ಐವಿಎಫ್ ದಂಪತಿಗಳ ಪಯಣ: ವಿಜ್ಞಾನ ಹಾಗೂ ಮಾನವನ ಸ್ಪರ್ಶದಿಂದ ಜೀವನದಲ್ಲಿ ಪವಾಡ ಸೃಷ್ಟಿ!

IVF couple journey: ಗರ್ಭ ಧರಿಸಲು ಆಗದ ಸಂದರ್ಭದಲ್ಲಿ ಎದುರಾಗುವ ನಿರಾಶೆ, ಅಪರಾಧಿ ಪ್ರಜ್ಞೆ ಮತ್ತು ಇನ್ನೂ ಕೆಲವೊಮ್ಮೆ ಕೋಪದ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಫಲವತ್ತತೆಯ ಸಮಸ್ಯೆ ನಿವಾರಣೆಗೆ ತಜ್ಞ ವೈದ್ಯರ ತಂಡದ ಅಗತ್ಯವಿರುತ್ತದೆ.   

Written by - Chetana Devarmani | Last Updated : Jul 26, 2023, 12:50 PM IST
  • ವಿಜ್ಞಾನ ಹಾಗೂ ಮಾನವನ ಸ್ಪರ್ಶದಿಂದ ಜೀವನದಲ್ಲಿ ಪವಾಡ ಸೃಷ್ಟಿ
  • ಫಲವತ್ತತೆಯ ಸಮಸ್ಯೆ ನಿವಾರಣೆಗೆ ತಜ್ಞ ವೈದ್ಯರ ತಂಡದ ಅಗತ್ಯ
  • ಭ್ರೂಣಗಳನ್ನು ಬ್ಲಾಸ್ಟೋಸಿಸ್ಟ್ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ
ಐವಿಎಫ್ ದಂಪತಿಗಳ ಪಯಣ: ವಿಜ್ಞಾನ ಹಾಗೂ ಮಾನವನ ಸ್ಪರ್ಶದಿಂದ ಜೀವನದಲ್ಲಿ ಪವಾಡ ಸೃಷ್ಟಿ!  title=

IVF couple journey: ದಂಪತಿಗಳಿಗೆ ಐವಿಎಫ್ ಪಿತೃತ್ವ ಅತ್ಯಂತ ಸಂತೋಷವನ್ನು ತಂದುಕೊಡುತ್ತದೆ. ಆದರೆ, ಅದರ ಹಿಂದೆ ದಂಪತಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯು ಸಾಮಾನ್ಯವಾಗಿ ಕಾಣುವುದಿಲ್ಲ. ಅಷ್ಟೇ ಅಲ್ಲ, ದಂಪತಿಗಳಲ್ಲಿ ಈ ಸಂತೋಷವನ್ನು ಉಂಟು ಮಾಡುವ ಪ್ರಕ್ರಿಯೆಯಲ್ಲಿ ವೈದ್ಯರ ತಂಡದ ಶ್ರಮ ಮತ್ತು ಸಹಾಯವೂ ಅಡಗಿರುತ್ತದೆ. ಗರ್ಭ ಧರಿಸಲು ಆಗದ ಸಂದರ್ಭದಲ್ಲಿ ಎದುರಾಗುವ ನಿರಾಶೆ, ಅಪರಾಧಿ ಪ್ರಜ್ಞೆ ಮತ್ತು ಇನ್ನೂ ಕೆಲವೊಮ್ಮೆ ಕೋಪದ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಫಲವತ್ತತೆಯ ಸಮಸ್ಯೆ ನಿವಾರಣೆಗೆ ತಜ್ಞ ವೈದ್ಯರ ತಂಡದ ಅಗತ್ಯವಿರುತ್ತದೆ. ಈ ತಂಡ ದಂಪತಿಗಳಿಗೆ ಅಗತ್ಯವಾದ ಚಿಕಿತ್ಸೆ ಮತ್ತು ಭಾವನಾತ್ಮಕವಾದ ಮಾರ್ಗದರ್ಶನವನ್ನು ನೀಡುವ ಅವಶ್ಯಕತೆ ಇರುತ್ತದೆ.

