Bhoochakra Gadde: ವನವಾಸದಲ್ಲಿದ್ದಾಗ ಪ್ರಭು ಶ್ರೀ ರಾಮಚಂದ್ರ ಹಸಿವು ನೀಗಿಸಿಕೊಳ್ಳಲು ಸೇವಿಸಿದ್ದ ಈ ಭೂಚಕ್ರ ಗೆಡ್ಡೆ ಹಲವಾರು ಆರೋಗ್ಯಕರ ಪ್ರಯೋಜನ ಹೊಂದಿದೆ. ಉಷ್ಣ ಪ್ರದೇಶಗಳ ಪೊದೆಗಳಲ್ಲಿ ಬೆಳೆಯುವ ಈ ಅಪರೂಪದ ಸಸ್ಯವು ಭೂಮಿಯೊಳಗೆ ಐದಾರು ಅಡಿವರೆಗೂ ಬೇರುಬಿಟ್ಟಿರುತ್ತದೆ. ಸಿಹಿ ರುಚಿ ಹೊಂದಿರುವ ಈ ಗೆಡ್ಡೆಯ ಎಲೆ, ಹೂವು, ಕಾಂಡ ಆಯುರ್ವೇದದಲ್ಲಿ ಔಷಧವಾಗಿ ಬಳಕೆಯಾಗುತ್ತದೆ. ಇದರ ಸೇವನೆಯಿಂದ ದೇಹದ ಉಷ್ಣತೆ ನಿವಾರಣೆಯಾಗಿ ರಕ್ತವು ಶುದ್ಧಿಯಾಗುತ್ತದಂತೆ.
ತ್ರೇತ್ರಾಯುಗದಲ್ಲಿ ಶ್ರೀರಾಮನು ಅರಣ್ಯ ವಾಸದಲ್ಲಿದ್ದಾಗ ಸೀತೆ ಮತ್ತು ಲಕ್ಷ್ಮಣನ ಜೊತೆಗೂಡಿ ಈ ಭೂಚಕ್ರ ಗೆಡ್ಡೆಯನ್ನು ಸೇವಿಸುತ್ತಿದ್ದರಂತೆ. ಹನುಮಂತ ಹಾಗೂ ವಾನರ ಸೇನೆಗೂ ಸಹ ಈ ಭೂಚಕ್ರ ಗೆಡ್ಡೆ ಪ್ರಿಯ ಆಹಾರವಾಗಿತ್ತಂತೆ. ಹೇಮಕಂದ, ರಾಮಕಂದ, ನೆಲ ಸಕ್ರೆ ಗೆಡ್ಡೆ, ಭೂ ಚಕ್ರ ಗೆಡ್ಡೆ ಎಂದು ಕರೆಯಲ್ಪಡುವ ಈ ಕಂದಮೂಲ ಗೆಡ್ಡೆಗೆ ಆಂಗ್ಲ ಭಾಷೆಯಲ್ಲಿ Maerua oblongifolia(ಮೇರುವಾ ಆಬ್ಲೋಂಗಿಫೋಲಿಯಾ), Desert caper ಎಂದು, ಸಂಸ್ಕೃತ ಭಾಷೆಯಲ್ಲಿ ಮಧು ಸ್ರವ, ಮುರಹರಿ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Taming Diabetes: ಈ ಕಾಯಿಲೆ ಯುವಕರನ್ನೂ ಬಿಡುತ್ತಿಲ್ಲ, ಈ 5 ಉಪಾಯಗಳನ್ನು ಅನುಸರಿಸಿ ತಕ್ಷಣ ಅದನ್ನು ನಿಯಂತ್ರಿಸಿ!
