ಬೆಂಗಳೂರು : ಬೆಳಗ್ಗಿನ ಹೊತ್ತು ಶುಭವಾಗಿದ್ದರೆ ಇಡೀ  ದಿನ ಶುಭವಾಗಿಯೇ ಕಳೆಯುತ್ತದೆ. ಮಾರ್ನಿಂಗ್ ರೂಟಿನ್ (Morning Routine) ಯಾವತ್ತಿಗೂ ಸರಿ ಇರಬೇಕು. ದಿನದ ಆರಂಭ ಸರಿ ಇದ್ರೆ, ಮುಂದೆ ಎಲ್ಲವೂ ಸರಿ. ಕೆಲವರು ಬೆಳಗ್ಗೆ ಕಣ್ತೆರೆಯುತ್ತಿದ್ದಂತೆಯೇ ಆರೋಗ್ಯದ (Health)ವಿಚಾರದಲ್ಲಿ ಹಲವು ತಪ್ಪುಗಳನ್ನು ಮಾಡಲು ಶುರುಮಾಡುತ್ತಾರೆ.  ಆ ಹೊತ್ತಿಗೆ ನಿಮಗದು ಸರಿ ಅನ್ನಿಸಿದ್ರೂ, ದೀರ್ಘಾವಧಿಯಲ್ಲಿ ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.  ಅಂತಹ ಹತ್ತು ಸಾಮಾನ್ಯ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ನಿಮ್ಮ ತಪ್ಪು ಕೂಡಾ ಆ ಪಟ್ಟಿಯಲ್ಲಿದ್ದರೆ ಇಂದೇ ಸರಿಪಡಿಸಿಕೊಳ್ಳಿ.


COMMERCIAL BREAK
SCROLL TO CONTINUE READING

ಬೆಳಗ್ಗೆ ಮಾಡುವ ಹತ್ತು ತಪ್ಪುಗಳು :
1. ಹೆಚ್ಚಿನವರು ಬೆಳಗ್ಗೆ ಎಚ್ಚರ ಆದ ತಕ್ಷಣ ಏಳಲ್ಲ (Wake up). ಇನ್ನೊಂದು ಸ್ವಲ್ಪ ಹೊತ್ತು ಮಲಗಿಯೇ ಇರೋಣ, ಅಂದುಕೊಂಡು ರಗ್ ಎಳೆದುಕೊಂಡು ನಿದ್ದೆ ಜಾರಿ ಬಿಡುತ್ತಾರೆ.   ಈ ಅಭ್ಯಾಸ ಸರಿಯಲ್ಲ. ಯಾವತ್ತಿಗೂ ಎಚ್ಚರ ಆದಾಕ್ಷಣ ಎದ್ದು ಬಿಡಬೇಕು. ಇದರಿಂದ ನೀವು ದಿನವಿಡೀ ಆಕ್ಟಿವ್ ಆಗಿರ್ತಿರಿ.  


ಇದನ್ನೂ ಓದಿ : ಔಟ್ ಡೋರ್ / Treadmill Walking ಇವೆರಡರಲ್ಲಿ ಯಾವುದು ಉತ್ತಮ


2. ಬೆಳಗ್ಗಿನ ಹೊತ್ತಿನಲ್ಲಿ ಎಂದಿಗೂ ಕತ್ತಲ ರೂಮಿನಲ್ಲಿರಬಾರದು (Dark room). ಬೆಳಗ್ಗಿನ ಹೊತ್ತು ನಿಮ್ಮನ್ನು ನೀವು ಬೆಳಕಿಗೆ ಒಡ್ಡಿಕೊಳ್ಳಬೇಕು.  ಸೂರ್ಯನಿಗೆ ಮೈಯೊಡ್ಡಿದರೆ ವಿಟಮಿನ್ ಡಿ (Vitamin D) ಸಿಗುತ್ತೆ.  ಜೊತೆಗೆ ದೇಹ ಸೋಂಕಿನ (infection) ವಿರುದ್ಧ ಹೋರಾಡಲು ತಯಾರಾಗುತ್ತದೆ. 


3. ಬೇಗ ಮಲಗಿ ಬೇಗ ಏಳುವುದು ಉತ್ತಮಅಭ್ಯಾಸ. ಕೆಲವರು ಲೇಟ್ ಮಲಗಿ ಲೇಟ್ ಏಳುತ್ತಾರೆ. ನಿದ್ರೆಗೊಂದು ರೆಗ್ಯುಲರ್ ಶೆಡ್ಯೂಲ್ (Sleep Schedule) ಇದ್ದರೆ ಇನ್ನೂ ಉತ್ತಮ. ರಾತ್ರಿ ಲೇಟಾಗಿ ಮಲಗಿದ್ರೂ ಕೂಡಾ ಬೆಳಗ್ಗೆ ನಿಶ್ಚಿತ ಸಮಯಕ್ಕೆ ಏಳಲೇ ಬೇಕು. ರಜೆಯ ದಿನ (holiday) ಕೂಡಾ  ನಿಶ್ಚಿತ ಸಮಯಕ್ಕೆ ಎದ್ದೇಳಬೇಕು. 
 