ಐವಿಎಫ್ ದಂಪತಿಯ ಪಯಣ ಮತ್ತು ವಿಜ್ಞಾನ ಹಾಗೂ ಮಾನವನ ಸ್ಪರ್ಶವು ಹೇಗೆ ಜೀವನದ ಪವಾಡವನ್ನು ಸೃಷ್ಟಿಸುತ್ತದೆ ಎಂಬುದನ್ನು ಇಲ್ಲಿ ನೋಡೋಣ

ಫಲವತ್ತತೆ ಅಂದರೆ ಫರ್ಟಿಲಿಟಿ ಕ್ಲಿನಿಕ್ ಗೆ ಬರುವ ಮುನ್ನ ದಂಪತಿಗಳು ಹಲವಾರು ಅಡೆತಡೆಗಳನ್ನು ದಾಟಬೇಕಾಗುತ್ತದೆ. ಇದರರ್ಥ ಹಲವು ಸಮಸ್ಯೆಗಳು ಅವರಿಗೆ ಎದುರಾಗುತ್ತವೆ. ಸ್ವಾಭಾವಿಕವಾಗಿ ಮಗುವನ್ನು ಪಡೆಯಲು ಅಥವಾ ಸ್ವಾಭಾವಿಕವಾಗಿ ಗರ್ಭ ಧರಿಸಲು ಸಾಧ್ಯವಾಗದಿರುವುದು ಬಹು ಕಷ್ಟದ ಪರಿಸ್ಥಿತಿಯಾಗಿರುತ್ತದೆ. ಇಂತಹ ಹಲವಾರು ಸಂದಿಗ್ಧ ಪರಿಸ್ಥಿತಿಗಳ ನಡುವೆ ಐವಿಎಫ್ ಗೆ ಮೊರೆ ಹೋಗಲು ನಿರ್ಧರಿಸುವುದು ಒಂದು ರೀತಿಯ ಭಾವನಾತ್ಮಕವಾದ ರೋಲರ್ ರೋಸ್ಟರ್ ಆದಂತಾಗಬಹುದು. ಒಂದು ಕಡೆ ಈ ಐವಿಎಫ್ ದಂಪತಿಗಳಲ್ಲಿ ಭರವಸೆಯನ್ನು ಮೂಡಿಸಿದರೆ, ಅದೇ ಸಂದರ್ಭದಲ್ಲಿ ಭವಿಷ್ಯದ ಫಲಿತಾಂಶ ಏನಾಗಬಹುದೋ ಏನೋ ಎಂಬ ಗಾಢವಾದ ಪ್ರಶ್ನೆ ಮತ್ತು ಆತಂಕವನ್ನೂ ಹುಟ್ಟು ಹಾಕುತ್ತದೆ.

ಇದನ್ನೂ ಓದಿ: ಈ ಐದು ರೋಗಗಳನ್ನು ಬುಡಸಮೇತ ಕಿತ್ತೆಸೆಯುವ ಶಕ್ತಿ ಹಲಸಿನ ಬೀಜಕ್ಕಿದೆ ! ಎಸೆಯುವ ಮುನ್ನ ಯೋಚಿಸಿ

ಐವಿಎಫ್ ಚಿಕಿತ್ಸೆಯನ್ನು ಆರಂಭಿಸುವ ಸಂದರ್ಭದಲ್ಲಿ ಗಮನಾರ್ಹ ಪ್ರಮಾಣದ ಮಾಹಿತಿಯನ್ನು ಕ್ರೋಢಿಕರಿಸುವ ಅಗತ್ಯವಿರುತ್ತದೆ. ಇದು ಹಾರ್ಮೋನ್ ಗಳ ಕಟ್ಟುಪಾಡುಗಳು, ಇಂಜೆಕ್ಷನ್ ನೀಡುವ ವೇಳಾಪಟ್ಟಿಗಳು, ಅಲ್ಟ್ರಾಸೌಂಡ್ ನ ನಿಗದಿತ ಸಮಯಗಳು ಹಾಗೂ ವೈದ್ಯಕೀಯ ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ. ಐವಿಎಫ್ ಗಾಗಿ ಯಾವ ಕ್ಲಿನಿಕ್ ಅನ್ನು ಬಳಸಬೇಕು, ಯಾವ ರೀತಿಯ ತಜ್ಞರನ್ನು ಸಂಪರ್ಕಿಸಬೇಕು, ಕೆಲಸ ಸಮಯದಿಂದ ದೂರವಿರಬೇಕೆ, ಈ ವಿಚಾರವನ್ನು ಯಾರಿಗೆ ತಿಳಿಸಬೇಕು ಹಾಗೂ ಎಷ್ಟು ಭ್ರೂಣಗಳನ್ನು ವರ್ಗಾಯಿಸಬೇಕು ಎಂಬುದು ಸೇರಿದಂತೆ ಬಹು ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವಿರುತ್ತದೆ. ಐವಿಎಫ್ ನ ಒತ್ತಡವು ಸುಲಭವಾಗಿ ಗೊಂದಲಕ್ಕೊಳಗಾದ ಮತ್ತು ಅತಿಯಾದ ಹೊರೆಯ ಭಾವನೆಯನ್ನು ಬಿಡಬಹುದಾಗಿದೆ. ಈ ಕಾರಣಕ್ಕಾಗಿಯೇ ಐವಿಎಫ್ ವಿಚಾರದಲ್ಲಿ ವೈದ್ಯರು ಮತ್ತು ಸಲಹೆಗಾರರ ಪಾತ್ರ ನಿರ್ಣಾಯಕವಾಗಿರುತ್ತದೆ.

