ನವದೆಹಲಿ: Mint Tea Recipe - ಟೀ (Tea) ಸೇವನೆ ಹಲವರಿಗೆ ತುಂಬಾ ಇಷ್ಟವಾಗುತ್ತದೆ. ಅವರು ಯಾವುದೇ ವೇಳೆ ಯಾವುದೇ ಋತುವಿನಲ್ಲಿ ಚಹಾ ಸೇವನೆ ಬಿಡುವುದಿಲ್ಲ. ಅಷ್ಟೇ ಯಾಕೆ ಬಿರು ಬಿಸಿಲಿನಲ್ಲಿಯೂ ಕೂಡ ಟೀ ಸೇವನೆ ಮಾಡುವುದರಿಂದ ಅವರು ಹಿಂಜರಿಯುವುದಿಲ್ಲ. ಒಂದು ವೇಳೆ ನಿಮಗೂ ಕೂಡ ಚಹಾ ಸೇವನೆ ಇಷ್ಟವಾಗುತ್ತಿದ್ದರೆ ಹಾಗೂ ಬೇಸಿಗೆ ಕಾಲದಲ್ಲಿ ಇದರ ಹೊಸ ಪ್ಫೆವರ್ ಸವಿಯಲು ಇಷ್ಟಪಡುತ್ತಿದ್ದರೆ, ಪುದಿನಾ ಮಿಶ್ರಿತ ಚಹಾ (Pudina Tea) ಸೇವನೆಯನ್ನೊಮ್ಮೆ ಮಾಡಿ ನೋಡಿ.


COMMERCIAL BREAK
SCROLL TO CONTINUE READING

ಪುದೀನಾ ಚಹಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
>>8-10 ಪುದೀನಾ ಎಲೆಗಳು
>> ಸಣ್ಣ ಗಾತ್ರದ ಚಮಚೆಯ 1/2 ಚ ಕರಿ ಮೆಣಸು.
>>1/2 ಚಮಚೆ ಬ್ಲಾಕ್ ಸಾಲ್ಟ್
>>2 ಕಪ್ ನೀರು


ಇದನ್ನೂ ಓದಿ- Ragi Malt Recipe: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ರಾಗಿ ಮಾಲ್ಟ್ ಡ್ರಿಂಕ್ ಸೇವಿಸಿ


ಮಿಂಟ್ ಚಹಾ ತಯಾರಿಸುವ ವಿಧಿ (Mint Tea Recipe)
- ಒಂದು ಚಹಾ ಬಾಣಲೆಯಲ್ಲಿ ಎರಡು ಕಪ್ ನೀರನ್ನು ತೆಗೆದುಕೊಂಡು ಸಣ್ಣ ಉರಿಯ ಮೇಲೆ ನೀರನ್ನು ಕುದಿಸಲು ಬಿಡಿ.
- ಬಳಿಕ ಈ ನಿರೀಗೆ ಪುದಿನಾ ಎಲೆ, ಕರಿ ಮೆಣಸು ಹಾಗೂ ಬ್ಲಾಕ್ ಸಾಲ್ಟ್ ಹಾಕಿ ಐದು ನಿಮಿಷ ಕುದಿಸಿ.
- ನಂತರ ಈ ನೀರನ್ನು ಸೋಸಿ ಸವಿಯಲು ನೀಡಿ


ಇದನ್ನೂ ಓದಿ- Immunity Booster Milk: ಹಾಲಿನೊಂದಿಗೆ ಇವುಗಳನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ


ಸೂಚನೆ: ಒಂದು ವೇಳೆ ಇದನ್ನು ನೀವು ಸಾಮಾನ್ಯ ಚಹಾ ರೀತಿ ಸವಿಯಲು ಬಯಸುತ್ತಿದ್ದರೆ, ಇದರಲ್ಲಿ ನೀವು ಹಾಲು ಮತ್ತು ಸಕ್ಕರೆಯನ್ನು ಕೂಡ ಬೆರೆಸಬಹುದು. ಪುದೀನಾ ಎಲೆಗಳ ಬದಲು ನೀವು ಮಿಂಟ್ ಟೀ ಬ್ಯಾಗ್ ಗಳನ್ನು ಕೂಡ ಬಳಸಬಹುದು.


ಇದನ್ನೂ ಓದಿ- Black pepper: ಪ್ರತಿದಿನ ಕೇವಲ ಒಂದೆರಡು ಕರಿಮೆಣಸನ್ನು ಸೇವಿಸಿ, ಈ ರೋಗಗಳಿಂದ ದೂರವಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.