Men Health Tips : ಪುರುಷರೆ `ಟೈಟ್ ಜೀನ್ಸ್` ಧರಿಸುವುದು ಬಂಜೆತನ ಸಮಸ್ಯೆಗೆ ಕಾರಣ!
ಟೈಟ್ ಜೀನ್ಸ್ ಧರಿಸುವುದರಿಂದ ಪುರುಷರಿಗೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಇವೆ ಎಂದು ಕೇಳಿದ್ರೆ ಶಾಕ್ ಆಗ್ತೀರಾ. ಇಲ್ಲಿದೆ ನೋಡಿ ಸಮಸ್ಯೆಗಳ ಪಟ್ಟಿ..
Health Problems in Men : ಪ್ರಸ್ತುತ ದಿನಗಲ್ಲಿ ಜೀನ್ಸ್ ಪ್ರತಿಯೊಬ್ಬರ ಮೊದಲ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಜೀನ್ಸ್‌ಗಳು ಲಭ್ಯವಿವೆ. ಇದು ಯುವಕರನ್ನು ತನ್ನತ್ತ ಆಕರ್ಷಿಸುತ್ತದೆ. ಹಾಗೆ, ಯುವಕರ ಮೊದಲ ಆಯ್ಕೆಯು ಟೈಟ್ ಜೀನ್ಸ್ ಆಗಿದೆ. ಆದರೆ ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ದುಷ್ಪರಿಣಾಮಗಳು ಇವೆ ಎಂಬುದು ನಿಮಗೆ ಗೊತ್ತೆ? ಹೌದು, ಟೈಟ್ ಜೀನ್ಸ್ ಧರಿಸುವುದರಿಂದ ಪುರುಷರಿಗೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಇವೆ ಎಂದು ಕೇಳಿದ್ರೆ ಶಾಕ್ ಆಗ್ತೀರಾ. ಇಲ್ಲಿದೆ ನೋಡಿ ಸಮಸ್ಯೆಗಳ ಪಟ್ಟಿ..
ಟೈಟ್ ಜೀನ್ಸ್ ಧರಿಸುವುದರಿಂದ ಪುರುಷರಿಗೆ ಈ ಸಮಸ್ಯೆಗಳು
ಬಂಜೆತನ ಸಮಸ್ಯೆ
ಟೈಟ್ ಜೀನ್ಸ್ ಧರಿಸುವುದರಿಂದ ಸ್ನಾಯುಗಳು ಮತ್ತು ನರಗಳ ಶಾಖ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಪುರುಷರಲ್ಲಿ ವೀರ್ಯದ ಕೊರತೆ ಪ್ರಾರಂಭವಾಗುತ್ತದೆ. ಏಕೆಂದರೆ ಬಿಗಿಯಾದ ಜೀನ್ಸ್ ಧರಿಸುವುದರಿಂದ ತೊಡೆಯ ಸುತ್ತ ಹೆಚ್ಚಿನ ಒತ್ತಡ ಹೆಚ್ಚಾಗುತ್ತದೆ. ಇದರೊಂದಿಗೆ ರಕ್ತ ಪರಿಚಲನೆಯಲ್ಲಿಯೂ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ತುಂಬಾ ಬಿಗಿಯಾದ ಜೀನ್ಸ್ ಧರಿಸುವುದನ್ನು ತಪ್ಪಿಸಿ.
ಇದನ್ನೂ ಓದಿ : Diwali 2022 : ದೀಪಾವಳಿ ಸಂದರ್ಭದಲ್ಲಿ ಶರೀರ ನಿರ್ವಿಷಗೊಳಿಸಿ ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ
ನರ ಹಾನಿ
ಟೈಟ್ ಜೀನ್ಸ್ ಧರಿಸುವುದರಿಂದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು ಅಷ್ಟೇ ಅಲ್ಲ ತುಂಬಾ ಟೈಟ್ ಜೀನ್ಸ್ ಧರಿಸುವುದರಿಂದ ರಕ್ತ ಸಂಚಾರ ಮತ್ತು ನರಮಂಡಲದ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ಹೆಚ್ಚು ಬಿಗಿಯಾದ ಜೀನ್ಸ್ ಧರಿಸುವುದರಿಂದ, ಜೀನ್ಸ್ ನಿಮ್ಮ ತೊಡೆಗೆ ದೀರ್ಘಕಾಲ ಅಂಟಿಕೊಳ್ಳುತ್ತದೆ, ಇದರಿಂದಾಗಿ ಕಿರಿಕಿರಿ ಮತ್ತು ಫಂಗಸ್ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ.
ಖಾಸಗಿ ಭಾಗಕ್ಕೆ ಹಾನಿ
ಪುರುಷರು ಬಿಗಿಯಾದ ಜೀನ್ಸ್ ಧರಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ನೀವು ದೀರ್ಘಕಾಲದವರೆಗೆ ಬಿಗಿಯಾದ ಜೀನ್ಸ್ ಧರಿಸಿದರೆ, ಅದು ನಿಮ್ಮ ಖಾಸಗಿ ಭಾಗದ ಬಳಿ ರಕ್ತ ಪರಿಚಲನೆಯನ್ನು ನಿಲ್ಲಿಸಬಹುದು. ಇದರಿಂದಾಗಿ ಈ ಭಾಗವೂ ಹಾಳಾಗಬಹುದು.
ಪುರುಷರು ಟೈಟ್ ಜೀನ್ಸ್ ಧರಿಸುವಾಗ ಈ ಮುನ್ನೆಚ್ಚರಿಕೆಗಳು ಇರಲಿ
1- ನೀವು ವಾಕಿಂಗ್ ಮಾಡುವಾಗ ಟೈಟ್ ಜೀನ್ಸ್ ಧರಿಸಬೇಡಿ.
2- ಪ್ರತಿದಿನ ಟೈಟ್ ಜೀನ್ಸ್ ಧರಿಸಬೇಡಿ.
3- ದೇಹದಲ್ಲಿ ಯಾವುದೇ ಅಲರ್ಜಿ ಇದ್ದರೆ ಟೈಟ್ ಜೀನ್ಸ್ ಬದಲಿಗೆ ಸಡಿಲವಾದ ಜೀನ್ಸ್ ಧರಿಸಿ.
ಇದನ್ನೂ ಓದಿ :
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.