ಈ ಐದು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುವುದೇ ಇಲ್ಲ

Cholesterol Lowering Habits: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದಂತೆಯೇ ಮೊದಲು ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಂತರ ಹೃದಯಾಘಾತ, ಪರಿಧಮನಿಯ ಕಾಯಿಲೆ, ಟ್ರಿಪಲ್ ವೆಸಲ್ ಡಿಸೀಸ್ ಮತ್ತು ಮಧುಮೇಹದಂತಹ ರೋಗಗಳ ಅಪಾಯ ಕೂಡಾ ಎದುರಾಗುತ್ತದೆ.

Written by - Ranjitha R K | Last Updated : Aug 1, 2022, 03:18 PM IST
  • ಕೊಲೆಸ್ಟ್ರಾಲ್ ಬೇರೆ ಬೇರೆ ಕಾಯಿಲೆಗಳಿಗೂ ಕಾರಣವಾಗುತ್ತದೆ
  • ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದಂತೆಯೇ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ
  • ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು
ಈ ಐದು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುವುದೇ ಇಲ್ಲ  title=
Cholesterol Lowering Tips (file photo)

ಬೆಂಗಳೂರು : Cholesterol Lowering Habits : ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ ಎಂದರೆ ಅದು ಅಪಾಯದ ಪ್ರಾರಂಭ. ಇದು ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೂ ಎಡೆಮಾಡಿ ಕೊಡುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದಂತೆಯೇ ಮೊದಲು ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಂತರ ಹೃದಯಾಘಾತ, ಪರಿಧಮನಿಯ ಕಾಯಿಲೆ, ಟ್ರಿಪಲ್ ವೆಸಲ್ ಡಿಸೀಸ್ ಮತ್ತು ಮಧುಮೇಹದಂತಹ ರೋಗಗಳ ಅಪಾಯ ಕೂಡಾ ಎದುರಾಗುತ್ತದೆ. ಹೀಗಿರುವಾಗ ನಮ್ಮ  ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ತಕ್ಷಣ ಬದಲಾವಣೆಗಳನ್ನು ಮಾಡಿ ಕೊಳ್ಳಬೇಕು. ಇಲ್ಲವಾದರೆ ಮುಂದೆ ಸಂಭವಿಸುವ ಅಪಾಯಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈ ಅಭ್ಯಾಸಗಳನ್ನು ಅನುಸರಿಸಿ :
1. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಬೆಳ್ಳುಳ್ಳಿ ತುಂಬಾ ಉಪಯುಕ್ತವಾಗಿದೆ.  ಪ್ರತಿದಿನ 2 ರಿಂದ 3 ಮೊಗ್ಗು ಬೆಳ್ಳುಳ್ಳಿಯನ್ನು ಜಗಿದು ತಿನ್ನಿರಿ. 
2. ನೀವು ಹಾಲು, ಸಕ್ಕರೆ ಬೆರೆಸಿ ತಯಾರಿಸುವ ಚಹಾ ಕುಡಿಯುತ್ತಿದ್ದರೆ, ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿಕೊಳ್ಳಿ. ಇದಕ್ಕೆ ಬದಲಾಗಿ, ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. 
3. ಕೊಲೆಸ್ಟ್ರಾಲ್ ಅಪಾಯವನ್ನು ಕಡಿಮೆ ಮಾಡಲು ಪ್ರತಿದಿನ ಅರಿಶಿನ ಬೆರೆಸಿದ ಹಾಲು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದರ ಸೇವನೆಯು ಪ್ರಯೋಜನಕಾರಿಯಾಗಿದೆ.
4. ಅಗಸೆಬೀಜಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ಬೀಜಗಳಲ್ಲಿ ಲಿನೋಲೆನಿಕ್ ಆಮ್ಲ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಹೇರಳವಾಗಿ ಕಂಡುಬರುತ್ತವೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.  
5. ನಿಮ್ಮ ದೈನಂದಿನ ಜೀವನದಲ್ಲಿ ಹಸಿರು ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ, ಆದರೆ ಅಡುಗೆಯಲ್ಲಿ  ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಎಣ್ಣೆಯನ್ನು ಬಳಸಿ. 

ಇದನ್ನೂ ಓದಿ : Health Tips: ಮೂತ್ರಪಿಂಡದ ಆರೋಗ್ಯ ರಕ್ಷಣೆಗೆ ಇಲ್ಲಿವೆ ಮೂರು ಹೆಲ್ದಿ ಲೆಮನ್ ಡ್ರಿಂಕ್ಸ್

ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈ ಅಭ್ಯಾಸಗಳನ್ನು ಬಿಡುವುದು ಉತ್ತಮ  :

- ಧೂಮಪಾನ ಚಟವನ್ನು ಇಂದೇ ಬಿಟ್ಟುಬಿಡಿ
- ದಿನಕ್ಕೆ 8 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಬೇಡಿ 
-ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಡಿ 
-ಎಣ್ಣೆಯುಕ್ತ ಆಹಾರಗಳನ್ನು ತಪ್ಪಿಸಿ
- ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಮಿತಿಗೊಳಿಸಿ 
-ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಆಹಾರವನ್ನು ಕಡಿಮೆ  ಸೇವಿಸಿ

ಇದನ್ನೂ ಓದಿ :  Weight Loss: ಪನೀರ್ ಮತ್ತು ಮೊಟ್ಟೆ ಒಟ್ಟಿಗೆ ಸೇವಿಸಿದ್ರೆ ತೂಕ ಇಳಿಕೆಯಾಗುತ್ತಾ..?
 
( ಸೂಚನೆ : ಮಾಹಿತಿ ಇಲ್ಲಿ ನೀಡಿರುವುದು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News