Detox Drinks For Weight Loss : ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸಲಾಗುತ್ತದೆ. ಅದರಲ್ಲೂ ಹೊಟ್ಟೆ ಭಾಗದಲ್ಲಿ ಕೊಬ್ಬು ಸೇರಿಕೊಂಡರೆ ಅದನ್ನು ಸರಿಪಡಿಸಲು ತುಂಬಾ ಕಷ್ಟವಾಗುತ್ತದೆ. ತೂಕ ಇಳಿಸಿಕೊಳ್ಳಲು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರುವುದು ಬಹಳ ಮುಖ್ಯ. ನಿಮ್ಮ ಆಹಾರಕ್ರಮವು ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ದೈನಂದಿನ ಜೀವನದಲ್ಲಿ ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೂಕ ಹೆಚ್ಚಾಗುವುದರಿಂದ ಜನರು ಅನೇಕ ಸಮಸ್ಯೆಗಳಿಂದ ಬಳಲುವಂತಾಗುತ್ತದೆ.  


COMMERCIAL BREAK
SCROLL TO CONTINUE READING

ತೂಕ ನಷ್ಟ ಪಾನೀಯಗಳು :
ನಾವು ಹಸಿರು ತರಕಾರಿಗಳಿಗಿಂತ ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸಿದರೆ,  ದೇಹದಲ್ಲಿ ಟಾಕ್ಸಿನ್ ಹೆಚ್ಚಾಗುತ್ತದೆ. ಟಾಕ್ಸಿನ್‌ಗಳಿಂದಾಗಿ ಹೊಟ್ಟೆ ದೊಡ್ಡದಾಗುತ್ತದೆ . ಅಷ್ಟೇ ಅಲ್ಲ ಇದು ನಮ್ಮ ತ್ವಚೆಯ ಜೊತೆಗೆ ನಮ್ಮ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ.  


ಇದನ್ನೂ ಓದಿ : ರಕ್ತದಲ್ಲಿನ ಅಧಿಕ ಸಕ್ಕರೆ ರೋಗಿಗಳಿಗೆ ಸಂಜೀವನಿ ಈ ಗಿಡಮೂಲಿಕೆ, ಟ್ರೈ ಮಾಡಿ ನೋಡಿ


ಅಂತಹ ಪರಿಸ್ಥಿತಿಯಲ್ಲಿ, ನಾವು ಡಿಟಾಕ್ಸ್ ಪಾನೀಯಗಳನ್ನು ಕುಡಿಯುವ ಮೂಲಕ ಟಾಕ್ಸಿನ್ ಕಡಿಮೆ ಮಾಡಬಹುದು. ಡಿಟಾಕ್ಸ್ ಪಾನೀಯಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಡಿಟಾಕ್ಸ್ ಪಾನೀಯಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ತೂಕ ನಷ್ಟದಲ್ಲಿ ಪರಿಣಾಮಕಾರಿಯಾಗಿದೆ.


ಡಿಟಾಕ್ಸ್ ಪಾನೀಯಗಳ ಪಾಕವಿಧಾನ  : 
ಶುಂಠಿ ಚಹಾ :

ನಾವು ಶುಂಠಿ ಚಹಾವನ್ನು ಸೇವಿಸಿದರೆ, ದೇಹದಿಂದ  ಟಾಕ್ಸಿನ್ ಹೊರ ಹಾಕಲು  ಸಹಾಯ ಮಾಡುತ್ತದೆ. ಹೊಟ್ಟೆಯ ಗ್ಯಾಸ್ ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಉತ್ತಮ ಡಿಟಾಕ್ಸ್ ಪಾನೀಯವಾಗಿ ಕೆಲಸ ಮಾಡುತ್ತದೆ. ಬಿಸಿನೀರಿನಲ್ಲಿ ಶುಂಠಿಯನ್ನು ಕುದಿಸಿ, ಸೋಸಿಕೊಳ್ಳಿ. ಅದಕ್ಕೆ ಒಂದು ಚಮಚ ನಿಂಬೆ ರಸ ಮತ್ತು ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ. 


ಇದನ್ನೂ ಓದಿ : ಪ್ರತಿದಿನ ಚಹಾ ಕುಡಿದರೆ ಹೃದಯಾಘಾತವಾಗುತ್ತದೆಯೇ! ಮಧುಮೇಹಕ್ಕೆ ಕಾರಣವೇ?


ನಿಂಬೆ ಮತ್ತು ಸೌತೆಕಾಯಿ ನೀರು :
ಈ ಡಿಟಾಕ್ಸ್ ಪಾನೀಯವನ್ನು ತಯಾರಿಸಲು, ಸೌತೆಕಾಯಿಯನ್ನು ಕತ್ತರಿಸಿ ಒಂದು ಲೋಟ ನೀರಿನಲ್ಲಿ ಹಾಕಿ. ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಸ್ವಲ್ಪ ಸಮಯದ ನಂತರ ಅದನ್ನು ಕುಡಿಯಬಹುದು. ಈ ಡಿಟಾಕ್ಸ್ ಪಾನೀಯವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ.


ಕ್ಯಾರೆಟ್ ಮತ್ತು ಕಿತ್ತಳೆ ರಸ :
ಈ ಡಿಟಾಕ್ಸ್ ಪಾನೀಯವು ಹಸಿವನ್ನು ಕಡಿಮೆ ಮಾಡುತ್ತದೆ. ಇದು ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ತಿನ್ನುವುದನ್ನು  ತಡೆಯುತ್ತದೆ. ಈ ಪಾನೀಯವು ಫೈಬರ್ ನಲ್ಲಿ ಸಮೃದ್ಧವಾಗಿದ್ದು, ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಕಿತ್ತಳೆ ಮತ್ತು ಕ್ಯಾರೆಟ್ ಮಿಶ್ರಣ ಮಾಡಿ ಮತ್ತು ಅದರ ರಸವನ್ನು ತೆಗೆದರೆ ಸಾಕು ಕ್ಯಾರೆಟ್ ಮತ್ತು ಕಿತ್ತಳೆಯ ಡಿಟಾಕ್ಸ್ ಪಾನೀಯ ರೆಡಿಯಾಗುತ್ತದೆ.


ಸ್ಟ್ರಾಬೆರಿ ಮತ್ತು ಚಕ್ಕೆ : 
ಈ ಡಿಟಾಕ್ಸ್ ಪಾನೀಯವನ್ನು ತಯಾರಿಸಲು, ಸ್ಟ್ರಾಬೆರಿಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ. ನಂತರ ಅದಕ್ಕೆ ಅರ್ಧ ಚಮಚ ಚಕ್ಕೆ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ಈ ಡಿಟಾಕ್ಸ್ ನೀರನ್ನು ಕುಡಿಯಬಹುದು. ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ :  ಚಳಿಗಾಲದಲ್ಲಿ ಬೆಲ್ಲದ ಹಾಲು ಕುಡಿದರೆ ಈ 7 ಕಾಯಿಲೆಗಳಿಂದ ಸಿಗುತ್ತೆ ಪರಿಹಾರ


ಲಸ್ಸಿ :
ಲಸ್ಸಿ ಉತ್ತಮ ಡಿಟಾಕ್ಸ್ ಪಾನೀಯವಾಗಿದೆ. ಮೊಸರು ಪ್ರೋಬಯಾಟಿಕ್‌ಗಳ ಉತ್ತಮ ಮೂಲವಾಗಿದೆ. ಇದು ಕರುಳಿನ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಇದು ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