Benefits Of Raw Papaya: ಕಚ್ಚಾ ಪಪ್ಪಾಯಿಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

Raw Papaya Useful In Reducing Weight - ಮಾಗಿದ ಪಪ್ಪಾಯಿ (Papaya) ಅಲ್ಲ, ಹಸಿ ಪಪ್ಪಾಯಿ ಕೂಡ ನಿಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ನೀವೂ ಕೂಡ ನಿತ್ಯ ಇದನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ, ಇದರಿಂದ ಹಲವು ಆರೋಗ್ಯಕರ ಲಾಭಗಳಿವೆ.  

Written by - Nitin Tabib | Last Updated : Apr 9, 2022, 07:24 PM IST
  • ಕಚ್ಚಾ ಪಪ್ಪಾಯಿ ಸೇವನೆಯ ಲಾಭಗಳು
  • ತೂಕ ಇಳಿಕೆಗೆ ಸಹಕಾರಿ
  • ಸಕ್ಕರೆ ಕಾಯಿಲೆ ಇರುವವರಿಗೆ ವಿಶೇಷ ಲಾಭ
Benefits Of Raw Papaya: ಕಚ್ಚಾ ಪಪ್ಪಾಯಿಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ? title=
Benefits Of Raw Papaya

ನವದೆಹಲಿ: Raw Papaya In Diabetes - ಹಣ್ಣಾದ ಪಪ್ಪಾಯಿ ಸೇವನೆ ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯೋ ಅದೇ ರೀತಿ ಹಸಿ ಪಪ್ಪಾಯಿ ಕೂಡ ಉಪಯುಕ್ತವಾಗಿದೆ. ಹಸಿ ಪಪ್ಪಾಯಿ ಹೊಟ್ಟೆಯ ಕಾಯಿಲೆಗಳನ್ನೂ ಸಹ ಗುಣಪಡಿಸುತ್ತದೆ. ಇದಲ್ಲದೆ, ಹಸಿ ಪಪ್ಪಾಯಿಯನ್ನು ಕೀಲುಗಳ ಸಮಸ್ಯೆ ನಿವಾರಣೆಯಲ್ಲಿಯೂ ಕೂಡ ಬಳಸಲಾಗುತ್ತದೆ. ತೂಕವನ್ನು ಕಡಿಮೆ ಮಾಡಲು ನೀವು ಹಸಿ ಪಪ್ಪಾಯಿಯನ್ನು ಸಹ ಬಳಸಬಹುದು. ಹಸಿ ಪಪ್ಪಾಯಿಯಲ್ಲಿ ಪಪೈನ್ ಎಂಬ ಅಂಶವಿದ್ದು, ಇದು ನಮ್ಮ ದೇಹಕ್ಕೆ (Health Tips) ತುಂಬಾ ಪ್ರಯೋಜನಕಾರಿಯಾಗಿದೆ. ಹಸಿ ಪಪ್ಪಾಯಿಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಹಾಗಾದರೆ ಹಸಿ ಪಪ್ಪಾಯಿ ಸೇವನೆಯಿಂದ ಇದರ ಹೊರತಾಗಿ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ ಬನ್ನಿ,

ಹಸಿ ಪಪ್ಪಾಯಿಯನ್ನು ಈ ರೀತಿ ಬಳಸಿ
ಬೆಳಗ್ಗೆ ಹಣ್ಣುಗಳನ್ನು ಸೇವಿಸುವುದು ಹಿತಕಾರಿಯಾಗಿದೆ. ಆದ್ದರಿಂದ, ಪಪ್ಪಾಯಿಯನ್ನು ಕೂಡ ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಹಸಿ ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಲು ಪ್ರಯತ್ನಿಸಿ. ಅನೇಕ ಜನರು ತರಕಾರಿ ಮಾಡುವ ಮೂಲಕ ಹಸಿ ಪಪ್ಪಾಯಿಯನ್ನು ಸೇವಿಸುತ್ತಾರೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Never Eat These Things With Tea: ನೀವೂ ಕೂಡ Tea ಜೊತೆಗೆ ಈ ವಸ್ತುಗಳನ್ನು ಸೇವಿಸುತ್ತೀರಾ? ಎಚ್ಚರ!

ಯಾವುದೇ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ
ಹಸಿ ಪಪ್ಪಾಯಿಯಲ್ಲಿರುವ ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇಡುತ್ತವೆ. ಇದರ ಸೇವನೆಯು ಯಾವುದೇ ಗಾಯವನ್ನು ವಾಸಿಮಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಸಿ ಪಪ್ಪಾಯಿಯನ್ನು ಇಷ್ಟಪಡದವರು ಅದನ್ನು ತಮ್ಮ ಆಯ್ಕೆಯನ್ನಾಗಿ ಮಾಡಿಕೊಳ್ಳಬಹುದು.

ಇದನ್ನೂ ಓದಿ-Booster Dose ಬೆಲೆ ಇಳಿಕೆ ಮಾಡಿದ ವ್ಯಾಕ್ಸಿನ್ ಕಂಪನಿಗಳು, ಹೊಸ ಬೆಲೆಗಳು ಇಂತಿವೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News