Medicine for Corona Virus Patients - ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಪ್ರಕೋಪ ಮುಂದುವರೆದಿದೆ. ಕಳೆದ 24ಗಂಟೆಗಳಲ್ಲಿ ರಾಜ್ಯದಲ್ಲಿ 27 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, 120 ಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ಉತ್ತರ ಪ್ರದೇಶದಲ್ಲಿ ಕೊರೊನಾ ವಿಸ್ಫೋಟದ ಸ್ಥಿತಿ ನಿರ್ಮಾಣಗೊಂಡಿದೆ. ನಿತ್ಯ ಬೆಳಕಿಗೆ ಬರುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ತನ್ನ ಕಳೆದ ದಿನದ ದಾಖಲೆ ಮುರಿಯುತ್ತಿವೆ. ಇವೆಲ್ಲವುಗಳ ನಡುವೆ ಉತ್ತರ ಪ್ರದೇಶ ಸರ್ಕಾರ ಔಷಧಿಗಳ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಅಥವಾ ಕೊರೊನಾದಂತಹ ಲಕ್ಷಣಗಳು ಕಂಡುಬಂದವರಿಗಾಗಿ ಸರ್ಕಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು ಏಳು ಔಷಧಿಗಳನ್ನು ಉಲ್ಲೇಖಿಸಲಾಗಿದೆ.


COMMERCIAL BREAK
SCROLL TO CONTINUE READING

ಕೋರೋನಾ ವೈರಸ್ (Coronavirus) ನಂತಹ ಲಕ್ಷಣಗಳು ಕಂಡು ಬಂದ ಹಲವರು ಭೀತಿಯ ಹಿನ್ನೆಲೆ ಪರೀಕ್ಷೆಗೆ ಹೋಗುತ್ತಿಲ್ಲ ಮತ್ತು ಚಿಕಿತ್ಸೆಯನ್ನು ಕೂಡ ಪಡೆಯುತ್ತಿಲ್ಲ. ಈ ಹಿನ್ನೆಲೆ ಪರಿಸ್ಥಿತಿ ಇನ್ನೂ ಕೈತಪ್ಪುವ ಸಾಧ್ಯತೆ ಇದೆ. ಇನ್ನೊಂದೆಡೆ ಕೊರೊನಾ ಲಕ್ಷಣಗಳು ಕಂಡು ಬಂದ ಹಲವರು ಟೆಸ್ಟ್ ರಿಪೋರ್ಟ್ ಬರುವವರೆಗೆ ಯಾವುದೇ ಚಿಕಿತ್ಸೆಯನ್ನು ಪಡೆಯುತ್ತಿಲ್ಲ ಅಥವಾ ಅವರಿಗೆ ಚಿಕಿತ್ಸೆ ದೊರೆಯುವುದಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಸರ್ಕಾರ ಯಾವುದೇ ಒಂದು ವ್ಯಕ್ತಿಯಲ್ಲಿ ಕೊರೊನಾದಂತಹ ಲಕ್ಷಣಗಳು ಕಂಡು ಬಂದಲ್ಲಿ ಅವರು ಪರೀಕ್ಷೆಯ ವರದಿ ಬರುವವರೆಗೆ ಕಾಯದೆ ತಮ್ಮ ಚಿಕಿತ್ಸೆಯನ್ನು ಪಟ್ಟಿಯಲ್ಲಿ ಸೂಚಿಸಲಾಗಿರುವ ಔಷಧಿಗಳನ್ನು ಪಡೆದು ಚಿಕಿತ್ಸೆಯನ್ನು ಆರಂಭಿಸಬೇಕು ಮತ್ತು ಪ್ರಾಣಾಪಾಯದ ಸ್ಥಿತಿಯಿಂದ ಪಾರಾಗಬೇಕು ಎಂದು ಹೇಳಿದೆ. ಇದಲ್ಲದೆ ಈ ಔಷಧಿಗಳ ಸೇವನೆ ಮಾಡುವ ಮೊದಲು ತಜ್ಞರ ಸಲಹೆ ಪಡೆಯಲು ಕೂಡ ಸೂಚಿಸಲಾಗಿದೆ.


