ತುಟ್ಟಿಭತ್ಯೆ ಹೆಚ್ಚಳ, ದೀಪಾವಳಿ ಬೋನಸ್ ನಿಂದ ಸಂತೋಷಗೊಂಡಿದ್ದ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ದೇಶಾದ್ಯಂತ ದೀಪಾವಳಿ ಸಂಭ್ರಮಾಚರಣೆ ಆರಂಭವಾಗಿದೆ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದೀಪಾವಳಿ ಸಂದರ್ಭದಲ್ಲಿ ಭತ್ಯೆಗಳಲ್ಲಿ ಹೆಚ್ಚಳವನ್ನು ಘೋಷಿಸಿವೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂತೋಷವು ದುಪ್ಪಟ್ಟಾಗಿದೆ. ಇದಲ್ಲದೇ ಹಲವು ಉದ್ಯೋಗಿಗಳ ಬ್ಯಾಂಕ್ ಖಾತೆಗೆ ದೀಪಾವಳಿ ಬೋನಸ್ ಮೊತ್ತ ಕೂಡಾ ಜಮೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ತುಟ್ಟಿಭತ್ಯೆ ಹೆಚ್ಚಳ, ದೀಪಾವಳಿ ಬೋನಸ್ ನಿಂದ ಸಂತೋಷಗೊಂಡಿದ್ದ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.ಈಗ ಹೆಚ್ಆರ್ ಎ ಕೂಡಾ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ನವೆಂಬರ್ 1 ರಿಂದಲೇ ಜಾರಿಗೆ ಬರಲಿದೆ.
ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಕೆಲವು ದಿನಗಳ ನಂತರ,ಮನೆ ಬಾಡಿಗೆ ಭತ್ಯೆ (ಹೆಚ್‌ಆರ್‌ಎ) ಹೆಚ್ಚಳವನ್ನು ರಾಜಸ್ಥಾನ ಸರ್ಕಾರ ಘೋಷಿಸಿದೆ.ಈ ಮೂಲಕ ರಾಜ್ಯದ ಜನತೆಗೆ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದ್ದಾರೆ.
ವರ್ಗವಾರು ಎಚ್‌ಆರ್‌ಎ ಹೆಚ್ಚಳವನ್ನು ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಧಿಸೂಚನೆಯ ಪ್ರಕಾರ, 'ವೈ' ವರ್ಗದ ನಗರಗಳಿಗೆ ಶೇಕಡಾ 20 ರಷ್ಟು ಮತ್ತು 'ಝಡ್' ವರ್ಗದ ನಗರಗಳಿಗೆ ಶೇಕಡಾ 10 ರಷ್ಟು HRA ಹೆಚ್ಚಿಸಲಾಗಿದೆ.
ದೀಪಾವಳಿಗೆ ಮುಂಚೆಯೇ ಹಲವಾರು ರಾಜ್ಯ ಸರ್ಕಾರಗಳು ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ.ತಮಿಳುನಾಡು, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಈಗಾಗಲೇ ತುಟ್ಟಿಭತ್ಯೆ ಹೆಚ್ಚಳ ಘೋಷಿಸಿವೆ.
ಈ ಹಿಂದೆ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಹಬ್ಬದ ಬೋನಸ್ ಘೋಷಿಸಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವಿಧ ಇಲಾಖೆಗಳ ನೌಕರರಿಗೆ ನೌಕರರ ಒಂದು ತಿಂಗಳ ವೇತನಕ್ಕೆ ಸಮನಾದ ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ನೀಡುವುದಾಗಿ ಹೇಳಿತ್ತು.