Immunity Booster Milk: ಹಾಲಿನೊಂದಿಗೆ ಇವುಗಳನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಹಾಲಿನಲ್ಲಿ ಅರಶಿನ  ಬೆರೆಸಿ ಕುಡಿದರೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ಈಗಾಗಲೇ ಹೆಚ್ಚಿನವರಿಗೆ ತಿಳಿದಿರುತ್ತದೆ. ಕೇವಲ ಅರಶಿನ ಮಾತ್ರವಲ್ಲ, ಇನ್ನು ಕೆಲವು ಆಹಾರ ಪದಾರ್ಥಗಳಿವೆ ಅವುಗಳನ್ನು ಹಾಲಿನೊಂದಿಗೆ ಸೇವಿಸಿದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. 

Written by - Ranjitha R K | Last Updated : Apr 16, 2021, 06:54 PM IST
  • ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರಿಂದ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.
  • ಕೆಲವು ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  • ಖರ್ಜೂರದೊಂದಿಗೆ ಹಾಲನ್ನು ಕುಡಿಯುವುದು ಬಹಳ ಒಳ್ಳೆಯದು
Immunity Booster Milk: ಹಾಲಿನೊಂದಿಗೆ ಇವುಗಳನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ title=
ಖರ್ಜೂರದೊಂದಿಗೆ ಹಾಲನ್ನು ಕುಡಿಯುವುದು ಬಹಳ ಒಳ್ಳೆಯದು (file photo)

ಬೆಂಗಳೂರು : ಹೆಚ್ಚುತ್ತಿರುವ ಕರೋನದ (Coronavirus) ಪ್ರಕರಣಗಳ ನಡುವೆ ಕುಟುಂಬದ ಪ್ರತಿಯೊಬ್ಬರನ್ನೂ ಕರೋನಾದಿಂದ ರಕ್ಷಿಸುವುದು ದೊಡ್ಡ ಟಾಸ್ಕ್  ಆಗಿಬಿಟ್ಟಿದೆ. ಹೀಗಿರುವಾಗ ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸಿಕೊಳ್ಳುವುದರಿಂದ  ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿದಿನ ಪೌಷ್ಠಿಕ ಆಹಾರ ಈ ಪೌಷ್ಠಿಕ ಆಹಾರಗಳ ಪಟ್ಟಿಯಲ್ಲಿದೆ. ಹಾಲಿನಲ್ಲಿ ಅರಶಿನ (Turmeric Milk) ಬೆರೆಸಿ ಕುಡಿದರೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ಈಗಾಗಲೇ ಹೆಚ್ಚಿನವರಿಗೆ ತಿಳಿದಿರುತ್ತದೆ. ಕೇವಲ ಅರಶಿನ ಮಾತ್ರವಲ್ಲ, ಇನ್ನು ಕೆಲವು ಆಹಾರ ಪದಾರ್ಥಗಳಿವೆ ಅವುಗಳನ್ನು ಹಾಲಿನೊಂದಿಗೆ ಸೇವಿಸಿದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. 

ಇವುಗಳನ್ನು ಹಾಲಿನೊಂದಿಗೆ ಸೇವಿಸಿದರೆ ಪರಿಣಾಮಕಾರಿಯಾಗಿರುತ್ತದೆ : 
ಖರ್ಜೂರದೊಂದಿಗೆ (Dates) ಹಾಲನ್ನು ಕುಡಿಯುವುದು: ಖರ್ಜೂರದಲ್ಲಿ  ಆಂಟಿ-ಆಕ್ಸಿಡೆಂಟ್ ಗಳು, ಆಂಟಿ-ವೈರಲ್ ಮತ್ತು ವಿಟಮಿನ್ ಗಳು ಹೇರಳವಾಗಿರುತ್ತದೆ. ಇದರಲ್ಲಿ ಕಬ್ಬಿಣದ  ಅಂಶ ಕೂಡಾ ಅಧಿಕವಾಗಿರುತ್ತದೆ. ಖರ್ಜೂರವನ್ನು ಹಾಲಿನಲ್ಲಿ ಬೆರೆಸಿ ತಿನ್ನುವುದರಿಂದ ರೋಗ ನಿರೊಧಕ ಶಕ್ತಿ ಹೆಚ್ಚುತ್ತದೆ. 

ಇದನ್ನೂ ಓದಿ :  "ಕೊರೊನಾ ಗಾಳಿಯಿಂದಲೂ ಹರಡುವುದಕ್ಕೆ ಪ್ರಬಲ ಪುರಾವೆ ಇದೆ"

ಕುಂಬಳಕಾಯಿ, ಸೂರ್ಯಕಾಂತಿ (Sunflower), ಚಿಯಾ ಬೀಜಗಳನ್ನು ಹಾಲಿನೊಂದಿಗೆ ಸೇವಿಸುವುದು ಕೂಡಾ ಬಹಳ ಒಳ್ಳೆಯದು. ಇದು ವೈರಲ್ ಸೋಂಕುಗಳಿಂದ (Viral infection) ದೇಹವನ್ನು ರಕ್ಷಿಸುತ್ತದೆ. ನಿರ್ದಿಷ್ಟವಾಗಿ, ಶೀತ, ಕೆಮ್ಮು ಮತ್ತು ಸೀಸನಲ್ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. 

ಡ್ರೈ ಫ್ರುಟ್ಸ್ ಗಳನ್ನು (Dry fruits) ಹಾಲಿನೊಂದಿಗೆ ಸೇವಿಸಿ. ಅಥವಾ ಡ್ರೈ ಫ್ರುಟ್ಸ್ ಗಳನ್ನು ಪುಡಿ ಮಾಡಿ ಹಾಲಿನಲ್ಲಿ (Milk) ಬೆರೆಸಿ ಕುಡಿಯಿರಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶವಿರುತ್ತದೆ. ಇದು ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಿರುವ ಶಕ್ತಿ ಒದಗಿಸುತ್ತದೆ. 

ಇದನ್ನೂ ಓದಿ : Excessive Sweating: ನೀವು ಸಹ ಯಾವುದೇ ಕಾರಣವಿಲ್ಲದೆ ಅತಿಯಾಗಿ ಬೆವರುತ್ತೀರಾ? ಹಾಗಿದ್ದರೆ ಎಚ್ಚರ

ಅರಿಶಿನ ಹಾಲು (Turmeric milk) ಕುಡಿಯಿರಿ. ಅರಿಶಿನದಲ್ಲಿ ಆಂಟಿ  ಬ್ಯಾಕ್ಟೀರಿಯಾ, ಆಂಟಿ ಇನ್ ಫ್ಲಮೇಟರಿ, ಆಂಟಿ ಕ್ಯಾನ್ಸರ್ ಗುಣಗಳನ್ನು ಹೊಂದಿದೆ. ಇದು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ.  

ಶುಂಠಿ (Ginger) ಬೆರೆಸಿ ಹಾಲು ಕುಡಿಯಿರಿ. ಶುಂಠಿ ಯಲ್ಲಿ ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ, ಆಂಟಿ-ಆಕ್ಸಿಡೆಂಟ್, ಆಂಟಿ-ವೈರಲ್ ಗುಣಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News