ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ:   ಪುರುಷರಿಗೆ ವೀರ್ಯದ ಗುಣಮಟ್ಟವು ತುಂಬಾ ಮುಖ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. ಅದೇ ಸಮಯದಲ್ಲಿ, ಇತ್ತೀಚಿನ ಜೀವನಶೈಲಿಯಿಂದಾಗಿ ಹಲವರಿಗೆ ಮಗು ಆಗದೇ ಇರುವುದು ದೊಡ್ಡ ಸಮಸ್ಯೆ ಆಗಿದೆ. ಇದಕ್ಕೆ ಮುಖ್ಯ ಕಾರಣ ಗುಣಮಟ್ಟದ ವೀರ್ಯಾಣು ಕೊರತೆ. ಇದನ್ನು ಪುರುಷ ಬಂಜೆತನ ಎಂದೂ ಕರೆಯುತ್ತಾರೆ. ಆದಾಗ್ಯೂ, ಪುರುಷರ ಈ ಸಮಸ್ಯೆಗೆ ಅವರ ತಪ್ಪು ಆಹಾರ ಮತ್ತು ತಪ್ಪು ಜೀವನಶೈಲಿ ಹೆಚ್ಚಾಗಿ ಕಾರಣವಾಗಿದೆ. ಆದರೆ ಪುರುಷರು ಕೆಲವು ಡ್ರೈ ಫ್ರೂಟ್ಸ್ ಸೇವನೆಯಿಂದ ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಹೌದು, ಪುರುಷರು ತಮ್ಮ ಡಯಟ್ನಲ್ಲಿ ಕೆಲವು ಡ್ರೈ ಫ್ರೂಟ್ಸ್ ಅಂದರೆ ಒಣ ಹಣ್ಣುಗಳನ್ನು ಸೇರಿಸುವ ಮೂಲಕ ತಮ್ಮ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಬಹುದು. 


ಇದನ್ನೂ ಓದಿ- Flaxseed Raita : ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅಗಸೆ ಬೀಜ!


ಪುರುಷ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಈ ಒಣ ಹಣ್ಣುಗಳನ್ನು ಸೇವಿಸಿ:
ಖರ್ಜೂರವನ್ನು ತಿನ್ನಿರಿ:

ಖರ್ಜೂರದಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಖರ್ಜೂರ ಸೇವನೆಯಿಂದ ಪುರುಷರು ತಮ್ಮ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.  ಹೌದು, ಖರ್ಜೂರವನ್ನು ತಿನ್ನುವ ಮೂಲಕ ವೀರ್ಯದ ಸಂಖ್ಯೆ ಮತ್ತು ಗುಣಮಟ್ಟವನ್ನು ಸುಧಾರಿಸಬಹುದು. ಖರ್ಜೂರದಲ್ಲಿ ಎಸ್ಟ್ರಾಡಿಯೋಲ್ ಮತ್ತು ಫ್ಲೇವನಾಯ್ಡ್‌ಗಳು ಎಂಬ ಸಂಯುಕ್ತಗಳಿವೆ, ಅದು ಪುರುಷರಿಗೆ ವಿಶೇಷವಾಗಿದೆ. ಆದ್ದರಿಂದ, ಖರ್ಜೂರವು ಪುರುಷರ ವೀರ್ಯಾಣು ಸಮಸ್ಯೆಯನ್ನು ಗುಣಪಡಿಸಲು  ಜನಪ್ರಿಯ ಆಹಾರವಾಗಿದೆ.


ಒಣದ್ರಾಕ್ಷಿ ಸಹ ಪ್ರಯೋಜನಕಾರಿ:
ಒಣದ್ರಾಕ್ಷಿಯು ದ್ರಾಕ್ಷಿಗಿಂತ ಹೆಚ್ಚು ಪೌಷ್ಟಿಕ ಹಾಗೂ ಪ್ರಯೋಜನಕಾರಿ. ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಇದೆ, ಇದರಿಂದಾಗಿ ಇದು ಪುರುಷರ ಹಲವು ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಒಣದ್ರಾಕ್ಷಿ ಸೇವಿಸುವುದರಿಂದ ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Male Fertility : ವಿವಾಹಿತ ಪುರುಷರೆ ಇಂದೇ ಬಿಡಿ ಈ ಅಭ್ಯಾಸಗಳನ್ನು: ಇಲ್ಲದಿದ್ದರೆ ತಪ್ಪಿದಲ್ಲ ಅಪಾಯ!


ಒಣಗಿದ ಅಂಜೂರದ ಹಣ್ಣು:
ಒಣಗಿದ ಅಂಜೂರದ ಹಣ್ಣುಗಳು ಪುರುಷರಿಗೆ ತುಂಬಾ ಪ್ರಯೋಜನಕಾರಿ ಡ್ರೈ ಫ್ರೂಟ್ ಆಗಿದೆ. ಅಂಜೂರದ ಹಣ್ಣುಗಳ ಸೇವನೆಯು ಪುರುಷರ ವೀರ್ಯಾಣುಗಲಾ ಸಮಸ್ಯೆ ಸುಧಾರಿಸುತ್ತದೆ ಮತ್ತು ಅವರ ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಪುರುಷರು ತಮ್ಮ ದೈನಂದಿನ ಆಹಾರದಲ್ಲಿ ಒಣಗಿದ ಅಂಜೂರದ ಹಣ್ಣುಗಳನ್ನು ತಪ್ಪದೇ ಸೇವಿಸಿ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.