ದಂಪತಿಗಳು ಫರ್ಟಿಲಿಟಿ ಕ್ಲಿನಿಕ್ ಗೆ ಬಂದಾಗ ಅವರು ಮೊದಲ ಮೈಲಿಗಲ್ಲು ಸ್ಥಾಪಿಸಿದಂತಾಗುತ್ತದೆ. ಅಲ್ಲಿ ಫರ್ಟಿಲಿಟಿ ತಜ್ಞರು ದಂಪತಿಗಳಿಗೆ ಕೆಲವು ಅಗತ್ಯವಾದ ಫರ್ಟಿಲಿಟಿ ಪರೀಕ್ಷೆಗಳನ್ನು ಮತ್ತು ಸಲಹೆಗಳನ್ನು ನೀಡುತ್ತಾರೆ. ನಂತರ ದಂಪತಿಗೆ ಲಭ್ಯವಿರುವ ಸರಿಯಾದ ಕ್ರಮದ ಫರ್ಟಿಲಿಟಿ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಸಲಹೆಗಳನ್ನು ನೀಡುತ್ತಾರೆ.

ಒಂದು ವೇಳೆ ದಂಪತಿಗೆ ಐವಿಎಫ್ ಅನ್ನು ಶಿಫಾರಸು ಮಾಡಿದ್ದಲ್ಲಿ ಕನ್ಸಲ್ಟೆಂಟ್ ಗಳು ಕೆಲವು ಇಂಜೆಕ್ಷನ್ ಗಳನ್ನು ನೀಡುತ್ತಾರೆ ಮತ್ತು ಮಹಿಳೆಯರ ದೇಹದಿಂದ ಮೊಟ್ಟೆಗಳನ್ನು ಮತ್ತು ಪತಿಯ ವೀರ್ಯವನ್ನು ಸಂಗ್ರಹಿಸುತ್ತಾರೆ. ಅರ್ಹ ಅಥವಾ ತಜ್ಞ ಭ್ರೂಣಶಾಸ್ತ್ರಜ್ಞತರು ಈ ಮೊಟ್ಟೆ ಮತ್ತು ವೀರ್ಯವನ್ನು ರಕ್ಷಿಸಿಡುತ್ತಾರೆ. ಗರ್ಭಾಶಯಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕೃತಕ ವಾತಾವರಣವನ್ನು ಸೃಷ್ಟಿಸುವ ಮೂಲಕ ಅವುಗಳನ್ನು ಪ್ರಯೋಗಾಲಯದಲ್ಲಿ ಹೆಚ್ಚು ಫಲವತ್ತಾಗುವಂತೆ ಮಾಡುತ್ತಾರೆ. ಭ್ರೂಣಗಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಏಕೆಂದರೆ, ಅವುಗಳು 200-300 ಮೈಕ್ರಾನ್ ಗಾತ್ರದಲ್ಲಿರುತ್ತವೆ ಮತ್ತು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಭ್ರೂಣಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಣೆ ಮಾಡದಿದ್ದರೆ ಅವುಗಳು ತಮ್ಮ ಕಾರ್ಯ ಸಾಧ್ಯತೆಯನ್ನು ಕಳೆದುಕೊಳ್ಳುತ್ತವೆ ಮತ್ತು ಗರ್ಭಧಾರಣೆ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಕಪ್ಪು ಟೊಮೆಟೊ ಕ್ಯಾನ್ಸರ್‌ನಿಂದ ನೀಡುತ್ತೆ ಮುಕ್ತಿ, ನೀವು ಎಂದಾದರೂ ತಿಂದಿದ್ದೀರಾ?

ಭ್ರೂಣಗಳನ್ನು ಬ್ಲಾಸ್ಟೋಸಿಸ್ಟ್ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ನಂತರದಲ್ಲಿ ಅವುಗಳನ್ನು ಗರ್ಭಧಾರಣೆ ಹೊಂದಲು ಪೂರಕವಾಗಿ ಗರ್ಭಾಶಯಕ್ಕೆ ವರ್ಗಾವಣೆ ಮಾಡಲಾಗುತ್ತದೆ.

