ಬೆಂಗಳೂರು : Side Effects Of Moong Dal: ಹೆಸರು ಬೇಳೆ  ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಪ್ರೋಟೀನ್ ಸೇರಿದಂತೆ ಅನೇಕ ಪೋಷಕಾಂಶಗಳು ಕಂಡುಬರುತ್ತವೆ.  ಫೈಬರ್, ಪ್ರೋಟೀನ್, ವಿಟಮಿನ್‌ಗಳು, ತಾಮ್ರ, ಫೋಲೇಟ್, ವಿಟಮಿನ್ ಸಿ, ಪೊಟ್ಯಾಸಿಯಮ್ ಇತ್ಯಾದಿಗಳು ಹೆಸರು ಬೇಳೆ ಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಆದರೆ ಕೆಲವು ಸಮಸ್ಯೆಗಳಿದ್ದಲ್ಲಿ  ಹೆಸರು ಬೇಳೆ ಸೇವನೆ ಆ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಹುದು. 


COMMERCIAL BREAK
SCROLL TO CONTINUE READING

ಈ ಸಮಸ್ಯೆಗಳಿದ್ದರೆ ಹೆಸರು ಬೇಳೆ ಸೇವಿಸಬಾರದು :
ಲೋ ಬ್ಲಡ್ ಶುಗರ್ : 
ಲೋ ಬ್ಲಡ್ ಶುಗರ್ ಸಮಸ್ಯೆಯಿದ್ದರೆ ಹೆಸರು ಬೇಳೆ ತಿನ್ನುವುದು ಹಾನಿಕಾರಕವಾಗಿರಲಿದೆ. ಯಾಕೆಂದರೆ ಹೆಸರು ಬೇಳೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಅಂಶಗಳು ಅಡಗಿವೆ. ಈ ಹಿನ್ನೆಲೆಯಲ್ಲಿ ರಕ್ತದಲ್ಲಿನ ಸಕ್ಕರೆಯ ಸಮಸ್ಯೆಯಿಂದ ಬಳಲುತ್ತಿರುವವರು ಹೆಸರು ಬೇಳೆ  ತಿನ್ನಬಾರದು. 


ಇದನ್ನೂ ಓದಿ :   Diabetes: ಮಧುಮೇಹ ಕಾಯಿಲೆಗೆ ನಿಮ್ಮ ಅಡುಗೆಮನೆಯ ಈ ಮಸಾಲೆ ರಾಮಬಾಣ


ಕಡಿಮೆ ರಕ್ತದೊತ್ತಡ:
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಹೆಸರು ಬೇಳೆ  ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.  ಆದರೆ ನಿಮಗೆ ಕಡಿಮೆ ರಕ್ತದೊತ್ತಡದ ಸಮಸ್ಯೆ ಇದ್ದರೆ  ಹೆಸರು ಬೇಳೆ  ತಿನ್ನುವುದನ್ನು ತಪ್ಪಿಸಬೇಕು. 


ಮೂತ್ರಪಿಂಡದ ಕಲ್ಲು :
ಕಿಡ್ನಿ ಸ್ಟೋನ್ ಸಮಸ್ಯೆಯಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸದಿದ್ದರೆ, ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಹೆಸರು ಬೇಳೆ  ಅತಿಯಾದ ಸೇವನೆಯು ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರಿಗೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಯಾಕೆಂದರೆ ಇದರಲ್ಲಿ ಪ್ರೊಟೀನ್ ಮತ್ತು ಆಕ್ಸಲೇಟ್ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಕಾರಣದಿಂದ ಕಿಡ್ನಿ ಸ್ಟೋನ್ ಇದ್ದರೆ ಹೆಸರು ಬೇಳೆ ಯಿಂದ ದೂರವಿರುವುದು ಒಳ್ಳೆಯದು. 


ಇದನ್ನೂ ಓದಿ :   Green Teaಯಲ್ಲಿ ಈ 4 ವಸ್ತುಗಳನ್ನು ಸೇರಿಸಿ ಕುಡಿದರೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.