ಮಾಡಿದರೆ ರುಚಿಕರವಾದ ಚಟ್ನಿ ಸಿದ್ಧವಾಗುತ್ತದೆ. 


ಇದನ್ನೂ ಓದಿ : Happiness Hormones: ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳನ್ನು ಹೆಚ್ಚಿಸುವ ಟಾಪ್ 5 ಆಹಾರಗಳಿವು!


ನಿಂಬೆ ಸಿಪ್ಪೆಯಿಂದ ತಯಾರಿಸಿದ ಚಟ್ನಿಯನ್ನು ಸೇವಿಸುವುದು ತುಂಬಾ ಆರೋಗ್ಯಕರವಾಗಿದೆ. ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ನಿಮ್ಮ ಸ್ಥಿತಿಯು ತುಂಬಾ ಗಂಭೀರವಾಗಿದ್ದರೆ,  ಆರೋಗ್ಯ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.