ಬೆಂಗಳೂರು : ಬೆಳ್ಳಗಿನ ತೆಳ್ಳಗಿನ ದೇಹ ಹೊಂದಬೇಕು ಎನ್ನುವುದು ಬಹುತೇಕ ಹೆಣ್ಣು ಮಕ್ಕಳು ಕಾಣುವ ಕನಸು. ಆದರೆ ಎಲ್ಲರದ್ದೂ ಬಳುಕುವ ಬಳ್ಳಿಯಂಥ ದೇಹ ಆಗಿರುವುದಿಲ್ಲ. ದೇಹ ತೂಕ ಹೆಚ್ಚಾಗುವುದಕ್ಕೆ ನಾನಾ ಕಾರಣಗಳಿರುತ್ತವೆ. ಹಾಗೆಯೇ ತೂಕ ಇಳಿಸುವ ವಿಧಾನ ಕೂಡಾ ಹಲವು.  ವ್ಯಾಯಾಮ, ಜಿಮ್ ಅಥವಾ ಆಹಾರ ಕ್ರಮದಂತಹ ಅನೇಕ ವಿಧಾನಗಳನ್ನು ಪ್ರಯತ್ನಿಸಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಅನೇಕರನ್ನು ನಾವು ನೋಡಿರುತ್ತೇವೆ.  ಆದರೆ ಈ ಪಾನೀಯವನ್ನು  ಕೇವಲ  15 ದಿನಗಳವರೆಗೆ ಸೇವಿಸುವುದರಿಂದ, ದೇಹದ  ಪ್ರತಿಯೊಂದು ಭಾಗದಿಂದಲೂ ಕೊಬ್ಬು ಕರಗಲು ಆರಂಭಿಸುತ್ತದೆ.  ಈ ಪಾನೀಯವನ್ನು ತಯಾರಿಸಲು ಸೋಂಪು, ಒಣ ಶುಂಠಿ, ಮೆಂತ್ಯ ಪುಡಿ, ಚಕ್ಕೆ ಮತ್ತು ಕಲ್ಲು ಉಪ್ಪನ್ನು ಬಳಸಲಾಗುತ್ತದೆ. ಇವೆಲ್ಲವೂ ನಿಮ್ಮ ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಾಯ ಮಾಡುತ್ತದೆ.  


COMMERCIAL BREAK
SCROLL TO CONTINUE READING

ತೂಕ ಇಳಿಸುವ ಪಾನೀಯವನ್ನು ತಯಾರಿಸಲು ಬೇಕಾಗುವ ಪದಾರ್ಥಗಳು :
ಮೆಂತ್ಯೆ ಪುಡಿ 2 ಚಮಚ 
ಸೋಂಪು  ಪುಡಿ 2 ಚಮಚ 
ಶುಂಠಿ ಪುಡಿ 2 ಚಮಚ 
ಚಕ್ಕೆ ಪುಡಿ 
ಕಲ್ಲು ಉಪ್ಪು 1/2 ಚಮಚ 
ನಿಂಬೆ ರಸ ರುಚಿಗೆ ತಕ್ಕಂತೆ 


ಇದನ್ನೂ ಓದಿ  : ನಿಷ್ಪ್ರಯೋಜಕ ಎಂದು ಎಸೆಯುವ ಈ ನೀರನ್ನು ಕೂದಲಿಗೆ ಹಚ್ಚಿ ! ವಾರದಲ್ಲೇ ಸಿಗುವುದು ಕೂದಲು ಉದುರುವುದಕ್ಕೆ ಪರಿಹಾರ


ತೂಕ ಇಳಿಸುವ ಪಾನೀಯವನ್ನು ಹೇಗೆ ತಯಾರಿಸುವುದು? :
1.ತೂಕ ಇಳಿಸುವ ಪಾನೀಯವನ್ನು ತಯಾರಿಸಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
2.ನಂತರ, ನಿಂಬೆ ಹೊರತುಪಡಿಸಿ, ಎಲ್ಲಾ ಇತರ ವಸ್ತುಗಳನ್ನು ಒಟ್ಟಿಗೆ ಮಿಶ್ರಣ ಮಾಡಿ 
3.ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಈ ಮಿಶ್ರಣದ  1/2 ಟೀಸ್ಪೂನ್ ಸೇರಿಸಿ 
4.ನಂತರ ನೀವು ಊಟಕ್ಕೆ ಅರ್ಧ ಗಂಟೆ ಮೊದಲು ಈ ಪಾನೀಯವನ್ನು ಕುಡಿಯಿರಿ. 


ತೂಕ ನಷ್ಟ ಪಾನೀಯದಲ್ಲಿ ಬೆರೆಸಿದ ಪದಾರ್ಥಗಳ ಪ್ರಯೋಜನಗಳು:
ಚಕ್ಕೆ : 
ಚಕ್ಕೆ ಸೇವನೆಯು ರಕ್ತದಲ್ಲಿನ ಸಕ್ಕರೆ ಮತ್ತು ತೂಕ ಎರಡನ್ನೂ ನಿರ್ವಹಿಸಲು ಸಹಾಯ ಮಾಡುತ್ತದೆ. 


ಮೆಂತ್ಯ ಕಾಳುಗಳ ಪುಡಿ   :
ಮೆಂತ್ಯ ಕಾಳುಗಳಲ್ಲಿ ಹೆಚ್ಚಿನ ನಾರಿನಂಶವಿದ್ದು ಇದು ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಮಧುಮೇಹವನ್ನು ನಿಯಂತ್ರಿಸುತ್ತದೆ. 


ಇದನ್ನೂ ಓದಿ  : ಐವಿಎಫ್ ದಂಪತಿಗಳ ಪಯಣ: ವಿಜ್ಞಾನ ಹಾಗೂ ಮಾನವನ ಸ್ಪರ್ಶದಿಂದ ಜೀವನದಲ್ಲಿ ಪವಾಡ ಸೃಷ್ಟಿ!


ಸೋಂಪು ಪೌಡರ್  :
ಸೋಂಪು ದೇಹದಲ್ಲಿನ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. 


ಒಣ ಶುಂಠಿ :
ಒಣ ಶುಂಠಿಯನ್ನು ಸೇವಿಸುವುದರಿಂದ ಕೊಬ್ಬನ್ನು ತ್ವರಿತವಾಗಿ ಕರಗಿಸುತ್ತದೆ. ಸಹಾಯ ಮಾಡುತ್ತದೆ. 


ಕಲ್ಲು ಉಪ್ಪು :
ಕಲ್ಲು ಉಪ್ಪಿನ ಸೇವನೆಯು ನಿಮ್ಮ ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ  : ಕಪ್ಪು ಟೊಮೆಟೊ ಕ್ಯಾನ್ಸರ್‌ನಿಂದ ನೀಡುತ್ತೆ ಮುಕ್ತಿ, ನೀವು ಎಂದಾದರೂ ತಿಂದಿದ್ದೀರಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.