4.  ಎಚ್ಚರವಾದ ತಕ್ಷಣ ಬೆಡ್ ನಿಂದ ಎದ್ದು ನಿಂತುಕೊಳ್ಳುವ ಪ್ರಯತ್ನ ಮಾಡಲು ಹೋಗಬೇಡಿ. ಅದು ಅಪಾಯ. ಹಾಗೇ ಮಾಡಿದರೆ ರಕ್ತದ ಚಲನೆ (blood circulation) ಪಾದಗಳತ್ತ ಕುಸಿಯುತ್ತದೆ. ಬಿಪಿ ಲೋ (Low BP) ಆಗಿಬಿಡಬಹುದು. ಅದರ ಬದಲು ಎಚ್ಚರವಾದ ಬಳಿಕ ನಿಧಾನಕ್ಕೆ ಎದ್ದು ಕುಳಿತುಕೊಳ್ಳಿ. ದೇಹ ಆಕ್ಟಿವ್ ಆಗಲು ಸ್ವಲ್ಪ ಹೊತ್ತು ಬಿಡಿ. ನಂತರ ಹಾಸಿಗೆ ಬಿಟ್ಟು ಬನ್ನಿ. 


ಇದನ್ನೂ ಓದಿ : Tips for your Lungs: ಜಸ್ಟ್, ಈ ಮೂರು ಮಸಾಲೆ ತಿನ್ನಿ..! ನಿಮ್ಮ ಶ್ವಾಸಕೋಶ ಆಗುತ್ತೆ ಸ್ಟ್ರಾಂಗ್ & ಕ್ಲೀನ್.!


5. ಬೆಳಗ್ಗೆ ಎದ್ದಾಕ್ಷಣ ಕಾಫಿ ಕುಡಿಯುವುದು ಸರಿಯಲ್ಲ. ಬೆಡ್ ಕಾಫಿ (Bed coffee) ಬೇಡ. ಬೆಳಗ್ಗೆ ನಮ್ಮ ದೇಹ ನೈಸರ್ಗಿಕವಾಗಿ ಅಧಿಕ ಪ್ರಮಾಣದಲ್ಲಿ ಸ್ಟ್ರೆಸ್ ಹಾರ್ಮೋನ್ ಕಾರ್ಟಿಸಾಲ್ ನ್ನು (cortisol)ರಿಲೀಸ್ ಮಾಡುತ್ತಿರುತ್ತದೆ. 8ರಿಂದ 9 ಗಂಟೆಯ ತನಕ ಸ್ಟ್ರೆಸ್ ಹಾರ್ಮೋನ್ (stress hormone)ಅಧಿಕ ಪ್ರಮಾಣದಲ್ಲಿ ಸ್ರವಿಸುತ್ತದೆ. ಆ ಹೊತ್ತಿನಲ್ಲಿ ಕಾಫಿ ಒಳ್ಳೆಯದಲ್ಲ. ಕಾಫಿ ಏನಿದ್ದರೂ 9.30 ನಂತರ ಕುಡಿಯಿರಿ. 


6. ಬೆಳಗ್ಗೆ ಬ್ರಶ್ ಮಾಡಿ ಕಾಫಿ/ಟೀ ಕುಡಿಯಿರಿ. ಬ್ರಶ್ ಮಾಡುವ ಮೊದಲೇ ಕಾಫಿ / ಟೀ ಕುಡಿಯಬೇಡಿ. ಕಾಫಿ ಅಥವಾ ಟೀಯಲ್ಲಿ ಆಮ್ಲೀಯ ಗುಣಗಳಿರುತ್ತದೆ. ಕಾಫಿ ಕುಡಿದ ತಕ್ಷಣ  ಹಲ್ಲುಜ್ಜಿದರೆ ಹಲ್ಲು ಮತ್ತು ಒಸಡಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. 


7. ಬೆಳಗ್ಗೆ ಎದ್ದ ಕೂಡಲೇ ಸ್ಮಾರ್ಟ್ ಫೋನ್ (smart phone) ಅಥವಾ ಲ್ಯಾಪ್ ಟ್ಯಾಪ್ (Laptop) ಮುಂತಾದ ಡಿವೈಸ್ ನೋಡಬೇಡಿ. ಹಾಗೆ ಮಾಡಿದರೆ ಮಾನಸಿಕವಾಗಿ ಸ್ಟ್ರೆಸ್ ಶುರುವಾಗುತ್ತದೆ.  ಪೋನ್, ಕಂಪ್ಯೂಟರ್ ಗಳಿಂದ ದಿನ ಶುರು ಮಾಡಲೇ ಬೇಡಿ


8. ಯಾವುದೇ ಕಾರಣಕ್ಕೂ ಮೆಡಿಟೇಶನ್ (Meditation) ತಪ್ಪಿಸಬೇಡಿ. ಏಕಾಗ್ರತೆ ಮತ್ತು ಉಸಿರಾಟಕ್ಕೆ ತತ್ಪರವಾಗುವ ಕಸರತ್ತುಗಳನ್ನು ಮಾಡಿ. ರೆಗ್ಯುಲರ್ ವರ್ಕೌಟ್ ಮಾಡಿ.


ಇದನ್ನೂ ಓದಿ : Sanitary Napkins ಬಳಸುವುದರಿಂದ Cancer ಬರುತ್ತದೆಯೇ?


9. ಬೆಳಗ್ಗೆ ಎದ್ದು ಸಿಹಿ ವಸ್ತುಗಳನ್ನು ತಿನ್ನಬೇಡಿ.  ಇದರಿಂದ ಆಹಾರದ ರೂಟಿನ್ ತಪ್ಪುತ್ತದೆ. ಬೇಗ ಹಸಿವಾಗಲು ಶುರುವಾಗುತ್ತದೆ. 


10. ಬೆಳಗ್ಗೆ ಎದ್ದು ಯಾರ ಜೊತೆಗೂ ಜಗಳ ಮಾಡಲು ಹೋಗಬೇಡಿ. ಇದರಿಂದ ನಿಮ್ಮ ಮೂಡ್ ಹಾಳಾಗುತ್ತದೆ ಜೊತೆಗೆ ಸ್ಟ್ರೆಸ್ ಹೆಚ್ಚುತ್ತದೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.