Benefits Yellow Foods For Heart: ಹೃದಯ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು, ನಮ್ಮ ಹುಟ್ಟಿನಿಂದ ಕೊನೆಯುಸಿರು ಇರುವವರೆಗೆ ಅದು ಬಡಿದುಕೊಳ್ಳುತ್ತಲೇ ಇರುತ್ತದೆ. ಹೃದಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್ನಂತಹ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳ ಅಪಾಯ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ದೈನಂದಿನ ಆಹಾರದಿಂದ ಎಣ್ಣೆಯುಕ್ತ ಆಹಾರವನ್ನು ತೆಗೆದುಹಾಕಿ, ಆರೋಗ್ಯಕರ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಆಹಾರ ತಜ್ಞ ಡಾ. ಆಯುಷಿ ಯಾದವ್ ಅವರ ಪ್ರಕಾರ, ಕೆಲ ಹಳದಿ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸಬಹುದು ಎನ್ನಲಾಗಿದೆ.
ಈ ಹಳದಿ ಆಹಾರ ಸೇವಿಸಿ ಹೃದ್ರೋಗಕ್ಕೆ ಸ್ಟಾಪ್ ಹೇಳಿ
1. ಮಾವು
ಮಾವಿನಹಣ್ಣಿನ ಹೆಸರು ಕೇಳಿದರೆ ಬಾಯಿ ನೀರೂರುತ್ತದೆ, ಕೇವಲ ಮಾವು ತಿನ್ನಲು ನಾವು ಬೇಸಿಗೆ ಕಾಲಕ್ಕಾಗಿ ಕಾಯುತ್ತೇವೆ ಮತ್ತು ಸಿಹಿ ರುಚಿಕರವಾದ ಈ ಹಣ್ಣನ್ನು ಸೇವನೆಯ ಆನಂದ ಸವಿಯುತ್ತೇವೆ, ಹೃದಯದ ಆರೋಗ್ಯಕ್ಕೂ ಇದು ತುಂಬಾ ಹಿತಕಾರಿಯಾಗಿದೆ.
2. ನಿಂಬೆ
ನಿಂಬೆ ಹಣ್ಣು ಒಂದು ಔಷಧೀಯ ಗುಣಗಳಿಂದ ಸಮೃದ್ಧ ಹಣ್ಣಾಗಿದೆ, ಸಲಾಡ್ಗಳಿಂದ ಹಿಡಿದು ನಿಂಬೆ ಪಾನಕದವರೆಗೆ ಇದನ್ನು ಬಳಸಲಾಗುತ್ತದೆ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.
3. ಬಾಳೆಹಣ್ಣು
ಬಾಳೆಹಣ್ಣು ತಿನ್ನದೇ ಇರುವವರು ಬಹುತೇಕ ವಿರಳವಾಗಿರುತ್ತಾರೆ, ಈ ಹಣ್ಣು ಸೇವಿಸುವುದು ಕೂಡ ತುಂಬಾ ಸುಲಭದ ಕೆಲಸ, ಇದರಿಂದ ಹೆಚ್ಚು ಪ್ರಯೋಜನಗಳೂ ಕೂಡ ಇವೆ. ಸೀಮಿತ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ತಿನ್ನುವುದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಇದು ಪ್ರಯೋಜನಕಾರಿ ಸಾಬೀತಾಗುತ್ತದೆ.
4. ಅನಾನಸ್
ಪೈನಾಪಲ್ ಹಣ್ಣಿನ ಮಾಧುರ್ಯ ಬಹುತೇಕ ಜನರನ್ನು ತನ್ನತ್ತ ಆಕರ್ಷಿಸುತ್ತದೆ, ಆದರೆ ಇದನ್ನು ತಿನ್ನುವುದರಿಂದ ಹೃದಯಾಘಾತದ ಅಪಾಯ ಸಾಕಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಆದರೂ ಕೂಡ ಇದನ್ನು ಮಿತಿಗಿಂತ ಹೆಚ್ಚು ಸೇವಿಸಬಾರದು ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ-Dragon Fruit: ಡ್ರ್ಯಾಗನ್ ಹಣ್ಣಿನ ಅದ್ಭುತ ಆರೋಗ್ಯಕರ ಪ್ರಯೋಜನಗಳು
5. ಬೆಲ್ ಪೆಪ್ಪರ್ ಹಣ್ಣು
ಈ ಆಹಾರ ಸಾಕಷ್ಟು ಫೈಬರ್, ಕಬ್ಬಿಣ ಮತ್ತು ಫೋಲೇಟ್ ನಿಂದ ಸಮೃದ್ಧವಾಗಿದೆ, ಇದೆ ಕಾರಣದಿಂದ ಇದರ ಸೇವನೆಯಿಂದ ದೇಹವು ಹೆಚ್ಚಿನ ಶಕ್ತಿಯನ್ನು ಪಡೆಯುತ್ತದೆ ಮತ್ತು ಇದೇ ವೇಳೆ ದೇಹದಲ್ಲಿ ರಕ್ತದ ಕೊರತೆಯನ್ನು ಇದು ನೀಗಿಸುತ್ತದೆ ಮತ್ತು ಹೃದಯವೂ ಸಹ ಇದರಿಂದ ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ-Urine Holding: ಮೂತ್ರ ವಿಸರ್ಜನೆ ತಡೆಗಟ್ಟುವುದು ಗಂಭೀರ ಸಮಸ್ಯೆಗೆ ಕಾರಣ, ನೀವೂ ಈ ತಪ್ಪು ಮಾಡುತ್ತಿಲ್ಲವಲ್ಲ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