ಭಾರತದಲ್ಲಿ 70% ಗಿಂತ ಹೆಚ್ಚು ಜನರಿಗೆ ವಿಟಮಿನ್ 'ಡಿ' ಕೊರತೆ; ಅದರ ಲಕ್ಷಣಗಳು ಏನೆಂದು ತಿಳಿಯಿರಿ

ವಿಟಮಿನ್-ಡಿ ಕೊರತೆಯಿಂದಾಗಿ, ಜನರ ಸ್ನಾಯುಗಳು ದುರ್ಬಲಗೊಳ್ಳುತ್ತಿವೆ. ದೇಹದ ಒಂದಿಲ್ಲೊಂದು ಭಾಗದಲ್ಲಿ ನೋವಿನ ಛಾಯೆ ಇದ್ದೇ ಇರುತ್ತದೆ.

Last Updated : Sep 11, 2019, 11:58 AM IST
ಭಾರತದಲ್ಲಿ 70% ಗಿಂತ ಹೆಚ್ಚು ಜನರಿಗೆ ವಿಟಮಿನ್ 'ಡಿ' ಕೊರತೆ; ಅದರ ಲಕ್ಷಣಗಳು ಏನೆಂದು ತಿಳಿಯಿರಿ title=
Representational image

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಗಗನದೆತ್ತರಕ್ಕಿರುವ ಕಟ್ಟಡಗಳು ಹೆಚ್ಚುತ್ತಿವೆ ಮತ್ತು ವಸಾಹತುಗಳು ಸಹ ದಟ್ಟವಾಗುತ್ತಿವೆ. ಅದೇ ಸಮಯದಲ್ಲಿ, ಬೆಳಿಗ್ಗೆ ಕೆಲಸಕ್ಕೆಂದು ಕಚೇರಿಗೆ ಹೋಗಿ 9 ಗಂಟೆ ಕೆಲಸದಲ್ಲಿ ಬ್ಯುಸಿ ಆಗಿರುವ ನೌಕರರು ಸೂರ್ಯನನ್ನು ನೋಡುವುದೇ ಅತಿ ವಿರಳ. ಅಂತಹ ಪರಿಸ್ಥಿತಿಯಲ್ಲಿ, ವಿಟಮಿನ್ 'ಡಿ' ಕೊರತೆಯು ಜನರ ಮೇಲೆ ವೇಗವಾಗಿ ಆಕ್ರಮಣ ಮಾಡುತ್ತಿದೆ. ಇದರಿಂದಾಗಿ ಜನರು ಕಿರಿಕಿರಿ ಮತ್ತು ಆಯಾಸದ ಬಗ್ಗೆ ದೂರು ನೀಡುತ್ತಲೇ ಇರುತ್ತಾರೆ. 

ಇತ್ತೀಚಿನ ಸಂಶೋಧನೆಯ ಪ್ರಕಾರ ವಿಶ್ವಾದ್ಯಂತ 70 ಪ್ರತಿಶತಕ್ಕೂ ಹೆಚ್ಚು ಜನರು ವಿಟಮಿನ್-ಡಿ ಕೊರತೆಯಿಂದ ಬಳಲುತ್ತಿದ್ದಾರೆ, ಇದರಲ್ಲಿ ಹೆಚ್ಚಾಗಿ ಗರ್ಭಿಣಿಯರು ಸೇರಿದ್ದಾರೆ. ವಿಟಮಿನ್-ಡಿ ಕೊರತೆಯಿಂದಾಗಿ, ಜನರ ಸ್ನಾಯುಗಳು ದುರ್ಬಲಗೊಳ್ಳುತ್ತಿವೆ ಮತ್ತು ದೇಹದ ಒಂದಿಲ್ಲೊಂದು ಭಾಗದಲ್ಲಿ ನೋವಿನ ಛಾಯೆ ಇದ್ದೇ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ವಿಟಮಿನ್-ಡಿ ಕೊರತೆಯೊಂದಿಗೆ ಹೋರಾಡುತ್ತಿದ್ದೀರಾ ಎಂದು ತಿಳಿಯಲು ನೀವು ಬಯಸಿದರೆ, ವಿಟಮಿನ್-ಡಿ ಕೊರತೆಯ ಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.

