ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚು ದಣಿವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜನ ಕಡಿಮೆ ನೀರನ್ನು ಕುಡಿಯುತ್ತಾರೆ. ಇನ್ನು ಕೆಲವರಿಗೆ ಸಾಮಾನ್ಯವಾಗಿ ಕಡಿಮೆ ನೀರನ್ನೇ ಕುಡಿಯುವ ಅಭ್ಯಾಸವಿರುತ್ತದೆ.  ಆದರೆ ಇದು ಆರೋಗ್ಯದ ಮೇಲೆ ಬಹು ದೊಡ್ಡ ಪರಿಣಾಮವನ್ನು ಬೀರುತ್ತದೆ. ವಿಶೇಷವಾಗಿ ಮಹಿಳೆಯರ ದೇಹದಲ್ಲಿ ನೀರಿನ ಕೊರತೆ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. 


COMMERCIAL BREAK
SCROLL TO CONTINUE READING

ಎಷ್ಟು ನೀರು ಕುಡಿಯಬೇಕು? 
ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ 2-3 ಲೀಟರ್ ನೀರು ಕುಡಿಯಬೇಕು. ನಾವು  ಲೋಟಗಳ ಆಧಾರದಲ್ಲಿ ಹೇಳುವುದಾದರೆ ಕನಿಷ್ಠ 7-8 ಗ್ಲಾಸ್ ನೀರು ಕುಡಿದರೆ ಒಳ್ಳೆಯದು. 


ಇದನ್ನೂ ಓದಿ : ಹಲವು ಆರೊಗ್ಯ  ಸಮಸ್ಯೆಗಳಿಗೆ ನುಗ್ಗೆ ಸೊಪ್ಪು ದಿವ್ಯೌಷಧ


ಕಡಿಮೆ ನೀರು ಕುಡಿಯುವುದರಿಂದ ಮಹಿಳೆಯರಲ್ಲಿ ಕಾಣಿಸುತ್ತದೆ ಈ ಸಮಸ್ಯೆಗಳು : 
ಮುಟ್ಟಿನ ತೊಂದರೆ  :
ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಮಹಿಳೆಯರಲ್ಲಿ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ನಿರ್ಜಲೀಕರಣದಿಂದಾಗಿ, ಸ್ನಾಯುಗಳಲ್ಲಿ ಸೆಳೆತ ಉಂಟಾಗಬಹುದು. ಹೊಟ್ಟೆ ನೋವಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಕಡಿಮೆ ನೀರು ಕುಡಿಯುವುದರಿಂದ ಪಿರಿಯಡ್ಸ್ ದೀರ್ಘವಾಗುವುದು.


ಭ್ರೂಣಕ್ಕೆ ಅಪಾಯ : 
ಕಡಿಮೆ ನೀರು ಕುಡಿಯುವುದರಿಂದ ಗರ್ಭಿಣಿಯರು ಕೂಡಾ ತೊಂದರೆ ಅನುಭವಿಸಬೇಕಾಗುತ್ತದೆ. ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಆಮ್ನಿಯೋಟಿಕ್ ದ್ರವದ ಕೊರತೆ ಉಂಟಾಗಬಹುದು. ಈ ದ್ರವದ ಕೊರತೆಯು ಭ್ರೂಣಕ್ಕೆ ಅಪಾಯವನ್ನುಂಟುಮಾಡುತ್ತದೆ. ಗರ್ಭಿಣಿಯರಲ್ಲಿ ನೀರಿನ ಕೊರತೆಯಿಂದ ಸೋಂಕು ಹರಡುವ ಅಪಾಯವೂ ಹೆಚ್ಚು. 


ಇದನ್ನೂ ಓದಿ : ಕೊಬ್ಬು ಕರಗಿಸುವಿಕೆಯ ಜೊತೆಗೆ ರೋಗನಿರೋಧ ಶಕ್ತಿ ಹೆಚ್ಚಿಸಲು ಈ ಸೊಪ್ಪು ರಾಮಬಾಣ


ಮೂತ್ರದ ಸೋಂಕು :
ಕಡಿಮೆ ನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಗಳು  ತಲೆದೋರುತ್ತದೆ. ಇದು ಮಹಿಳೆಯರಲ್ಲಿ ಮೂತ್ರದ ಸೋಂಕನ್ನು ಉಂಟುಮಾಡುತ್ತದೆ. ನಿರ್ಜಲೀಕರಣದಿಂದಾಗಿ, ಮೂತ್ರದ ಸೋಂಕಿನ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಮೂತ್ರದ ಸೋಂಕಿನ ಸಾಧ್ಯತೆ ಹೆಚ್ಚು. 


ಚರ್ಮದ ಸಮಸ್ಯೆಗಳು :
ಮಹಿಳೆಯರು ತಮ್ಮ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಚರ್ಮಕ್ಕೆ ಹಾನಿಯಾಗುತ್ತದೆ. ನೀರು ಕಡಿಮೆ ಸೇವನೆ ಪರಿಣಾಮ ಒಣ ಚರ್ಮ, ಚರ್ಮ ಒಡೆಯುವುದು, ಮೊಡವೆಗಳು ಮತ್ತು ಸುಕ್ಕುಗಳು ಮುಂತಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.