ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ದೀಪಾವಳಿ ಸಂಭ್ರಮದಲ್ಲಿದ್ದ ಗ್ರಾಹಕರಿಗೆ ಶಾಕ್!
LPG Price Hike: ದೀಪಾವಳಿ ಸಂಭ್ರಮಾಚರಣೆಯಲ್ಲಿದ್ದ ಗ್ರಾಹಕರಿಗೆ ತೈಲ ಮಾರುಕಟ್ಟೆ ಕಂಪನಿಗಳು ಶಾಕ್ ನೀಡಿದ್ದು, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಮಾಡಿವೆ.
LPG Price Hike: ದೇಶಾದ್ಯಂತ ದೀಪಾವಳಿ ಆಚರಣೆಯ ಸಂಭ್ರಮದಲ್ಲಿದ್ದ ಗ್ರಾಹಕರಿಗೆ ಅಡುಗೆ ಅನಿಲ ದರವನ್ನು ಹೆಚ್ಚಳ ಮಾಡುವ ಮೂಲಕ ತೈಲ ಕಂಪನಿಗಳು ಶಾಕ್ ನೀಡಿವೆ. ಎಲ್‌ಪಿಜಿ ಸಿಲಿಂಡರ್ ದುಬಾರಿಯಾಗಿದ್ದು ನವೆಂಬರ್ 01ರಿಂದಲೇ ಹೊಸ ಎಲ್‌ಪಿಜಿ ದರಗಳು ಜಾರಿಗೆ ಬಂದಿವೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ:
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿಯೂ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ಕಂಪನಿಗಳು ಅಕ್ಟೋಬರ್ 1 ರಂದು 48.50 ರೂ. ಏರಿಕೆ ಮಾಡಿದ್ದವು. ಇದೀಗ ನವೆಂಬರ್ ತಿಂಗಳಿನಲ್ಲೂ ವಾಣಿಜ್ಯ ಸಿಲಿಂಡರ್‌ಗಳು ದುಬಾರಿಯಾಗಿವೆ.
ಸಿಲಿಂಡರ್‌ಗಳ ಬೆಲೆಯಲ್ಲಿ 62 ರೂ. ಹೆಚ್ಚಳ:
ಶುಕ್ರವಾರ (ಅಕ್ಟೋಬರ್ 01) ವಾಣಿಜ್ಯ ಸಿಲಿಂಡರ್ ಬೆಲೆ ಪರಿಷ್ಕರಿಸಿರುವ HPCL, BPCL ಮತ್ತು IOCL ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 62 ರೂ.ಗಳಷ್ಟು ಹೆಚ್ಚಿಸಿವೆ. 19 ಕೆಜಿ ಸಿಲಿಂಡರ್‌ಗಳ ಹೊಸ ದರ ಇಂದಿನಿಂದಲೇ (ಅಕ್ಟೋಬರ್ 01) ಹೆಚ್ಚಳವಾಗಲಿದೆ.
ಇದನ್ನೂ ಓದಿ- ನಿರುದ್ಯೋಗಿ ಯುವಕ-ಯುವತಿಯರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್! ಬಂಗಾರದಂತ ಅವಕಾಶ ಕೈ ಜಾರಲು ಬಿಡಬೇಡಿ!
ಮೆಟ್ರೋ ನಗರಗಳಲ್ಲಿ ಅತ್ಯಂತ ದುಬಾರಿಯಾದ 19 ಕೆಜಿ ಸಿಲಿಂಡರ್, ಮುಂಬೈನಲ್ಲಿ ಅಗ್ಗ:
19ಕೆಜಿ ಸಿಲಿಂಡರ್ ದರ ಪರಿಷ್ಕರಣೆ ಬೆನ್ನಲ್ಲೇ ದೇಶದ ಮೆಟ್ರೋ ನಗರಗಳಲ್ಲಿ ಸಿಲಿಂಡರ್ ಬಲು ದುಬಾರಿ ಆಗಿದೆ. ಆದಾಗ್ಯೂ, ಇತರ ಮೆಟ್ರೋ ನಗರಗಳಿಗೆ ಹೊಲಿಸಿದರೆ ಮುಂಬೈನಲ್ಲಿ ಮಾತ್ರ ಸಿಲಿಂಡರ್ ಬೆಲೆ ಕಡಿಮೆಯಿದೆ.
ನಗರ | ಸಿಲಿಂಡರ್ ದರ |
ದೆಹಲಿ | 1802ರೂ. |
ಕೋಲ್ಕತ್ತಾ | 1911.50 ರೂ. |
ಮುಂಬೈ | 1754.50 ರೂ. |
ಚೆನ್ನೈ | 1964.50 ರೂ. |
ಬೆಂಗಳೂರು | 1964.50 ರೂ. |
ಇದನ್ನೂ ಓದಿ- ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ !ಜನ ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ
ಗೃಹಬಳಕೆ ಅನಿಲ ದರ:
ತೈಲ ಕಂಪನಿಗಳು ಗೃಹಬಳಕೆ ಅನಿಲ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ನಗರ | ಸಿಲಿಂಡರ್ ದರ |
ದೆಹಲಿ | 803 ರೂ. |
ಕೋಲ್ಕತ್ತಾ | 829 ರೂ. |
ಮುಂಬೈ | 802.50 ರೂ. |
ಚೆನ್ನೈ | 818.50 ರೂ. |
ಬೆಂಗಳೂರು | 818.50 ರೂ. |
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.