ಕೂದಲು ಉದುರುವುದು:
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಬಹುತೇಕ ಎಲ್ಲರಲ್ಲಿ ಕಂಡುಬರುತ್ತದೆ. ಕೂದಲು ಉದುರುವಿಕೆ ಸಮಸ್ಯೆಗೆ ವಿಟಮಿನ್-ಡಿ ಕೊರತೆ ಕೂಡ ಒಂದು ಎಂಬುದು ಕೆಲವೇ ಜನರಿಗೆ ಮಾತ್ರ ತಿಳಿದಿರುತ್ತದೆ. ವಾಸ್ತವವಾಗಿ, ವಿಟಮಿನ್ 'ಡಿ' ಕೊರತೆಯಿಂದಾಗಿ, ಕೂದಲಿನ ಹಿಡಿತವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಇದರ ಕೊರತೆಯಿಂದಾಗಿ ಕೂದಲು ಅತಿಯಾಗಿ ಉದುರಲು ಪ್ರಾರಂಭಿಸುತ್ತದೆ.

ಆಯಾಸ:
ದಿನವಿಡೀ ಸುಸ್ತಾಗಿರುವುದು ವಿಟಮಿನ್ 'ಡಿ' ಕೊರತೆಯ ಲಕ್ಷಣಗಳಲ್ಲಿ ಒಂದಾಗಿದೆ. ಪೂರ್ಣ ನಿದ್ರೆ ಮತ್ತು ವಿಶ್ರಾಂತಿಯ ನಂತರವೂ ನಿಮಗೆ ದಿನವಿಡೀ ದಣಿದಂತೆ ಭಾಸವಾಗುತ್ತಿದ್ದರೆ, ನೀವು ವಿಟಮಿನ್ 'ಡಿ' ಪರೀಕ್ಷೆ ಮಾಡಿಸಬೇಕಿರುವುದು ಅತ್ಯಗತ್ಯ. ಏಕೆಂದರೆ ವಿಟಮಿನ್ 'ಡಿ' ಕೊರತೆಯು ರಕ್ತದೊತ್ತಡದ ಮೇಲೂ ಪರಿಣಾಮ ಬೀರುತ್ತ.

ಮೈ-ಕೈ ನೋವು:
ದೇಹದ ಹಲವು ಭಾಗಗಳಲ್ಲಿ ನೋವು(ಸಾಮಾನ್ಯವಾಗಿ ಮೈ-ಕೈ ನೋವು) ವಿಟಮಿನ್ 'ಡಿ' ಕೊರತೆಯ ಲಕ್ಷಣವಾಗಿದೆ. ನಿಮಗೂ ಆಗಾಗ್ಗೆ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ವಿಟಮಿನ್ 'ಡಿ' ಕೊರತೆ ಒಂದು ಕಾರಣವಾಗಿರಬಹುದು.

ತಡವಾಗಿ ಗಾಯ ಗುಣಪಡಿಸುವುದು:
ಸಣ್ಣ ಗಾಯದ ಹೊರತಾಗಿಯೂ ನಿಮ್ಮ ಗಾಯವು ಶೀಘ್ರವಾಗಿ ಗುಣವಾಗದಿದ್ದರೆ, ಅದು ವಿಟಮಿನ್ 'ಡಿ' ಕೊರತೆಯಿಂದಲೂ ಆಗಬಹುದು. ನೀವು ಸಹ ಈ ಸಮಸ್ಯೆಗಳನ್ನು ಎದುರಿಸುತ್ತಿರುವಿರಿ ಎಂದು ನೀವು ಭಾವಿಸಿದರೆ ವಿಟಮಿನ್ ಡಿ ಪರೀಕ್ಷೆ ಮಾಡಿಸಿ. 

ವಿಟಮಿನ್ 'ಡಿ' ಕೊರತೆ ಇರುವವರು ಅದನ್ನು ತೊಡೆದುಹಾಕಲು, ಬೆಳಿಗ್ಗೆ 6 ರಿಂದ 7 ರ ನಡುವೆ ಸೂರ್ಯನ ಬೆಳಕಿನಲ್ಲಿ ಕೊಂಚ ಸಮಯ ಹೊರಗೆ ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಆಹಾರದಲ್ಲಿ ಮೊಟ್ಟೆ, ಚೀಸ್, ಅಣಬೆಗಳು ಮತ್ತು ಸೋಯಾಬೀನ್ ಮುಂತಾದವುಗಳನ್ನು ಸೇರಿಸಿ.

Trending News