Men Health Tips : ಚಳಿಗಾಲದಲ್ಲಿ ಆರೋಗ್ಯದ ಕಡೆ ಗಮನ ಕೊಡುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ನಾವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು. ಇದರಿಂದ ಗಂಭೀರ ಕಾಯಿಲೆಗಳನ್ನು ತಡೆಯಬಹುದು. ನೀವು ದೈಹಿಕವಾಗಿ  ದೌರ್ಬಲ್ಯರಾಗಿದ್ದರೆ ಹಾಲು ಮತ್ತು ಖರ್ಜೂರವನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ಈ ಎರಡು ವಸ್ತುಗಳ ಸೇವನೆಯು ಪುರುಷರಿಗೆ ತುಂಬಾ ಉಪಯುಕ್ತವಾಗಿದೆ. ಅವುಗಳನ್ನು ನಿಯಮಿತವಾಗಿ ಸೇವಿಸಿದರೆ, ದೈಹಿಕ ದೌರ್ಬಲ್ಯಕ್ಕೆ ಪರಿಹಾರ ಸಿಗುತ್ತದೆ.


COMMERCIAL BREAK
SCROLL TO CONTINUE READING

ಹಾಲು ಮತ್ತು ಖರ್ಜೂರ ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಖರ್ಜೂರವನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ,  ಅನೇಕ ಗಂಭೀರ ಕಾಯಿಲೆಗಳಿಂದ ದೂರವಿರಬಹುದು. ಖರ್ಜೂರದಲ್ಲಿ ಸಾಕಷ್ಟು ಕ್ಯಾಲ್ಸಿಯಂ, ಫೈಬರ್, Zinc, ಮೆಗ್ನೀಸಿಯಮ್ ಮತ್ತು ಕಬ್ಬಿಣಗಳ ಅಂಶಗಳು ಹೇರಳವಾಗಿದೆ. ಇದಲ್ಲದೆ, ಇದು ವಿಟಮಿನ್ ಎ, ಸಿ, ಇ, ಕೆ, ಬಿ 2, ಬಿ 6, ನಿಯಾಸಿನ್ ಮತ್ತು ಥಯಾಮಿನ್ ಸೇರಿದಂತೆ ಅನೇಕ ವಿಟಮಿನ್ ಗಳನ್ನೂ  ಹೊಂದಿದೆ. ಇದು ಪುರುಷರಲ್ಲಿ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.  


ಇದನ್ನೂ ಓದಿ : Weight Loss Tips: ವ್ಯಾಯಾಮದ ನಂತರ ಈ 5 ಆಹಾರ ಸೇವಿಸಿ, 3 ತಿಂಗಳಲ್ಲಿ ತೂಕ ಇಳಿಸಿಕೊಳ್ಳಿ


ಎರಡೂ ವಸ್ತುಗಳ ನಿಯಮಿತ ಸೇವನೆಯು ವ್ಯಕ್ತಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಖರ್ಜೂರ ದಲ್ಲಿ  ಟೆಸ್ಟೋಸ್ಟೆರಾನ್ ಹಾರ್ಮೋನ್ ಅದನ್ನು ಹೆಚ್ಚಿಸುವ ಗುಣವಿರುತ್ತದೆ. ಇದು ಪುರುಷರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಲು ಮತ್ತು ಖರ್ಜುರವನ್ನು  ಒಟ್ಟಿಗೆ ತೆಗೆದುಕೊಳ್ಳುವುದರಿಂದ ಪುರುಷರಿಗೆ ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಬಹುದು.


ಲೈಂಗಿಕ ಆರೋಗ್ಯಕ್ಕೆ ಪ್ರಯೋಜನಕಾರಿ : ಹಾಲು ಮತ್ತು ಡೇಟ್ಸ್  ಸೇವಿಸುವುದರಿಂದ ಪುರುಷರ ತ್ರಾಣ ಹೆಚ್ಚಾಗುವುದಲ್ಲದೆ, ಲೈಂಗಿಕ ಆರೋಗ್ಯವನ್ನು ಕೂಡ ಉತ್ತಮಗೊಳಿಸುತ್ತದೆ.  ಖರ್ಜೂರವು ಅಮೈನೊ ಆಮ್ಲಗಳನ್ನು ಹೊಂದಿರುತ್ತದೆ, ಇದು ಪುರುಷರ ತ್ರಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪುರುಷರು ಹಾಲಿನಲ್ಲಿ ಡೇಟ್ಸ್  ಅನ್ನು ಸೇರಿಸಿ ಕುದಿಸಿ ಸೇವಿಸಿದರೆ, ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. 


ಇದನ್ನೂ ಓದಿ : Diabetes Control: ಈ ತರಕಾರಿಗಳು ಮಧುಮೇಹದ ಶತ್ರುಗಳಂತೆ, ನಿತ್ಯ ಆಹಾರದಲ್ಲಿ ತಪ್ಪದೇ ಸೇವಿಸಿ


ಆಸ್ತಮಾ ರೋಗಿಗಳಿಗೆ ಪ್ರಯೋಜನಕಾರಿ : ಉಸಿರಾಟ  ಸಂಬಂಧಿಸಿದ ಕಾಯಿಲೆಗಳಿದ್ದರೆ  ಡೇಟ್ಸ್ ಮತ್ತು ಹಾಲು ತೆಗೆದುಕೊಳ್ಳಬೇಕು. ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಸ್ತಮಾ ರೋಗಿಗಳಿಗೆ ಹಾಲು ಮತ್ತು ಖರ್ಜೂರ ತುಂಬಾ ಪ್ರಯೋಜನಕಾರಿ. ಸಕ್ಕರೆ ಮಟ್ಟವನ್ನು  ನಿಯಂತ್ರಿಸುತ್ತದೆ : ಹಾಲು ಮತ್ತು ಖರ್ಜೂರವು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೂರರಿಂದ ನಾಲ್ಕು ಡೇಟ್ಸ್ ಅನ್ನು ಒಂದು ಲೋಟ ಹಾಲಿನಲ್ಲಿ ಸೇರಿಸಿ ಸೇವಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.