ಹಾರ್ಟ್ ಅಟ್ಯಾಕ್ ಅಪಾಯವನ್ನು ಕಡಿಮೆ ಮಾಡುತ್ತದೆ ಈ ಸೊಪ್ಪು ..!
ದಿನೇ ದಿನೇ ಹೃದ್ರೋಗಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೃದ್ರೋಗವನ್ನು ತಡೆಯಲು ನುಗ್ಗೆ ಸೊಪ್ಪು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅತೀ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಅನೇಕ ಇರಬಹುದು. ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾದಾಗ, ಹೃದಯಾಘಾತದ ಸಾಧ್ಯತೆಗಳು ಹೆಚ್ಚು. ಆದರೆ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಹಹೃದಯಾಘಾತ ಅಪಾಯವನ್ನು ತಪ್ಪಿಸಬಹುದು ಎನ್ನಲಾಗಿದೆ.
ಹೃದಯಾಘಾತದಿಂದ ದೂರವಿರಲು ಈ ಸೊಪ್ಪು ಪ್ರಯೋಜನಕಾರಿ :
ಮೊದಲೇ ಹೇಳಿದಂತೆ ದಿನೇ ದಿನೇ ಹೃದ್ರೋಗಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೃದ್ರೋಗವನ್ನು ತಡೆಯಲು ನುಗ್ಗೆ ಸೊಪ್ಪು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ನುಗ್ಗೆ ಸೊಪ್ಪು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹೃದಯವನ್ನು ಸದೃಢವಾಗಿರಿಸಲು ನುಗ್ಗೆ ಸೊಪ್ಪು ಅತ್ಯುತ್ತಮ ಆಹಾರ ಎನ್ನಬಹುದು.
ಇದನ್ನೂ ಓದಿ : Urad Dal Side Effects : ಈ ಆರೋಗ್ಯ ಸಮಸ್ಯೆಗಳಿರುವವರು ಉದ್ದಿನಬೇಳೆ ತಿನ್ನಲೇಬಾರದು..!
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ :
ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಕೂಡಾ ನುಗ್ಗೆ ಸೊಪ್ಪು ಸಹಕಾರಿಯಾಗಿದೆ. ಅಧಿಕ ರಕ್ತದೊತ್ತಡ ಸಂಸ್ಯೆಯಿಂದ ಬಳಲುತ್ತಿರುವವರಿಗೆ ನುಗ್ಗೆ ಸೊಪ್ಪು ಬಹಳ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ನುಗ್ಗೆ ಸೊಪ್ಪು ಸೇವಿಸುತ್ತಿದ್ದರೆ ರಕ್ತದೊತ್ತಡ ನಿಯಂತ್ರಿಸಿ, ಆರೋಗ್ಯಕರವಾಗಿರಲು ಪ್ರಯೋಜನಕಾರಿಯಾಗಿರುತ್ತದೆ.
ತೂಕವನ್ನು ನಿಯಂತ್ರಣಕ್ಕೂ ಸೈ :
ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಕೂಡಾ ಪ್ರತಿಯೊಬ್ಬರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ನುಗ್ಗೆ ಸೊಪ್ಪು ತೂಕ ನಿಯಂತ್ರಣದಲ್ಲಿಯೂ ಸಹಾಯ ಮಾಡುತ್ತದೆ. ತೂಕ ಇಳಿಸಲು ಬಯಸುವವರು ಪ್ರತಿ ದಿನ ನುಗ್ಗೆ ಸೊಪ್ಪಿನ ರಸವನ್ನು ಸೇವಿಸಬೇಕು. ಹೀಗೆ ಪ್ರತಿನಿತ್ಯ ಸೇವಿಸುತ್ತಾ ಬಂದರೆ ದೇಹ ತೂಕ ಇಳಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Diabetes: ಡಯಾಬಿಟಿಸ್ ರೋಗಿಗಳು ಜೇನುತುಪ್ಪದೊಂದಿಗೆ ಇದನ್ನು ಸೇವಿಸಿದರೆ ಪ್ರಯೋಜನಕಾರಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.