ನಿಷ್ಪ್ರಯೋಜಕ ಎಂದು ಎಸೆಯುವ ಈ ನೀರನ್ನು ಕೂದಲಿಗೆ ಹಚ್ಚಿ ! ವಾರದಲ್ಲೇ ಸಿಗುವುದು ಕೂದಲು ಉದುರುವುದಕ್ಕೆ ಪರಿಹಾರ
ಪ್ರಾಚೀನ ಕಾಲದಿಂದಲೂ, ಅಕ್ಕಿ ನೀರನ್ನು ಕೂದಲಿಗೆ ಅಮೂಲ್ಯವಾದ ಪರಿಹಾರವೆಂದು ಪರಿಗಣಿಸಲಾಗಿದೆ. ಅಕ್ಕಿ ನೀರಿನಲ್ಲಿ ವಿಟಮಿನ್ ಬಿ, ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳು ಮತ್ತು ನಮ್ಮ ಕೂದಲಿಗೆ ಪ್ರಯೋಜನಕಾರಿ ಪ್ರೋಟೀನ್ ಗಳು ಸಮೃದ್ಧವಾಗಿವೆ.
ಬೆಂಗಳೂರು : ಕೂದಲು ನಮ್ಮ ವೈಯಕ್ತಿಕ ಸೌಂದರ್ಯದ ಪ್ರಮುಖ ಭಾಗವಾಗಿದೆ. ಸುಂದರ ದಟ್ಟ ಕೂದಲು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಇಂದಿನ ಒತ್ತಡದ ಬದುಕಿನಲ್ಲಿ ನಾವು ಅನುಸರಿಸುತ್ತಿರುವ ಜೀವನಶೈಲಿ, ಮಾಲಿನ್ಯ, ಕೆಟ್ಟ ಆಹಾರ ಪದ್ಧತಿಗಳಿಂದ ನಮ್ಮ ಕೂದಲು ಹಾಳಾಗುತ್ತದೆ. ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಕೂದಲಿನ ಸಮಸ್ಯೆಗಳು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿವೆ. ಆದರೆ ನೀವು ಎಂದಾದರೂ ಅಕ್ಕಿ ನೀರನ್ನು ಬಳಸಿ ಈ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದೀರಾ? ಹೌದು, ಅಕ್ಕಿ ನೀರನ್ನು ಬಳಸಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು. ಅಕ್ಕಿ ನೀರಿನಿಂದ ಕೂದಲಿನ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಪ್ರಾಚೀನ ಕಾಲದಿಂದಲೂ, ಅಕ್ಕಿ ನೀರನ್ನು ಕೂದಲಿಗೆ ಅಮೂಲ್ಯವಾದ ಪರಿಹಾರವೆಂದು ಪರಿಗಣಿಸಲಾಗಿದೆ. ಅಕ್ಕಿ ನೀರಿನಲ್ಲಿ ವಿಟಮಿನ್ ಬಿ, ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳು ಮತ್ತು ನಮ್ಮ ಕೂದಲಿಗೆ ಪ್ರಯೋಜನಕಾರಿ ಪ್ರೋಟೀನ್ ಗಳು ಸಮೃದ್ಧವಾಗಿವೆ. ಇದು ಕೂದಲನ್ನು ಬಲಪಡಿಸುವುದಲ್ಲದೆ, ಅವುಗಳನ್ನು ಮೃದುವಾಗಿ, ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ : ಇನ್ಮುಂದೆ ವಿದ್ಯಾರ್ಥಿಗಳು ತರಗತಿಗಳಿಗೆ ಇನ್ಸುಲಿನ್ ಹಾಗೂ ಗ್ಲೂಕೋಮೀಟರ್ ಗಳನ್ನು ತೆಗೆದುಕೊಂಡು ಹೋಗಬಹುದು
ಅಕ್ಕಿ ನೀರನ್ನು ಬಳಸಿ ಕೂದಲಿನ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
1. ಕೂದಲು ಉದುರುವಿಕೆ : ನಿಮ್ಮ ಕೂದಲು ಉದುರುತ್ತಿದ್ದರೆ ಅಕ್ಕಿ ನೀರನ್ನು ಕೂದಲಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಇದು ಕೂದಲನ್ನು ರಕ್ಷಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಈ ನೀರನ್ನು ಕೂದಲಿಗೆ ಹಚ್ಚಿ 20-30 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.
2. ಡ್ಯಾಂಡ್ರಫ್ : ಕೂದಲು ಉದುರುವ ಜಾಗಕ್ಕೆ ಅಕ್ಕಿ ನೀರನ್ನು ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದಕ್ಕಾಗಿ, ಅಕ್ಕಿ ನೀರನ್ನು ಕೂದಲಿನ ಮೇಲೆ ಕನಿಷ್ಠ ಒಂದು ಗಂಟೆಗಳ ಕಾಲ ಬಿಡಿ ಮತ್ತು ನಂತರ ಶುದ್ದ ನೀರಿನಿಂದ ಕೂದಲನ್ನು ಸರಿಯಾಗಿ ತೊಳೆಯಿರಿ.
3. ಒಣ ಕೂದಲು : ಕೂದಲು ಶುಷ್ಕವಾಗುತ್ತಿದ್ದರೆ ಅದು ದುರ್ಬಲವಾಗುವ ಸಾಧ್ಯತೆ ಕೂಡಾ ಹೆಚ್ಚು. ಕೂದಲಿಗೆ ಅಕ್ಕಿ ನೀರನ್ನು ಲೇಪಿಸಿದರೆ ಅದನ್ನು ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಇದರಿಂದ ಶುಷ್ಕ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ : ಎಂದಿಗೂ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನಬೇಡಿ..! ʼಇವರಿಗೆ ಮಾತ್ರʼ..
4. ಕೂದಲಿನ ಹೊಳಪು : ಅಕ್ಕಿ ನೀರನ್ನು ಬಳಸಿ ಕೂದಲಿನ ಹೊಳಪನ್ನು ಹೆಚ್ಚಿಸಬಹುದು. ಇದಕ್ಕಾಗಿ ಕೂದಲಿಗೆ ಅಕ್ಕಿ ನೀರನ್ನು ಹಚ್ಚಿ 15-20 ನಿಮಿಷ ಹಾಗೆಯೇ ಇಡಿ. ನಂತರ ಕೂದಲನ್ನು ಒಣಗಿಸಿ.
ಗಮನಿಸಿ, ಅಕ್ಕಿ ನೀರನ್ನು ಬಳಸಿದ ನಂತರ ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯುವುದು ಬಹಳ ಮುಖ್ಯ. ಇಲ್ಲವಾದರೆ ಇಲ್ಲದಿದ್ದರೆ ಅದು ತಲೆಹೊಟ್ಟಿನ ಸಮಸ್ಯೆಯನ್ನು ಹುಟ್ಟು ಹಾಕಬಹುದು. ಇದರ ಹೊರತಾಗಿ, ನಿಮ್ಮ ಕೂದಲಿನಲ್ಲಿ ಯಾವುದೇ ಅಂಶದ ಸಮಸ್ಯೆ ಇದ್ದರೆ, ತಜ್ಞರು ಅಥವಾ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.