Men Health Tips: ವೀರ್ಯಾಣು ಸಂಖ್ಯೆ ವೃದ್ಧಿಸಲು ಪುರುಷರು ಇದನ್ನು ಹೆಚ್ಚು ಸೇವಿಸಬೇಕು
ಖರ್ಜೂರವನ್ನು ಸೇವಿಸುವುದರಿಂದ ಪುರುಷರಿಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ಖರ್ಜೂರದಲ್ಲಿ ಕ್ಯಾಲೋರಿ, ನಾರಿನಂಶ ಮತ್ತು ತಾಮ್ರದಂತಹ ಪೋಷಕಾಂಶಗಳು ಕಂಡುಬರುತ್ತವೆ. ಆದ್ದರಿಂದ ಇದರ ಸೇವನೆಯು ಪುರುಷರಲ್ಲಿ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನವದೆಹಲಿ: ಖರ್ಜೂರದ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ಹಲವಾರು ರೋಗಗಳು ದೂರವಾಗುತ್ತವೆ. ಖರ್ಜೂರವು ಪುರುಷರಿಗೆ ಯಾವುದೇ ಗಿಡಮೂಲಿಕೆಗಿಂತ ಕಡಿಮೆಯಿಲ್ಲ. ಹೌದು, ಪುರುಷರು ಪ್ರತಿದಿನ ಖರ್ಜೂರ ಸೇವಿಸಿದರೆ ದೈಹಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ದೌರ್ಬಲ್ಯವು ದೂರವಾಗುತ್ತದೆ. ಕ್ಯಾಲೋರಿಗಳು, ಫೈಬರ್, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಪೋಷಕಾಂಶಗಳು ಖರ್ಜೂರದಲ್ಲಿ ಕಂಡುಬರುತ್ತವೆ. ಅದೇ ರೀತಿ ಖರ್ಜೂರದ ಸೇವನೆಯು ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಎಂದು ತಿಳಿಯಿರಿ.
ಪುರುಷರಿಗೆ ಖರ್ಜೂರದ ಪ್ರಯೋಜನಗಳು
ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ: ಖರ್ಜೂರವನ್ನು ತಿನ್ನುವುದು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಟಮಿನ್ ಬಿ ಮತ್ತು ಕೋಲೀನ್ ಖರ್ಜೂರದಲ್ಲಿ ಕಂಡುಬರುತ್ತವೆ, ಇದು ನೆನಪಿಡುವ ಮತ್ತು ಕಲಿಯುವ ಸಾಮರ್ಥ್ಯವನ್ನು ಉತ್ತೇಜಿಸುತ್ತದೆ. ಆದ್ದರಿಂದ ಪುರುಷರು ತಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸಿಕೊಳ್ಳಬೇಕು.
ಇದನ್ನೂ ಓದಿ: ಈ ಎಲೆಯ ಸೇವನೆಯಿಂದ ಸುಲಭವಾಗಿ ನಿಯಂತ್ರಣಕ್ಕೆ ಬರುವುದು ಸಕ್ಕರೆ ಕಾಯಿಲೆ
ವೀರ್ಯಗಳ ಸಂಖ್ಯೆ ಹೆಚ್ಚಿಸುತ್ತದೆ: ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಏಕೆಂದರೆ ಎಸ್ಟ್ರಾಡಿಯೋಲ್ ಮತ್ತು ಫ್ಲೇವನಾಯ್ಡ್ಗಳು ಖರ್ಜೂರದಲ್ಲಿ ಕಂಡುಬರುತ್ತವೆ. ಇದು ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪುರುಷರು ಪ್ರತಿದಿನವೂ ಖರ್ಜೂರವನ್ನು ಸೇವಿಸಬೇಕು.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ: ಖರ್ಜೂರವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವ ಪುರುಷರು ಖರ್ಜೂರವನ್ನು ಸೇವಿಸಬೇಕು.
ಈ ರೀತಿ ಖರ್ಜೂರವನ್ನು ಸೇವಿಸಿ
ನೀವು ಇದನ್ನು ರಾತ್ರಿಯಲ್ಲಿ ಹಾಲಿನೊಂದಿಗೆ ಸೇವಿಸಬಹುದು. ಇದನ್ನು ಹಾಲಿನಲ್ಲಿ ಕುದಿಸಿದ ನಂತರವೂ ಕುಡಿಯಬಹುದು.
ನೀವು ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.
ಇದನ್ನೂ ಓದಿ: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನಿಮ್ಮ ದೈನಂದಿನ ಆಹಾರದಲ್ಲಿರಲಿ ಈ ವಸ್ತುಗಳು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.