ಕ್ಯಾನ್ಸರ್ ಕೂಡ ಬಾರದಂತೆ ತಡೆಯುವ ʼಮ್ಯಾಜಿಕ್ʼ ಹಣ್ಣು; ಮಧುಮೇಹಕ್ಕೂ ದಿವ್ಯೌಷಧಿ... ಮುಂಜಾನೆ ಎದ್ದಂತೆ ತಿಂದರೆ ದೇಹದಲ್ಲಿ ಪವಾಡವೇ ಆಗುವುದು
magic fruit benefits: ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ. ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಹುಳಿ ಅಥವಾ ಖಾರ ತಿಂದರೂ ಆ ರುಚಿಯ ಹೊರತಾಗಿ ಸಿಹಿ ರುಚಿಯೇ ಅನಿಸುತ್ತದೆ. ಅರ್ಧ ಘಂಟೆಯ ನಂತರ ಅಣು ಬಿಡುತ್ತದೆ.
Miracle Fruit : ನಿಮಗೆ ಬೆಟ್ಟದ ನೆಲ್ಲಿಕಾಯಿ ಗೊತ್ತಲ್ಲವೇ!? ಹುಳಿಯಾದರೂ ತಿಂದ ನಂತರ ನೀರು ಕುಡಿದರೆ ಬಾಯೆಲ್ಲಾ ಸಿಹಿಯಾಗಿರುತ್ತದೆ. ನಾವಿಂದು ತಿಳಿಸಿಕೊಡಲಿರುವ ಹಣ್ಣಿನ ಸ್ವಭಾವವೂ ಅಂತಹದ್ದೇ... ಈ ಹಣ್ಣು ವಿದೇಶಗಳಲ್ಲಿ ಹೆಚ್ಚಾಗಿ ಲಭ್ಯವಿರುತ್ತದೆ. ಇದನ್ನು ಮಿರಾಕಲ್ ಫ್ರೂಟ್ ಅಥವಾ ಮಿರಾಕಲ್ ಬೆರ್ರಿ, ಮ್ಯಾಜಿಕ್ ಬೆರ್ರಿ, ಸ್ವೀಟ್ ಬೆರ್ರಿ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಸಿನ್ಸೆಪಾಲಮ್ ಡಲ್ಸಿಫಿಕಮ್.
ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಹಣ್ಣು ಇದು ತಿನ್ನಲು ಸ್ವಲ್ಪ ಸಿಹಿಯಾಗಿರುತ್ತದೆ. ಇನ್ನು ಈ ಹಣ್ಣನ್ನು ತಿಂದ ನಂತರ 30 ನಿಮಿಷಗಳ ಕಾಲ ಏನು ತಿಂದರೂ ಅದು ಸಿಹಿಯಾಗಿಯೇ ಇರುತ್ತದೆ. ಕಹಿ, ಹುಳಿ ತಿಂದರೂ ಕೂಡ ಅದು ಸಿಹಿಯಾಗಿರುತ್ತದೆ. ಅದಕ್ಕೊಂದು ವಿಶೇಷ ಕಾರಣವಿದೆ.
ಇದನ್ನೂ ಓದಿ: ಪಿಎಫ್ ಖಾತೆದಾರರಿಗೆ ಭರ್ಜರಿ ಲಾಭ !ಇಡಿಎಲ್ಐ ಮೂಲಕ ಸಿಗಲಿದೆ ಹೆಚ್ಚುವರಿ 7 ಲಕ್ಷ
ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ. ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಹುಳಿ ಅಥವಾ ಖಾರ ತಿಂದರೂ ಆ ರುಚಿಯ ಹೊರತಾಗಿ ಸಿಹಿ ರುಚಿಯೇ ಅನಿಸುತ್ತದೆ. ಅರ್ಧ ಘಂಟೆಯ ನಂತರ ಅಣು ಬಿಡುತ್ತದೆ.
ಮೂಲತಃ ಪಶ್ಚಿಮ ಆಫ್ರಿಕಾದಲ್ಲಿ ಬೆಳೆಯುವ ಈ ಹಣ್ಣಿನ ಬಗ್ಗೆ ಅನೇಕರಿಗೆ ತಿಳಿದೇ ಇಲ್ಲ. 18ನೇ ಶತಮಾನದವರೆಗೆ ಇದನ್ನು ಅಲ್ಲಿನ ಜನರಷ್ಟೆ ತಿನ್ನುತ್ತಿದ್ದರು. ಆ ನಂತರ ಯುರೋಪಿಯನ್ ಚೆವಲಿಯರ್ ಈ ಹಣ್ಣನ್ನು ಜಗತ್ತಿಗೆ ಪರಿಚಯಿಸಿದರು.
ಒಳಗೆ ಒಂದೇ ಬೀಜವಿರುವ ಈ ಹಣ್ಣನ್ನು ಅಮೆರಿಕನ್ನರು ಬಳಸಲಾರಂಭಿಸಿದ್ದು 1980ರಿಂದ. ಈ ಹಣ್ಣಿನ ಬಗ್ಗೆ ಪ್ರಚಾರದ ಕೊರತೆಯಿಂದಾಗಿ, ಇದನ್ನು ಕೆಲವೇ ದೇಶಗಳಲ್ಲಿ ಬೆಳೆಸಲಾಗುತ್ತದೆ.
ಈ ಮ್ಯಾಜಿಕ್ ಹಣ್ಣನ್ನು ಹಲವಾರು ಔಷಧಗಳಲ್ಲಿ ಬಳಸಲಾಗುತ್ತದೆ. ವರದಿಯ ಪ್ರಕಾರ, ಈ ಹಣ್ಣನ್ನು ನೈಜೀರಿಯಾದಲ್ಲಿ ಮಧುಮೇಹ ಮತ್ತು ಅಸ್ತಮಾದಂತಹ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದಲ್ಲದೆ, ಕ್ಯಾನ್ಸರ್ ಮತ್ತು ಪುರುಷ ದುರ್ಬಲತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