Hair Loss Home Remedies For Male: ಸಾಮಾನ್ಯವಾಗಿ ಕೂದಲುದುರುವ ಸಮಸ್ಯೆಯಿಂದ ಮಹಿಳೆಯರು ಮಾತ್ರ ತೊಂದರೆಗೆ ಒಳಗಾಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರೂ ಕೂಡ ಕಳಪೆ ಆಹಾರ, ಒತ್ತಡದಿಂದ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ, ಪುರುಷರು ಕೂದಲು ಉದುರುವಿಕೆಯನ್ನು ತಡೆಯಲು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಆದರೂ ಕೂಡ ಅವರಿಗೆ ಸಿಗಬೇಕಾದ ಪರಿಣಾಮ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಚಿನಿತಿಸುವ ಅವಶ್ಯಕತೆ ಇಲ್ಲ, ನೀವೂ ಕೂಡ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಕೂದಲು ಉದುರುವಿಕೆಯ ಸಮಸ್ಯೆಯನ್ನು  ನಿವಾರಿಸಿಕೊಳ್ಳಬಹುದು.

COMMERCIAL BREAK
SCROLL TO CONTINUE READING

ಕೂದಲು ಉದುರುವಿಕೆಯನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ,
ಪುದೀನಾ ಎಣ್ಣೆ

ನಿಮ್ಮ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ನೀವು ಪುದೀನಾ ಎಣ್ಣೆಯನ್ನು ಬಳಸಬಹುದು. ಪುದೀನಾ ಎಣ್ಣೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪೆಪ್ಪರ್ ಮಿಂಟ್ ಎಣ್ಣೆಯು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ . ಅಷ್ಟೇ ಅಲ್ಲ ಅದು ಕೂದಲು ಬೆಳವಣಿಗೆಗೂ ಕೂಡ ಸಹಕಾರಿಯಾಗಿದೆ. ಇದಲ್ಲದೆ, ಪುರುಷರು ತೆಂಗಿನ ಎಣ್ಣೆ, ಆಲಿವ್ ಎಣ್ಣೆಯನ್ನು ಸಹ ಬಳಸಬಹುದು.

ಈರುಳ್ಳಿ ರಸ
ಕೂದಲು ಬೆಳವಣಿಗೆಗೆ ಈರುಳ್ಳಿ ರಸವು ಅತ್ಯಂತ ಪರಿಣಾಮಕಾರಿ ಮನೆಮದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲುಗಳ ಬುಡಭಾಗ ಬಲಗೊಳ್ಳುತ್ತವೆ. ಇದರಿಂದ ಕೂದಲು ಉದುರುವುದು ಬಹುತೇಕ ನಿಲ್ಲುತ್ತದೆ. ಅಷ್ಟೇ ಅಲ್ಲ ಇದರಿಂದ ಹೊಸ ಕೂದಲು ಬೆಳೆಯಲು ಕೂಡ ಈರುಳ್ಳಿ ರಸವೂ ಸಹಾಯ ಮಾಡುತ್ತದೆ.


ಇದನ್ನೂ ಓದಿ-Weight Loss Tips: ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಒಂದು ಸಂಗತಿ ನಿಮ್ಮ ಆಹಾರದಲ್ಲಿರಲಿ

ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
ಪುರುಷರಲ್ಲಿ ಕೂದಲು ಉದುರಲು ಒತ್ತಡವೂ ಒಂದು ಪ್ರಮುಖ ಕಾರಣವಾಗಿದೆ. ನಿಮ್ಮ ಕೂದಲು ಉದುರುತ್ತಿದ್ದರೆ, ಮೊದಲನೆಯದಾಗಿ ಒತ್ತಡವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಒತ್ತಡವನ್ನು ಕಡಿಮೆ ಮಾಡಲು ನೀವು ನಿತ್ಯ ವ್ಯಾಯಾಮ ಮಾಡಿ. ಇದಲ್ಲದೆ, ಉತ್ತಮ ನಿದ್ರೆ ಮಾಡುವುದು ಕೂಡ ಒತ್ತಡವನ್ನು ಕಡಿಮೆ ಮಾಡುವ ಒಂದು ಉತ್ತಮ ಮಾರ್ಗವಾಗಿದೆ.


ಇದನ್ನೂ ಓದಿ-ಈ ಐದು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುವುದೇ ಇಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.