ಇದಲ್ಲದೆ ಈ ಕುರಿತು ವೈದ್ಯರಿಗೆ ನಿರ್ದೇಶನಗಳನ್ನು ನೀಡಿರುವ ಸರ್ಕಾರ, ಕೊರೊನಾ ಲಕ್ಷಣ ಕಂಡು ಬಂದ ರೋಗಿಗಳ ಟೆಸ್ಟ್ ರಿಪೋರ್ಟ್ ಬರುವ ಮೊದಲೇ ಈ ಔಷಧಿಗಳ ಕಿಟ್ ಅನ್ನು ರೋಗಿಗಳಿಗೆ ನೀಡಲು ಹೇಳಿದೆ.


ಇಲ್ಲಿದೆ ಆ ಏಳು ಔಷಧಿಗಳ ಪಟ್ಟಿ
1. ಟ್ಯಾಬ್ಲೆಟ್ : ಐವರ್ಮ್ಯಾಕ್ಟಿನ್ 12 ಎಂಜಿ (Ivermetine Tablet 12mg) (ನಿತ್ಯ ಒಂದು ಮಾತ್ರೆ ಊಟದ ಬಳಿಕ, ಮೂರು ದಿನಗಳವರೆಗೆ ಸೇವಿಸಬೇಕು .


2. ಟ್ಯಾಬ್ಲೆಟ್ : ಎಜಿಥ್ರೋಮೈಸಿನ್ 500 ಎಂಜಿ (Azithromycin 500mg) (ನಿತ್ಯ ಒಂದು ಮಾತ್ರೆ ಊಟದ ಬಳಿಕ, ಮೂರು ದಿನಗಳವರೆಗೆ ಸೇವಿಸಬೇಕು)


3. ಟ್ಯಾಬ್ಲೆಟ್: ಡೋಕ್ಸಿ 500 ಎಂಜಿ (Doxy 500mg) (ನಿತ್ಯ ಎರಡು ಮಾತ್ರೆ ಉಪಹಾರದ ಬಳಿಕ, 10 ದಿನಗಳವರೆಗೆ ಸೇವಿಸಬೇಕು)


4. ಟ್ಯಾಬ್ಲೆಟ್: ಕ್ರೋಸಿನ್ 650 ಎಂಜಿ (Crocin 650mg)(ಜ್ವರ ಹಾಗೂ ಮೈ-ಕೈ ನೋವಿಗೆ, ದಿನಕ್ಕೆ ನಾಲ್ಕು ಬಾರಿ 4 ದಿನ ಸೇವಿಸಿ)


5. ಟ್ಯಾಬ್ಲೆಟ್: ಲಿಮ್ಸಿ 500 ಎಂಜಿ (ಎಸ್ಕೊರ್ಬಿಕ್ ಆಸಿಡ್ 500ಎಂಜಿ) (Limcee 500 MG Composition ASCORBIC ACID 500mg)(ನಿತ್ಯ ಒಂದು ಮಾತ್ರೆ  ಊಟದ ಬಳಿಕ, 10 ದಿನಗಳ ಕಾಲ ಸೇವಿಸಿ)


6. ಟ್ಯಾಬ್ಲೆಟ್: ಜಿಂಕೋನಿಯಾ 50 ಎಂಜಿ (ಎಲೆಮೆಂಟಲ್ ಝಿಂಕ್ 50 mg)(Zinconia 50MG: Composition- Elemental Zinc 50MG) (ಊಟದ ಬಳಿಕ ನಿತ್ಯ ಒಂದು ಮಾತ್ರೆ, 10 ದಿನಗಳವರೆಗೆ )


7. ಕ್ಯಾಲ್ಸಿರೋಲ್ ಸ್ಯಾಚೆಟ್ (Calcirol Sachet, Composition- Cholecalciferol 60000 IU)(ವಾರದಲ್ಲಿ ಒಂದು ಬಾರಿ ಸೇವಿಸಿ, 6 ವಾರಗಳವರೆಗೆ ಸೇವಿಸಿ)