ಎರಡು ವಾರಗಳ ಕಾಯುವಿಕೆ- ಇದು ಗರ್ಭಧಾರಣೆ ಚಕ್ರದ ಅತ್ಯಂತ ಸವಾಲಿನ ಭಾಗವಾಗಿದೆ. ಭ್ರೂಣ ವರ್ಗಾವಣೆ ಮತ್ತು ಗರ್ಭಧಾರಣೆಯ ಪರೀಕ್ಷೆಯ ನಡುವಿನ 10-14 ದಿನಗಳ ಮಧ್ಯಂತರ ಸಮಯದಲ್ಲಿ ನಿಮ್ಮಲ್ಲಿ ಹುಟ್ಟಿಕೊಳ್ಳುವ ಆಶಾಕಿರಣಗಳಂತೆಯೇ ಆತಂಕಗಳೂ ಸೃಷ್ಟಿಯಾಗುತ್ತವೆ. ನಿಯಮಿತವಾದ ಇಂಜೆಕ್ಷನ್ ಗಳನ್ನು ಪಡೆಯುವುದು, ಅಪಾಯಿಂಟ್ಮೆಂಟ್ ಗಳು ಮತ್ತು ಕಾರ್ಯವಿಧಾನಗಳನ್ನು ನಡೆಸಬೇಕಾಗಿರುವುದರಿಂದ ಹಲವು ವಾರಗಳ ನಂತರದ ಕಾಯುವಿಕೆಯು ನಿಮಗೆ ಬೇಸರ ತರಬಹುದು. ಈ ಚಿಕಿತ್ಸೆ ಹಂತದಲ್ಲಿ ಅನೇಕ ಜನರು ಅತಿಯಾದ ಭಾವನೆಗಳು, ವೇದನೆಗಳನ್ನು ಅನುಭವಿಸುತ್ತಾರೆ. ಆದಾಗ್ಯೂ ಈ ಹಂತದಲ್ಲಿ ಗರ್ಭಾವಸ್ಥೆಯ ಲಕ್ಷಣಗಳಿಗೆ ನಿರಂತರವಾದ ಎಚ್ಚರಿಕೆ ಮತ್ತು ಕಾಳಜಿಯನ್ನು ಹೊಂದಿರುವುದಾಗಿ ಹೇಳಿಕೊಳ್ಳುತ್ತಾರೆ.
ಈ ಪ್ರಕ್ರಿಯೆಯಲ್ಲಿ ಏರಿಳಿತಗಳು ಉಂಟಾಗುವ ಹಿನ್ನೆಲೆಯಲ್ಲಿ ಫರ್ಟಿಲಿಟಿ ಕ್ಲಿನಿಕ್ ನಲ್ಲಿ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಜೊತೆಗೆ ಮಾನಸಿಕ ಕೌನ್ಸೆಲಿಂಗ್ ಅನ್ನೂ ಪಡೆಯುವುದು ಸೂಕ್ತ ಎಂದು ಶಿಫಾರಸು ಮಾಡಲಾಗುತ್ತದೆ.

ಸಮತೋಲನದಲ್ಲಿ ಭರವಸೆ ಮತ್ತು ಆತಂಕ- ಇಡೀ ಐವಿಎಫ್ ಪ್ರಕ್ರಿಯೆ ಸಂದರ್ಭದಲ್ಲಿ ಉಂಟಾಗುವ ನಿರಾಶೆಗಳನ್ನು ಹೋಗಲಾಡಿಸಿ ಆಶಾವಾದವನ್ನು ಕಾಪಾಡಿಕೊಳ್ಳಲು ಪ್ರಯತ್ನ ನಡೆಸುವುದು ಅತ್ಯಂತ ಕಠಿಣವಾಗಿರುತ್ತದೆ ಎಂದು ಹಲವರು ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಹುಪಾಲು ಜನರಿಗೆ ಭರವಸೆ ಮತ್ತು ಆತಂಕಗಳು ಐವಿಎಫ್ ಪ್ರಕ್ರಿಯೆಯ ಸಾಮಾನ್ಯ ಅಂಶಗಳಾಗಿವೆ. ಆದಾಗ್ಯೂ ದಂಪತಿಗಳು ಅಂತಿಮವಾಗಿ ಗರ್ಭಿಣಿಯಾದಾಗ ಐವಿಎಫ್ ಕಾರ್ಯವಿಧಾನದ ಎಲ್ಲಾ ತೊಂದರೆಗಳು ಯೋಗ್ಯವೆಂದು ತೋರುತ್ತವೆ ಎಂದು ಹೇಳುತ್ತಾರೆ.

ಲೇಖಕರು: ಡಾ.ಮಹೇಶ್ ಕೋರೆಗೋಳ್, ಫರ್ಟಿಲಿಟಿ ಕನ್ಸಲ್ಟೆಂಟ್, ನೊವಾ ಐವಿಎಫ್ ಫರ್ಟಿಲಿಟಿ, ಕೋರಮಂಗಲ, ಬೆಂಗಳೂರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News