ಋತುಚಕ್ರದ ಸಮಯದಲ್ಲಿ ನೀವೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದಿರಾ.? ಇಲ್ಲಿವೆ ಸುಲಭ ಪರಿಹಾರ

Menstrual Pain: ಋತುಚಕ್ರ ಎಂಬುದು ನೈಸರ್ಗಿಕವಾಗಿ ಹೆಣ್ಣಿಗೆ ದೊರೆತಿರುವ ಅತ್ಯಮೂಲ್ಯವಾದ ವರ. ಆದರೆ, ಋತುಚಕ್ರದ ಸಮಯದಲ್ಲಿ ಕಾಡುವ ಕೆಲವು ಸಮಸ್ಯೆಗಳು ಇದು ಹೆಣ್ಣಿಗೆ ವರವೋ ಅಥವಾ ಶಾಪವೋ ಎನ್ನುವಂತೆ ಮಾಡುತ್ತದೆ. ಆದರೆ,   ಮುಟ್ಟಿನ ಸಮಯದಲ್ಲಿ ಬಾಧಿಸುವ ನೋವಿಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ಸುಲಭ ಪರಿಹಾರವನ್ನು ಪಡೆಯಬಹುದು.

Written by - Yashaswini V | Last Updated : Jan 24, 2023, 01:35 PM IST
  • ಋತುಚಕ್ರ ಪ್ರಕೃತಿದತ್ತವಾಗಿ ಹೆಣ್ಣಿಗೆ ದೊರೆತಿರುವ ವಿಶೇಷ ವರ
  • ಆದರೆ, ನೂರರಲ್ಲಿ ಸುಮಾರು ತೊಂಬತ್ತರಷ್ಟು ಮಹಿಳೆಯರು ಈ ಸಮಯದಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
  • ಇದನ್ನು ತಪ್ಪಿಸಲು ನಿಮಗೆ ಕೆಲವು ಮನೆಮದ್ದುಗಳು ಸಹಕಾರಿ ಆಗಬಹುದು.
ಋತುಚಕ್ರದ ಸಮಯದಲ್ಲಿ ನೀವೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದಿರಾ.? ಇಲ್ಲಿವೆ ಸುಲಭ ಪರಿಹಾರ title=
Natural Remedies For Periods Pain

Menstrual Pain: ಋತುಚಕ್ರ ಮಹಿಳೆಯರಿಗೆ ವರವೋ ಶಾಪವೋ ತಿಳಿದಿಲ್ಲ. ಆದರೆ 100ರಲ್ಲಿ 90% ಮಹಿಳೆಯರು ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಇದು ಮಹಿಳೆಯರ ಜೀವನವನ್ನೇ ಹಿಂಡಿಬಿಡುತ್ತದೆ. ಇದರಿಂದ ಪಾರಾಗಲು ಏನೇನೆಲ್ಲಾ ಮಾಡುತ್ತಾರೆ. ನೋವನ್ನು ತಡೆಯಲಾಗದೇ ಮಾತ್ರೆ ಸೇವಿಸುವವರು ಇದ್ದಾರೆ. ಆದರೆ ಮಾತ್ರೆ ಸೇವಿಸುವುದರಿಂದ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು. ಹಾಗಾಗಿ ಮುಟ್ಟಿನ ಸಮಯದಲ್ಲಿ ಸಾಧ್ಯವಾದಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎನ್ನುತ್ತಾರೆ ವೈದ್ಯರು. ಒಂದೊಮ್ಮೆ ಅಸಹನೀಯ ನೋವನ್ನು ತಪ್ಪಿಸಲು ನೀವು ಮಾತ್ರೆ ಸೇವಿಸುವುದರೆ ಆದರೆ ವೈದ್ಯರ ಸಲಹೆ ಮೇರೆಗೆ ಮಾತ್ರವೇ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. 

ಮುಟ್ಟಿನ ಸಮಯದಲ್ಲಿ ಕಾಡುವ ಅಸನೀಯ ನೋವು ಮತ್ತು ಅನಿಯಮಿತ ಋತುಸ್ರಾವವನ್ನು ತಪ್ಪಿಸಲು ಕೆಲವು ಮನೆಮದ್ದುಗಳು ಕೂಡ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಲೇಖನದಲ್ಲಿ ಅಂತಹ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ... 

