ಮಳೆಗಾಲದ ಸಮಯದಲ್ಲಿ ಯಾರಿಗಾದರೂ ಬಿಸಿ ಬಿಸಿ ಎಣ್ಣೆಯುಕ್ತ ಆಹಾರವನ್ನು ಸೇವಿಸಲು ಆಸೆಯಾಗುತ್ತದೆ. ಬೇಸಿಗೆಯಲ್ಲಿ ತೀವ್ರವಾದ ಶಾಖದಿಂದ ಬಳಲುತ್ತಿರುವ ಜನರು, ಮಳೆ ಪ್ರಾರಂಭವಾದಾಗ ಉಲ್ಲಾಸ ಮತ್ತು ನಿರಾಳತೆಯನ್ನು ಅನುಭವಿಸುತ್ತಾರೆ. ಪ್ರತಿ ಋತುವೂ ಅದರ ಸಾಧಕ-ಬಾಧಕಗಳೊಂದಿಗೆ ಬರುತ್ತದೆ. ಈ ಋತುವಿನಲ್ಲಿ ಅದರ ಅಡ್ಡ ಪರಿಣಾಮಗಳೂ ಸಹ ಇರುತ್ತದೆ. ತೀವ್ರವಾದ ಹವಾಮಾನ ಬದಲಾವಣೆ ಮತ್ತು ದೇಹವು ಹವಾಮಾನಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಜ್ವರ, ಟೈಫಾಯಿಡ್ ಮತ್ತು ಹೊಟ್ಟೆಯ ಸೋಂಕುಗಳಂತಹ ರೋಗಗಳು ತುಂಬಾ ಸಾಮಾನ್ಯವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಡಯಾಬಿಟೀಸ್ ರೋಗಿಗಳಿಗೆ ವರದಾನವಿದ್ದಂತೆ ಈ ಒಂದು ತರಕಾರಿ..!


ಮಳೆಗಾಲದ ಅವಧಿಯಲ್ಲಿ ಸೊಳ್ಳೆಗಳು ದ್ವಿಗುಣಗೊಳ್ಳುತ್ತವೆ ಮತ್ತು ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ರೋಗಗಳನ್ನು ಹರಡುತ್ತವೆ. ಸಾಂಕ್ರಾಮಿಕದ ನಂತರ ಜನರು ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದು ವ್ಯಕ್ತಿಗಳನ್ನು ಸುಲಭವಾಗಿ ರೋಗಗಳಿಗೆ ಗುರಿಪಡಿಸುತ್ತದೆ. ಆದ್ದರಿಂದ, ಋತು-ಬದಲಾದ ವೇಳೆ ಪೌಷ್ಟಿಕ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ನಿಮ್ಮನ್ನು ಆರೋಗ್ಯಕರವಾಗಿರುವಂತೆ ಮಾಡಲು ಆಹಾರ ಪ್ರಮುಖ ಪಾತ್ರವಹಿಸುತ್ತದೆ.


ಗಂಜಿಗಳನ್ನು ಸೇವಿಸಿ: ಅಕ್ಕಿ, ಮೆಂತ್ಯ/ಮೇಥಿ ಗಂಜಿ ಸೇರಿದಂತೆ ದಾಲ್ಚಿನ್ನಿ, ಏಲಕ್ಕಿ, ಜೀರಿಗೆ ಮತ್ತು ಇತರ ಮಸಾಲೆಗಳಿಂದ ತಯಾರಿಸುವ ಗಂಜಿಗಳೂ ಇವೆ. ಕೇರಳದ ಕರಕಡಕ ಗಂಜಿಯು ಪ್ರಸಿದ್ಧವಾದ ಗಂಜಿಗಳಲ್ಲಿ ಒಂದಾಗಿದೆ, ಇದನ್ನು ಮಳೆಗಾಲದಲ್ಲಿ ಆಗಾಗ್ಗೆ ಸೇವಿಸಲಾಗುತ್ತದೆ. ಇದು ಉತ್ತಮ ಭೋಜನದ ಆಯ್ಕೆಯಾಗಿದೆ. 


ಸೊಪ್ಪು: ಮಳೆಗಾಲದಲ್ಲಿ ಸೊಪ್ಪು ಹೆಚ್ಚಾಗಿ ಸಿಗುತ್ತವೆ. ಇವುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶಗಳು ಸಿಗುತ್ತವೆ. 


ಹಣ್ಣುಗಳು:  ಮಳೆಗಾಲದಲ್ಲಿ ಸಿಗುವ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಸಿ, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಹೇರಳವಾಗಿರುತ್ತವೆ. ಮನೆಯಲ್ಲಿ  ಹಣ್ಣುಗಳನ್ನು ತಂದು ತಿನ್ನಿ. ಹಾಗೂ ಜ್ಯೂಸ್‌ಗಳನ್ನು ಸಹ ಮನೆಯಲ್ಲಿ ಮಾಡಿ ಕುಡಿಯಿರಿ.


ಬೆಚ್ಚಗಿನ ದ್ರವ ಆಹಾರಗಳು ಉತ್ತಮ: ಮಳೆಗಾಲದಲ್ಲಿ ಬೆಚ್ಚಗಿರುವ ದ್ರವ ಆಹಾರವನ್ನು ಸೇವಿಸುವುದು ಉತ್ತಮ. ಸೂಪ್, ಮಸಾಲಾ ಟೀ, ಗ್ರೀನ್ ಟೀ, ಸಾರು, ದಾಲ್, ಮುಂತಾದ ಸಾಕಷ್ಟು ಬೆಚ್ಚಗಿನ ದ್ರವಗಳನ್ನು ಸೇವಿಸಿ. 


ಇದನ್ನೂ ಓದಿ: Weight Loss Fruit: ಈ ಒಂದು ಹಣ್ಣು ಸೇವನೆಯಿಂದ ಕಡಿಮೆ ಆಗುತ್ತಂತೆ ತೂಕ!


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.