ನವದೆಹಲಿ: Taming Bad Cholesterol - ನೀವು ಏನು ತಿನ್ನುತ್ತೀರೋ ಅದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಜನರ ಆರೋಗ್ಯ ಹದಗೆಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹಲವಾರು ರೀತಿಯ ರೋಗಗಳು ಸುತ್ತುವರೆಯುತ್ತವೆ. ಕೊಲೆಸ್ಟ್ರಾಲ್ ಹಾಳಾಗುವುದು ಕೂಡ ಇಂದಿನ ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿದೆ.

COMMERCIAL BREAK
SCROLL TO CONTINUE READING

ದೇಹದಲ್ಲಿ 2 ವಿಧದ ಕೊಲೆಸ್ಟ್ರಾಲ್ಗಳಿವೆ
ನಮ್ಮ ದೇಹದಲ್ಲಿ ಒಟ್ಟು ಎರಡು ರೀತಿಯ ಕೊಲೆಸ್ಟ್ರಾಲ್ ಗಳು (Cholesterol) ಇರುತ್ತವೆ.  ಮೊದಲನೆಯದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಎರಡನೆಯದು ಕೆಟ್ಟದು. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸಿದರೆ, ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುವುದು ಬಹಳ ಮುಖ್ಯ. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಕೆಲ ಡ್ರೈಫ್ರೂಟ್ ಗಳು ಕೂಡ ಸಹಕಾರಿಯಾಗಿವೆ.

1. ವಾಲ್ ನಟ್ಸ್ ಅಥವಾ ಅಕ್ರೋಟು ಸೇವಿಸಿ
ವಾಲ್ ನಟ್ಸ್ ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ವಾಲ್ ನಟ್ಸ್ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಮೊನೊಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿದೆ.

2. ಬಾದಾಮಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ 
ಫಿಟ್ ಆಗಿರಲು ಪ್ರತಿದಿನ ಬಾದಾಮಿ ತಿನ್ನಲು ಸಲಹೆ ನೀಡಿರುವುದನ್ನು ನೀವು ಕೇಳಿರಬಹುದು. ಬಾದಾಮಿಯು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪತ್ತಿಸುತ್ತದೆ. ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ತ್ವರಿತವಾಗಿ ಕಡಿಮೆಯಾಗುತ್ತದೆ.

3. ಆಹಾರದಲ್ಲಿ ಪಿಸ್ತಾ ಸೇರಿಸಿ
ನೀವು ಪ್ರತಿದಿನ ಪಿಸ್ತಾ ತಿನ್ನಬೇಕು. ಪ್ರತಿದಿನ ಒಂದಿಷ್ಟು ಪಿಸ್ತಾ ತಿನ್ನುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.


ಇದನ್ನೂ ಓದಿ-Mumbaiನ ಸಾಂತಾಕ್ರೂಸ್ ನಲ್ಲಿ Corona XE ವೇರಿಯಂಟ್ ನ ಎರಡನೇ ಪ್ರಕರಣ ಪತ್ತೆ

4. ಸೀಡ್ಸ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ
ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸೀಡ್ಸ್ ಸಹ ಪ್ರಯೋಜನಕಾರಿ. ನೀವು ನಿಮ್ಮ ಆಹಾರದಲ್ಲಿ ಸೀಡ್ಸ್ ಸೇರಿಸಿದರೆ, ನೀವು ಖಂಡಿತವಾಗಿಯೂ ಅದರ ಪ್ರಯೋಜನವನ್ನು ಪಡೆಯುವಿರಿ.


ಇದನ್ನೂ ಓದಿ-Benefits Of Raw Papaya: ಕಚ್ಚಾ ಪಪ್ಪಾಯಿಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.