Tea For diabetes: ಮಧುಮೇಹಿಗಳಿಗೆ ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ತುಂಬಾ ಪ್ರಯೋಜನಕಾರಿ ಈ 5 ಚಹಾ

Tea For Diabetes: ಮಧುಮೇಹಿಗಳು ತಮ್ಮ ಬ್ಲಡ್ ಶುಗರ್ ಅನ್ನು  ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಅಗತ್ಯ. ಆರೋಗ್ಯ ತಜ್ಞರ ಪ್ರಕಾರ, ಕೆಲವು ಚಹಾ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Apr 10, 2024, 09:14 AM IST
  • ಐದು ಬಗೆಯ ಚಹಾ ಸೇವನೆಯು ಡಯಾಬಿಟಿಸ್ ರೋಗಿಗಳಲ್ಲಿ ಕೆಲವೇ ಕ್ಷಣಗಳಲ್ಲಿ ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ.
  • ಮಧುಮೇಹವನ್ನು ನಿಯಂತ್ರಿಸಲು ಕೇವಲ ಚಹಾ ಸಾಕಾಗುವುದಿಲ್ಲ.
  • ಇದರೊಂದಿಗೆ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಕೂಡ ಬಹಳ ಮುಖ್ಯ
Tea For diabetes: ಮಧುಮೇಹಿಗಳಿಗೆ ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ತುಂಬಾ ಪ್ರಯೋಜನಕಾರಿ ಈ 5 ಚಹಾ  title=

Tea For Diabetes: ಡಯಾಬಿಟಿಸ್ ರೋಗಿಗಳು ತಮ್ಮ ಆಹಾರ -ಪಾನೀಯಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಸಾಮಾನ್ಯವಾಗಿ ಚಹಾ ಸೇವನೆಯು ಮಧುಮೇಹಿಗಳಿಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಲು-ಸಕ್ಕರೆ ಬೆರೆಸಿ ತಯಾರಿಸುವ ಚಹಾ ನಿಜಕ್ಕೂ ಮಧುಮೇಹಿ ರೋಗಿಗಳ (Diabetic patients) ಸಮಸ್ಯೆಯನ್ನು ಉಲ್ಬಣಿಸಬಹುದು. ಆದರೆ, ಕೆಲವು ಚಹಾ ಪರ್ಯಾಯಗಳು ಮಧುಮೇಹ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ಆಗಿವೆ. 

ಆರೋಗ್ಯ ತಜ್ಞರ ಪ್ರಕಾರ, ಐದು ಬಗೆಯ ಚಹಾ ಸೇವನೆಯು ಡಯಾಬಿಟಿಸ್ ರೋಗಿಗಳಲ್ಲಿ (Best Teas For Diabetes) ಕೆಲವೇ ಕ್ಷಣಗಳಲ್ಲಿ ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ. ಆ ಚಹಾಗಳ ಬಗ್ಗೆ ತಿಳಿಯೋಣ... 

ಈ ಐದು ಚಹಾ ಬಳಕೆಯಿಂದ ಡಯಾಬಿಟಿಸ್ ರೋಗಿಗಳಲ್ಲಿ ಕೆಲವೇ ನಿಮಿಷಗಳಲ್ಲಿ ನಿಯಂತ್ರಣಕ್ಕೆ ಬರುತ್ತೆ ಶುಗರ್ ಲೆವೆಲ್:- 
ಗ್ರೀನ್ ಟೀ: 

ಸಾಮಾನ್ಯವಾಗಿ ತೂಕ ಇಳಿಕೆಗಾಗಿ ಪ್ರಸಿದ್ದಿಯಾಗಿರುವ ಗ್ರೀನ್ ಟೀ (Green Tea) ಸೇವನೆಯು ಮಧುಮೇಹಿಗಳಿಗೂ (Diabetic) ತುಂಬಾ ಪ್ರಯೋಜನಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ವಾಸ್ತವವಾಗಿ, ಗ್ರೀನ್ ಟೀಯಲ್ಲಿ ಕಂಡು ಬರುವ ಪಾಲಿಫಿನಾಲ್‌ಗಳು,  ಆ್ಯಂಟಿಆಕ್ಸಿಡೆಂಟ್ ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- ಈ ರೋಗಲಕ್ಷಣಗಳು ದೇಹದಲ್ಲಿ ಫೈಬರ್ ಕೊರತೆಯ ಸೂಚನೆಯೂ ಆಗಿರಬಹುದು!

ದಾಲ್ಚಿನ್ನಿ ಟೀ: 
ಭಾರತೀಯ ಅಡುಗೆ ಮನೆಗಳಲ್ಲಿ ಪ್ರಸಿದ್ಧ ಮಸಾಲೆಗಳಲ್ಲಿ ಒಂದಾಗಿರುವ ದಾಲ್ಚಿನ್ನಿ  ಮಧುಮೇಹ ನಿಯಂತ್ರಣಕ್ಕೆ ದಿವ್ಯೌಷಧ (Cinnamon is a panacea for diabetes control) ಇದ್ದಂತೆ. ದಾಲ್ಚಿನ್ನಿ ಚಹಾ ಸೇವನೆಯು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮೆಂತ್ಯ ಟೀ: 
ಕೆಲವು ಅಧ್ಯಯನಗಳಲ್ಲಿ ಮಧುಮೇಹಿಗಳಿಗೆ ಮೆಂತ್ಯ (Fenugreek for diabetics) ತುಂಬಾ ಪ್ರಯೋಯಜನಕಾರಿ ಎಂದು ಹೇಳಲಾಗುತ್ತವೆ. ಮೆಂತ್ಯದಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಹಾಗಾಗಿ, ಮೆಂತ್ಯ ಚಹಾ ಸೇವನೆಯು ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿ ಆಗಿದೆ. 

ಅಜ್ವೈನ್ ಟೀ: 
ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿರುವ ಅಜ್ವೈನ್ ಅನ್ನು ಟೀ ತಯಾರಿಸಿ ಸೇವಿಸುವುದರಿಂದ ಇದು  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (Blood Sugar Control) ಸಹಾಯ ಮಾಡುತ್ತದೆ. 

ಇದನ್ನೂ ಓದಿ- Kidney Stone: ನಿಮ್ಮ ಈ ಅಭ್ಯಾಸಗಳಿಂದ ಹೆಚ್ಚುತ್ತೆ ಕಿಡ್ನಿ ಸ್ಟೋನ್ ಅಪಾಯ

ತುಳಸಿ ಟೀ: 
ತುಳಸಿ ಉತ್ಕರ್ಷಣ ನಿರೋಧಕ ಮತ್ತು ರೋಗನಿರೋಧಕ-ಉತ್ತೇಜಿಸುವ ಗುಣಗಳಲ್ಲಿ ಸಮೃದ್ಧವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ತುಳಸಿ ಎಲೆಗಳು ಹೈಪೊಗ್ಲಿಸಿಮಿಕ್ ಪರಿಣಾಮಗಳನ್ನು ಹೊಂದಿದ್ದು ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿದೆ. ಹಾಗಾಗಿ, ಡಯಾಬಿಟಿಸ್ ರೋಗಿಗಳು ನಿತ್ಯ ತುಳಸಿ ಟೀ (Tulsi tea) ತಯಾರಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ತುಂಬಾ ಪ್ರಯೋಜನಕಾರಿ ಆಗಿದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News