ಬೆಂಗಳೂರು : Benefits Of Ivy Gourd For Diabetes : ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಉತ್ತಮ ಆರೋಗ್ಯದ ದೃಷ್ಟಿಯಿಂದ ಹಸಿರು ತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಅದರಲ್ಲೂ, ತೊಂಡೆಕಾಯಿಯ ಸೇವನೆಯು ಡಯಾಬಿಟೀಸ್ ರೋಗಿಗಳಿಗೆ ಉತ್ತಮ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
ಮಧುಮೇಹಿಗಳು ತಿನ್ನಬೇಕು ತೊಂಡೆಕಾಯಿ :
ತೊಂಡೆಕಾಯಿಯನ್ನು ಇಂಗ್ಲಿಷ್‌ನಲ್ಲಿ ಐವಿ ಗೌರ್ಡ್ ಎಂದು ಕರೆಯಲಾಗುತ್ತದೆ. ಅದರ ವೈಜ್ಞಾನಿಕ ಹೆಸರು ಕೊಕ್ಸಿನಿಯಾ ಗ್ರಾಂಡಿಸ್. ಆರಂಭಿಕ ಹಂತಗಳಲ್ಲಿ, ಇದನ್ನು ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಬೆಳೆಸಲಾಯಿತು. ಆದರೆ ಈಗ ಇದನ್ನು ಪ್ರಪಂಚದಾದ್ಯಂತ ಬೆಳೆಯಲಾಗುತ್ತದೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಹೃದ್ರೋಗದ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ.
ಇದನ್ನೂ ಓದಿ : Yoga: ಬಂಜೆತನ ತಡೆಯಲು ಮಹಿಳೆಯರು ಈ 5 ಆಸನಗಳನ್ನು ಅಭ್ಯಾಸ ಮಾಡಿ
ತೊಂಡೆಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು :
ತೊಂಡೆಕಾಯಿ ಕ್ಯಾಲ್ಸಿಯಂ, ಫೈಬರ್, ವಿಟಮಿನ್, ಖನಿಜಗಳನ್ನು ಒಳಗೊಂಡಿದೆ. ಇದರೊಂದಿಗೆ ಆಂಟಿಬ್ಯಾಕ್ಟೀರಿಯಲ್, ಆಂಟಿಆಕ್ಸಿಡೆಂಟ್, ಉರಿಯೂತದ ಗುಣಲಕ್ಷಣಗಳು ಸಹ ಇದರಲ್ಲಿ ಕಂಡುಬರುತ್ತವೆ. ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ.
ತೊಂಡೆಕಾಯಿು ತಿನ್ನುವುದರಿಂದ ಆಗುವ ಪ್ರಯೋಜನಗಳು :
1. ಮಧುಮೇಹದಲ್ಲಿ ಪರಿಣಾಮಕಾರಿ :
ಮಧುಮೇಹವು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ತಲೆದೋರಿರುವ ಗಂಭೀರ ಸಮಸ್ಯೆಯಾಗಿದೆ. ಈ ಕಾಯಿಲೆಗೆ ಇನ್ನು ಕೂಡಾ ಪರಿಣಾಮಕಾರಿಯಾಗಿರುವ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ. ಆದರೆ ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು. ತೊಂಡೆಕಾಯಿ ಆಂಟಿ-ಹೈಪರ್ಗ್ಲೈಸೆಮಿಕ್ ಪರಿಣಾಮಗಳನ್ನು ಹೊಂದಿದೆ. ಇದು ಮಧುಮೇಹ ರೋಗಿಗಳ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಈ ನಾಲ್ಕು ವಸ್ತುಗಳಿಂದ ದೂರವಿದ್ದರೆ ಕೊಲೆಸ್ಟ್ರಾಲ್ ಸಮಸ್ಯೆ ಕಾಡುವುದೇ ಇಲ್ಲ
2. ಹೃದ್ರೋಗವನ್ನು ತಡೆಗಟ್ಟುತ್ತದೆ :
ಮಧುಮೇಹದಂತೆಯೇ, ಹೃದಯಾಘಾತ ಕೂಡಾ ಇತ್ತೀಚಿಗೆ ಎಲ್ಲಾ ವಯಸ್ಸಿನವರು ಎದುರಿಸುತ್ತಿರುವ ಸಮಸ್ಯೆ. ಇದು ಪ್ರತಿವರ್ಷಬಹಳಷ್ಟು ಸಂಖ್ಯೆಯಲ್ಲಿ ಜನ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ತೊಂಡೆಕಾಯಿಯಲ್ಲಿ ಹೃದಯದ ಕಾಯಿಲೆಗಳನ್ನು ತೊಡೆದುಹಾಕುವ ಅನೇಕ ಪೋಷಕಾಂಶಗಳಿವೆ. ಹಾಗಾಗಿ ಇದು ಹೃದ್ರೋಗವನ್ನು ತಡೆಯಲು ಕೂಡಾ ಸಹಾಯ ಮಾಡುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.