ಇದನ್ನೂ ಓದಿ- ಮಧುಮೇಹಿಗಳಿಗೆ ಬೆಸ್ಟ್ ಈ ಹಿಟ್ಟಿನ ಚಪಾತಿ! ಹೀರಿಕೊಳ್ಳುತ್ತದೆ ರಕ್ತದಲ್ಲಿನ ಸಕ್ಕರೆ!

ಈ ನೋವಿನಿಂದ ಹೊರಬರಲು ಇಲ್ಲಿವೆ ನೋಡಿ ಪರಿಣಾಮಕಾರಿ ಮಾರ್ಗಗಳು : 
* ಬಿಸಿ ನೀರನ್ನ ಕುಡಿಯುವುದು
* ಹಾಟ್‌ ಬ್ಯಾಗ್‌ ಬಳಸುವುದು
* ನಿಯಮಿತವಾಗಿ ಆಹಾರ ಸೇವಿಸುವುದು
* ಫಿಟ್ನೆಸ್‌ ಅಭ್ಯಾಸ ರೂಢಿಸಿಕೊಳ್ಳುವುದು
* ಹೆಚ್ಚು ಪ್ರೋಟಿನ್‌ ಹಾಗೂ ವಿಟಮಿನ್‌ ಆಹಾರವನ್ನ ಸೇವಿಸುವುದು
*ಉಪ್ಪು, ಸಕ್ಕರೆ ಇತ್ಯಾದಿಗಳ ಬಳಕೆಯನ್ನ ಕಡಿಮೆಮಾಡುವುದು
* ಬಿಸಿನೀರಿನೊಂದಿಗೆ ನಿಂಬೆ ರಸವನ್ನ ಮಿಕ್ಸ್‌ ಮಾಡಿ ಕುಡಿದರೆ ಹೊಟ್ಟೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ.
* ದೇಹದ ಉಷ್ಣತೆಯನ್ನು ಹೆಚ್ಚಿಸುವಂತಹ ಆಹಾರಗಳ ಸೇವನೆ ಕಡಿಮೆ ಮಾಡಿ.

ಇದನ್ನೂ ಓದಿ- ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ, ಕೊಬ್ಬು ಬೆಣ್ಣೆಯಂತೆ ಕರಗಿಸುತ್ತದೆ ಈ ಪಾನೀಯ

ಅನಿಯಮಿತ ಋತುಸ್ರಾವದಿಂದ ಬೇಸೊತ್ತಿರುವಿರಾ?
ಋತುಚಕ್ರದ ಸಮಯದಲ್ಲಿ ಕೆಲವು ಮನೆಮದ್ದುಗಳ ಸಹಾಯದಿಂದ ಅನಿಯಮಿತ ಋತುಸ್ರಾವವನ್ನು ಕಡಿಮೆ ಮಾಡಬಹುದು. ಅವುಗಳೆಂದರೆ...
>> ಒಣಶುಂಠಿ ಮತ್ತು ಕಾಳು ಮೆಣಸು ಸೇರಿಸಿ ಚಹಾ ಮಾಡಿ ಕುಡಿಯುವುದು. ಆದರೆ ಹಾಲು ಸಕ್ಕರೆ ಸೇರಿಸಬಾರದು.
>> ಋತು ಚಕ್ರದ ಸಮಯದಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದರಿಂದ ಹೊಟ್ಟೆ ನೋವುನ್ನು ಕಡಿಮೆ ಮಾಡಬಹುದು
>> ಬಿಸಿ ನೀರನ್ನು ಹೆಚ್ಚಾಗಿ ಸೇವಿಸುವುದರ ಜೊತೆಗೆ ಬಿಸಿ ನೀರಿಗೆ ನಿಂಬೆ ರಸವನ್ನ ಬೆರೆಸಿ ಸೇವಿಸಿದರೆ ಅನಿಯಮಿತ ಋತುಸ್ರಾವವನ್ನು ತಡೆಯಬಹುದು.
>> ಜೀರಿಗೆಯನ್ನು ಅಗೆದು ರಸವನ್ನ ಸೇವಿಸುವುದು ಅಥವಾ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನ ಹಾಕಿ ಅದು ಅರ್ಧವಾಗುವಷ್ಟು ಕುದಿಸಿ ಆ ನೀರನ್ನು ಶೋಧಿಸಿ ಕುಡಿಯುವುದರಿಂದ ಋತುಚಕ್ರದ ಸಮಸ್ಯೆಗಳನ್ನ ಕಡಿಮೆ ಮಾಡಿಕೊಳ್ಳಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News