ಕುರುಚಲು ಕಾಡುಗಳ ಮಧ್ಯೆ ಬೆಳೆಯುವ ಈ ಸಸ್ಯದ ಬೇರು ತಿನ್ನಲು ಯೋಗ್ಯವಾಗಿದ್ದು, ತೆಂಗಿನಕಾಯಿಯ ತಿರುಳಿನಂತಿರುತ್ತದೆ. ಆಯುರ್ವೇದದಲ್ಲಿ ಉಲ್ಲೇಖವಿರುವ ಔಷಧೀಯ ಗುಣ ಹೊಂದಿರುವ ಈ ಗೆಡ್ಡೆಯನ್ನು ಸಕ್ಕರೆಯೊಂದಿಗೆ ಸೇವಿಸಲಾಗುತ್ತದೆ. ಭಾರತ ಮೂಲದ ಈ ಭೂ ಚಕ್ರ ಗೆಡ್ಡೆ ಪೊದೆಯಾಕಾರದ ಮರಗಳ ಬುಡದಲ್ಲಿ ದೊರೆಯುತ್ತದೆ. ಇದರ ಮೂಲ ಭಾರತವಾದರೂ ಪಾಕಿಸ್ತಾನ, ಸೌದಿಅರೇಬಿಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಯ ರಾಜ್ಯಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತವೆ. ಮಹಾ ಕುಂಭ ಮೇಳದಲ್ಲಿ ರಾಮಕಂದ, ರಾಮ ಫಲವೆಂಬ ಹೆಸರುಗಳಿಂದ ಈ ಭೂಚಕ್ರ ಗೆಡ್ಡೆಯನ್ನು ಮಾರಲಾಗುತ್ತದೆ. ಹಿಂದೆ ಮಹರ್ಷಿಗಳು, ಋಷಿ ಮುನಿಗಳು ಕಂದಮೂಲ ಆಹಾರ (ಗೆಡ್ಡೆ-ಗೆಣಸು) ಸೇವಿಸುತ್ತಿದ್ದರಂತೆ. ಇಂತಹ ಗೆಡ್ಡೆಗಳಲ್ಲಿ ಭೂಚಕ್ರ ಗೆಡ್ಡೆ ಗಾತ್ರದಲ್ಲಿ ದೊಡ್ಡದು.
ಇದನ್ನೂ ಓದಿ: Body Detox Tips: ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಬೇಕೆ? ಇಲ್ಲಿವೆ ಕೆಲ ಮನೆಮದ್ದುಗಳು!
೮೦ರ ದಶಕದವರೆಗೂ ಈ ಭೂಚಕ್ರ ಗೆಡ್ಡೆಗಳನ್ನು ತಮಿಳುನಾಡು, ಆಂಧ್ರಪ್ರದೇಶ ಕಡೆಯಿಂದ ತಂದು ಸಂತೆ ಮತ್ತು ಜಾತ್ರೆಗಳಲ್ಲಿ ಮಾಡಲಾಗುತ್ತಿತ್ತು. ಆಗ ಕಡಿಮೆ ಬೆಲೆ ಒಂದು ಪೀಸ್‌ಅನ್ನು ಸಕ್ಕರೆ ಸವರಿ ಕೊಡುತ್ತಿದ್ದರಂತೆ. ಇದೀಗ ಒಂದು ಪೀಸ್‌ಗೆ ೧೦ ರೂ.ನಂತೆ ಮಾರಾಟ ಮಾಡಲಾಗುತ್ತದೆ.
ಭೂಚಕ್ರ ಗೆಡ್ಡೆಯ ಮರದ ಕಾಂಡ, ಎಲೆ, ಹೂವು, ಹಣ್ಣು ಆಯುರ್ವೇದ, ಸಿದ್ಧ ಹಾಗೂ ಪಾರಂಪರಿಕ ಚಿಕಿತ್ಸೆಗಳಲ್ಲಿ ಉಪಯೋಗಿಸುತ್ತದೆಯಂತೆ. ಭೂಚಕ್ರ ಗೆಡ್ಡೆಯ ಮರ ಬೆಳೆಯಲು ೧೦-೧೨ ವರ್ಷ ಬೇಕಾಗುತ್ತದೆ. ಭೂಮಿಯಿಂದ ಈ ಗೆಡ್ಡೆ ತೆಗೆಯಲು ಮರವನ್ನೇ ಕತ್ತರಿಸಬೇಕಾಗುತ್ತದಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.