Lemon Water Side Effects: ಪ್ರತಿ ಋತುವಿನಲ್ಲಿ ಬಹಳ ಸುಲಭವಾಗಿ ಲಭ್ಯವಿರುವ ನಿಂಬೆಯನ್ನು ಹಲವು ವಿಧದಲ್ಲಿ ಬಳಸಲಾಗುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ನಿಂಬೆಹಣ್ಣಿನ ನೀರನ್ನು ನಿತ್ಯ ಕುಡಿಯುವುದು ತೂಕ ಇಳಿಕೆಯಿಂದ ಹಿಡಿದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಅತಿಯಾದರೆ ಅಮೃತ ಕೂಡ ವಿಷ ಎಂಬಂತೆ ಅತಿಯಾದ ನಿಂಬೆ ನೀರಿನ ಬಳಕೆಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. 


COMMERCIAL BREAK
SCROLL TO CONTINUE READING

ಅತಿಯಾದ ಲೆಮನ್ ವಾಟರ್ ಆರೋಗ್ಯಕ್ಕೆ ಹೇಗೆ ಹಾನಿಕಾರಕವಾಗಿದೆ? ಇದರಿಂದ ಉಂಟಾಗಬಹುದಾದ ಅನಾನುಕೂಲಗಳೇನು ಎಂಬ ಬಗ್ಗೆ ಪ್ರಸಿದ್ಧ ಆರೋಗ್ಯ ತಜ್ಞರಾದ ನಿಖಿಲ್ ವಾಟ್ಸ್ ಮಾಹಿತಿ ನೀಡಿದ್ದಾರೆ. 


ಅತಿಯಾಗಿ ನಿಂಬೆ ನೀರನ್ನು ಸೇವಿಸುವುದು ಏಕೆ ಒಳ್ಳೆಯದಲ್ಲ? 
ನಿಂಬೆ ಹಣ್ಣು ವಿಟಮಿನ್ ಸಿಯ ಸಮೃದ್ಧ ಮೂಲ. ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೇಹದಲ್ಲಿ ಈ ಪೋಷಕಾಂಶದ ಮಟ್ಟ ಹೆಚ್ಚಾದರೆ ಇದು ನಮ್ಮ ಹಲವು ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಹಾಗಾಗಿಯೇ, ವೈದ್ಯರು ಯಾವುದನ್ನೇ ಆದರೂ ಸೀಮಿತ ಪ್ರಮಾಣದಲ್ಲಿ ಬಳಸಲು ಸೂಚಿಸುತ್ತಾರೆ. 


ಇದನ್ನೂ ಓದಿ- ಮಧುಮೇಹದಿಂದ ತೂಕ ಇಳಿಕೆವರೆಗೆ ತುಂಬಾ ಪ್ರಯೋಜನಕಾರಿ ಸೌತೆಕಾಯಿ


ನಿಂಬೆ ನೀರಿನ ಅತಿಯಾದ ಸೇವನೆಯಿಂದ ಉಂಟಾಗುವ ಪ್ರಮುಖ ಅನಾನುಕೂಲಗಳೆಂದರೆ: -
ಉದರ ಸಮಸ್ಯೆ: 

ಆರೋಗ್ಯ ತಜ್ಞರ ಪ್ರಕಾರ, ಅತಿಯಾದ ನಿಂಬೆ ಹಣ್ಣಿನ ಬಳಕೆಯೂ ಹೊಟ್ಟೆಯಲ್ಲಿ ಆಮ್ಲೀಯ ಸ್ರವಿಕೆಯನ್ನು ಹೆಚ್ಚಿಸಬಹುದು. ಇದು ಗ್ಯಾಸ್ಟ್ರೀಕ್ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಇದು ವಾಂತಿ, ಭೇದಿ, ವಾಕರಿಕೆಯಂತಹ ಸಮಸ್ಯೆಗಳಿಗೂ ಕೂಡ ಕಾರಣವಾಗಬಹುದು. ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ನಿಂದ ಬಳಲುತ್ತಿರುವವರು ನಿಂಬೆ ನೀರನ್ನು ಬಳಸದಂತೆ ಸಲಹೆ ನೀಡಲಾಗುತ್ತದೆ. 


ಬಾಯಿ ಹುಣ್ಣು: 
ಅತಿಯಾದ ನಿಂಬೆಹಣ್ಣಿನ ಬಳಕೆಯಿಂದಾಗಿ ಅದರಲ್ಲಿರುವ ಸಿಟ್ರಿಕ್ ಆಮ್ಲವು ಬಾಯಿಯ ಅಂಗಾಂಶಗಳಲ್ಲಿ ಊತದ ಸಮಸ್ಯೆಗೆ ಕಾರಣವಾಗಬಹುದು.  ಇದು ಬಾಯಿಯಲ್ಲಿ ಹುಣ್ಣುಗಳನ್ನು ಕೂಡ ಉಂಟು ಮಾಡಬಹುದು.


ಇದನ್ನೂ ಓದಿ- ಕರಿಬೇವಿಗೆ ಈ ಒಂದು ವಸ್ತುವನ್ನು ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲ, ಮೊಣಕಾಲುದ್ದ ಬೆಳೆಯುವುದು ಕೇಶರಾಶಿ


ಹಲ್ಲಿನ ದಂತಕವಚ ಸವೆತ: 
ನಿಂಬೆ ನೀರು ಹೆಚ್ಚು ಆಮ್ಲೀಯವಾಗಿದ್ದು ಇದರ ಅತಿಯಾದ ಸೇವನೆಯು ಹಲ್ಲುಗಳ ಮೇಲೆ ದಂತಕವಶವನ್ನು ಸವೆಸುತ್ತದೆ. ಇದು ಭವಿಷ್ಯದಲ್ಲಿ ಇತರ ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು. 


ನಿರ್ಜಲೀಕರಣ:
ನಿಂಬೆ ನೀರು ಕುಡಿಯುವುದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಆದರೆ, ಅತಿಯಾದ ನಿಂಬೆ ನೀರಿನ ಸೇವನೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ನಿಂಬೆ ನೀರು ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.