ಸಂಧು ಸಂಧುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ಒಂದೇ ವಾರದಲ್ಲಿ ಕರಗಿಸುತ್ತದೆ ಈ ನೀರು ! ಈ ಸಮಯದಲ್ಲೇ ಸೇವಿಸಬೇಕು
How to control uric acid :ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ ಕೀಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.ಇದು ಅಸಹನೀಯ ನೋವು ನೀಡುತ್ತದೆ. ಈ ಒಂದು ಪಾನೀಯ ಯೂರಿಕ್ ಆಸಿಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
High Uric Acid Control :ಯೂರಿಕ್ ಆಸಿಡ್ ದೇಹದ ಸಾಮಾನ್ಯ ತ್ಯಾಜ್ಯವಾಗಿದೆ. ಪ್ಯೂರಿನ್ ಎಂಬ ರಾಸಾಯನಿಕದ ವಿಭಜನೆಯಿಂದಾಗಿ ಯೂರಿಕ್ ಆಸಿಡ್ ನಮ್ಮ ದೇಹದಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ.ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ,ಅದು ಸ್ಫಟಿಕಗಳ ರೂಪದಲ್ಲಿ ಕೀಲುಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಹೀಗಾದಾಗ ಕೀಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.ಇದು ಅಸಹನೀಯ ನೋವು ನೀಡುತ್ತದೆ.
ಯೂರಿಕ್ ಆಸಿಡ್ ನಿಯಂತ್ರಿಸುವುದು ಹೇಗೆ? :
ಯೂರಿಕ್ ಆಸಿಡ್ ನಿಂದ ಉಂಟಾಗುವ ನೋವನ್ನು ಕಡಿಮೆ ಮಾಡಬೇಕಾದರೆ ನಾವು ತೆಗೆದುಕೊಳ್ಳುವ ಆಹಾರದತ್ತ ಹೆಚ್ಚು ಗಮನಹರಿಸಬೇಕು.ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಈ ಒಂದು ಪಾನೀಯ ಯೂರಿಕ್ ಆಸಿಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಾವಿಲ್ಲಿ ಹೇಳುತ್ತಿರುವ ನಿಂಬೆ ನೀರಿನ ಬಗ್ಗೆ. ನಿಂಬೆ ನೀರು ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಆದರೆ, ಅದನ್ನು ಹೇಗೆ ಸೇವಿಸಬೇಕು ಎನ್ನುವುದು ತಿಳಿದಿರಬೇಕು.
ಇದನ್ನೂ ಓದಿ : ಹೈ ಬ್ಲಡ್ ಶುಗರ್ ಅನ್ನು ಕೂಡಾ ತಕ್ಷಣ ನಾರ್ಮಲ್ ಮಾಡುತ್ತದೆ ಈ ಚಟ್ನಿ!ಒಮ್ಮೆ ಟ್ರೈ ಮಾಡಿ ಸಾಕು !
ಯೂರಿಕ್ ಆಸಿಡ್ ನಿಯಂತ್ರಣಕ್ಕೆ ನಿಂಬೆ ನೀರು :
ಸಂಧಿವಾತದಿಂದ ಬಳಲುತ್ತಿರುವ ರೋಗಿಗಳಿಗೆ ನಿಂಬೆ ರಸವು ಪ್ರಯೋಜನಕಾರಿಯಾಗಿದೆ ಎಂದು ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಗೌಟ್‌ನಿಂದ ಬಳಲುತ್ತಿರುವ ರೋಗಿಗಳಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ನಿಂಬೆಯಲ್ಲಿ ಫ್ರಕ್ಟೋಸ್ ಮಟ್ಟವು ಸಾಕಷ್ಟು ಕಡಿಮೆಯಾಗಿರುತ್ತದೆ. ಫ್ರಕ್ಟೋಸ್ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಂಬೆ ರಸವು ಗೌಟ್ ಸ್ನೇಹಿ ಆಹಾರವಾಗಿದೆ. ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೂರಿಕ್ ಆಸಿಡ್ ಕಡಿಮೆ ಮಾಡಲು ನಿಂಬೆ ನೀರನ್ನು ಸೇವಿಸುವುದು ಹೇಗೆ? :
ಅಧಿಕ ಯೂರಿಕ್ ಆಸಿಡ್ ಕಡಿಮೆ ಮಾಡಲು ನಿಂಬೆ ನೀರನ್ನು ಸೇವಿಸಬೇಕು. ಹಾಗಂತ ಯಾವಾಗ ಬೇಕೋ ಆವಾಗ ನಿಂಬೆ ನೀರು ಸೇವಿಸಿದರೆ ಯೂರಿಕ್ ಆಸಿಡ್ ನಿಯಂತ್ರಿಸುವುದು ಸಾಧ್ಯವಿಲ್ಲ. ಬದಲಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಕುಡಿಯಬೇಕು.
ಇದನ್ನೂ ಓದಿ :Tea For diabetes: ಮಧುಮೇಹಿಗಳಿಗೆ ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ತುಂಬಾ ಪ್ರಯೋಜನಕಾರಿ ಈ 5 ಚಹಾ
ನಿಂಬೆ ನೀರನ್ನು ಹೀಗೆ ತಯಾರಿಸಿಕೊಳ್ಳಿ :
ಒಂದು ಪಾತ್ರೆಯಲ್ಲಿ ಸುಮಾರು 2 ರಿಂದ 3 ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಇದನ್ನು ಸ್ವಲ್ಪ ಉಗುರುಬೆಚ್ಚಗಾಗಿಸಿ. ನಂತರ ಅದರಲ್ಲಿ 1 ರಿಂದ 2 ನಿಂಬೆಹಣ್ಣಿನ ರಸವನ್ನು ಹಿಂಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.ಕೆಲವು ವಾರಗಳವರೆಗೆ ಈ ರೀತಿ ನಿಂಬೆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.