ಇದನ್ನೂ ಓದಿ- ದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಏಮ್ಸ್ ಮುಖ್ಯಸ್ಥ


ಔಷಧಿ ಸೇವನೆಯ ಜೊತೆಗೆ ಇದನ್ನೂ ಮಾಡಿ
ರಾಜ್ಯದ ಬುಂದೇಲ್ ಖಂಡ ನಲ್ಲಿ ಈ ವೈರಸ್ ತೀವ್ರವಾಗಿ ಹರಡುತ್ತಿದೆ.  ಈ ಕುರಿತು ಹೇಳಿಕೆ ನೀಡಿರುವ ಲಲಿತಪುರ ಜಿಲ್ಲಾ CMO ಡಾ. DK ಗರ್ಗ್ ಹಾಗೂ ಮಹಾಮಾರಿ ರೋಗಗಳ ತಜ್ಞ ಡಾ. ದೇಶರಾಜ್, ಈ ಪಟ್ಟಿಯಲ್ಲಿ ಇತರೆ ಕೆಲವು ಸಲಹೆಗಳನ್ನು ನೀಡಲಾಗಿದ್ದು ಅವು ಕೆಳಗಿನಂತಿವೆ ಎಂದು ಹೇಳಿದ್ದಾರೆ. 


- ದಿನದಲ್ಲಿ 3 ರಿಂದ 4 ಲೀಟರ್ ನೀರನ್ನು ಸೇವಿಸಿ.
- ನಿತ್ಯ ಕನಿಷ್ಠ ಅಂದರೆ 3 ಬಾರಿ ಬಿಸಿ ಆವಿ ಸೇವಿಸಿ.
- ಎಂಟು ಗಂಟೆ ನಿದ್ರೆ ಮಾಡಿ.
- 45 ನಿಮಿಷ ವ್ಯಾಯಾಮ ಮಾಡಿ.
- ಕಾಲಕಾಲಕ್ಕೆ ಶರೀರದಲ್ಲಿ ಆಕ್ಷಿಜನ್ ಪ್ರಮಾಣ ಪರೀಕ್ಷಿಸಿ.
- ಆಕ್ಸಿಜನ್ ಪ್ರಮಾಣ ಶೇ.94ಕ್ಕಿಂತ ಕೆಳಗೆ ಜಾರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.


ಇದನ್ನೂ ಓದಿ- Kumbh Mela: ಕರೋನಾ ಬಿಕ್ಕಟ್ಟಿನ ಮಧ್ಯೆ ಸಂತರಿಗೆ ಪ್ರಧಾನಿ ಮೋದಿ ಮಾಡಿದ ಮನವಿ ಏನು ಗೊತ್ತಾ?


ಎಲ್ಲರ ಪಾಲಿಗೆ ಈ ಸಮಯ ಕಷ್ಟದಿಂದ ಕೂಡಿದೆ. ಆದರೆ, ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಈ ಕಠಿಣ ಪರಿಸ್ಥಿತಿಯಿಂದ ಪಾರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು. ಸಾಮಾಜಿಕ ಅಂತರ ನಿಯಮವನ್ನು ಪಾಲಿಸಬೇಕು. ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಹಾಗೂ ಕಾಲ-ಕಾಲಕ್ಕೆ ನಿಮ್ಮ ಕೈಗಳನ್ನು ಶುಚಿಗೊಳಿಸಿ.


ಇದನ್ನೂ ಓದಿ-Maharashtra Coronavirus Update - ಮಹಾರಾಷ್ಟ್ರದಲ್ಲಿ ಲಾಕ್ಡೌನ್, ಕರ್ಫ್ಯೂ ವಿಧಿಸಿದರೂ ಕೂಡ 398 ಜನರ ಪ್ರಾಣ ತೆಗೆದ ಕೊರೊನಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.