ನವದೆಹಲಿ  : ICMR Guidelines for Drone: ದೇಶದಲ್ಲಿ ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಇದೇ ತಂತ್ರಜ್ಞಾನದ ಸಹಾಯದಿಂದ ದೂರದ ಪ್ರದೇಶಗಳಿಗೆ  ಔಷಧಗಳನ್ನು ಸುಲಭವಾಗಿ ತಲುಪಿಸುವುದು ಸಾಧ್ಯವಾಗಿದೆ.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇದಕ್ಕಾಗಿ  ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿದೆ. 


COMMERCIAL BREAK
SCROLL TO CONTINUE READING

ಯೋಜನೆ ಸಿದ್ಧಪಡಿಸಿದ ಐಸಿಎಂಆರ್  : 
ಮಾಹಿತಿಯ ಪ್ರಕಾರ, ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಪೂರೈಕೆಗಾಗಿ ಡ್ರೋನ್‌ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದಾಖಲೆಯನ್ನು ಸಿದ್ಧಪಡಿಸಿದೆ. ಕೋವಿಡ್-19 ಲಸಿಕೆಯನ್ನು ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ನಾಗಾಲ್ಯಾಂಡ್‌ಗೆ ತಲುಪಿಸಲು ಡ್ರೋನ್‌ಗಳನ್ನು ಬಳಸಿದ ನಂತರ ಐಸಿಎಂಆರ್ ಈ ಮಾದರಿಯನ್ನು ಸಿದ್ಧಪಡಿಸಿದೆ.


ಇದನ್ನೂ ಓದಿ : ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಲು ಇದುವೇ ಪ್ರಮುಖ ಕಾರಣ ..! ಅಪಾಯಕ್ಕಿಂತ ಮುನ್ನ ಎಚ್ಚೆತ್ತುಕೊಳ್ಳಿ


ಯಾವ ಸರಕುಗಳ  ವಿತರಣೆಗೆ ಡ್ರೋನ್ : 
ಸಿದ್ಧಪಡಿಸಿದ ದಾಖಲೆಯ ಪ್ರಕಾರ, ಕೋವಿಡ್-19 ಲಸಿಕೆ ಮತ್ತು ಸೀರಮ್, ಮಾತ್ರೆಗಳು ಮತ್ತು ಕ್ಯಾಪ್ಸುಲ್‌ಗಳು, ಬಾಟಲಿಗಳಲ್ಲಿನ ಸಿರಪ್, ಸಿರಿಂಜ್‌ಗಳು, ಬ್ಲಡ್ ಬ್ಯಾಗ್ , 2AOC ಮತ್ತು 8AOC ನಡುವಿನ ಶೇಖರಣಾ ತಾಪಮಾನ ಹೊಂದಿರುವ ಇತರ ಮಾದರಿಗಳನ್ನು ಡ್ರೋನ್ ಮೂಲಕ ಮಾತ್ರ ಸಾಗಿಸಬಹುದು.


 ಭಾರತದ ದುರ್ಗಮ ಪ್ರದೇಶಗಳಿಗೆ ನಡೆಯಲಿದೆ 'ಲಸಿಕೆ ವಿತರಣೆ : 
ಈ ಬಗ್ಗೆ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಪ್ರೊ. ಡಾ.ಬಲರಾಮ್ ಭಾರ್ಗವ ಅವರು,  1.3 ಬಿಲಿಯನ್ ರಾಷ್ಟ್ರವಾಗಿ, ನಮ್ಮ ಆರೋಗ್ಯ ವ್ಯವಸ್ಥೆಯನ್ನು ನವೀಕರಿಸುವಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ ಎಂದು ಹೇಳಿದ್ದಾರೆ.  'ಕೋವಿಡ್ ಸಾಂಕ್ರಾಮಿಕವು ಈ ಸವಾಲನ್ನು ಹೆಚ್ಚಿಸಿದೆ. ಆದರೆ ಕೆಲವು ಸಮಸ್ಯೆಗಳನ್ನು ಪುನರ್ವಿಮರ್ಶಿಸಲು ಮತ್ತು ಸರಿಪಡಿಸಲು ನಮಗೆ ಅವಕಾಶವನ್ನು ನೀಡಲಾಗಿದೆ ಎಂದಿದ್ದಾರೆ. ಕೋವಿಡ್ -19 ರ ಆಗಮನದೊಂದಿಗೆ, ಭಾರತದ ದುರ್ಗಮ ಪ್ರದೇಶಗಳಿಗೂ ಲಸಿಕೆ ವಿತರಣೆಯನ್ನು ಕಲ್ಪಿಸಲಾಯಿತು. ಈ ಡಾಕ್ಯುಮೆಂಟ್ ಡ್ರೋನ್ ಆಧಾರಿತ ಆರೋಗ್ಯ ಸರಬರಾಜುಗಳ ವಿತರಣೆಯನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಒಳಗೊಂಡಿರುವ ವಿವಿಧ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುವುದು ಅವರ ಅಭಿಪ್ರಾಯ. 


ಇದನ್ನೂ ಓದಿ :  ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಟ್ಟು ತಿನ್ನುವ ಅಭ್ಯಾಸ ನಿಮಗೂ ಇದೆಯೇ? ಎದುರಾಗುತ್ತದೆ ಈ ಸಮಸ್ಯೆಗಳು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.