Diabetes Symptoms: ಮಧುಮೇಹವು ಮನುಷ್ಯರಿಗೆ ಮೂಕ ಕೊಲೆಗಾರನಿದ್ದಂತೆ. ಈ ಕಾಯಿಲೆ ಒಮ್ಮೆ ಬಂತೆಂದರೆ ಜೀವನ ಪರ್ಯಂತ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಅದರಲ್ಲೂ ಮುಖ್ಯವಾಗಿ ಡಯಾಬಿಟಿಸ್ ರೋಗಿಗಳು ತಾವು ತೆಗೆದುಕೊಳ್ಳುವ ಆಹಾರ-ಪಾನೀಯಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ಅದು ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 


COMMERCIAL BREAK
SCROLL TO CONTINUE READING

ಡಯಾಬಿಟಿಸ್ ಸಮಸ್ಯೆಗೆ ಲಕ್ಷಣಗಳು ಮತ್ತು ಕಾರಣಗಳು: 
ಡಯಾಬಿಟಿಸ್ ಕಾಯಿಲೆಗೆ ಹಲವು ಕಾರಣಗಳಿರಬಹುದು. ಕೆಲವರಿಗೆ ಇದು ಅನುವಂಶೀಯವಾಗಿ ಬರುವ ಕಾಯಿಲೆ. ಇನ್ನೂ ಕೆಲವರಿಗೆ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕಾರ ಆಹಾರ ಪದ್ದತಿಯಿಂದಲೂ ಮಧುಮೇಹ ಬರಬಹುದು. 


ಆರೋಗ್ಯ ತಜ್ಞರ ಪ್ರಕಾರ, ಮಧುಮೇಹದ ಆರಂಭಿಕ ಹಂತದಲ್ಲಿ ಮುಂಜಾನೆ ಎದ್ದ ಬಳಿಕ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  ನಿಮ್ಮಲ್ಲಿಯೂ ಬೆಳಿಗ್ಗೆ ವೇಳೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದೆ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗಿದ್ದರೆ, ಮುಂಜಾನೆ ವೇಳೆ ಕಾಣಿಸಿಕೊಳ್ಳುವ ಡಯಾಬಿಟಿಸ್ ಲಕ್ಷಣಗಳ ಬಗ್ಗೆ ತಿಳಿಯೋಣ... 


ಇದನ್ನೂ ಓದಿ- ಈ 3 ಕೆಟ್ಟ ಅಭ್ಯಾಸಗಳಿಂದ ಯಕೃತ್ತು ದುರ್ಬಲಗೊಳ್ಳುತ್ತದೆ, ಇಂದೇ ಅವುಗಳನ್ನು ನಿಲ್ಲಿಸಿ


ಬೆಳಗಿನ ವೇಳೆ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹದ ಸಂಕೇತವೂ ಆಗಿರಬಹುದು, ಎಚ್ಚರ! 
ಬಾಯಿ ಒಣಗುವುದು: 

ಬೇಸಿಗೆಯಲ್ಲಿ ಬೆಳಿಗ್ಗೆ ಎದ್ದಾಗ ಬಾಯಿ ಒಣಗಿರುವುದು ಸರ್ವೇ ಸಾಮಾನ್ಯ. ಆದರೆ, ಮಧುಮೇಹ ಇರುವವರಲ್ಲಿ ಬೆಳಿಗ್ಗೆ ಎದ್ದಾಗ ಅತಿಯಾದ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಎಷ್ಟು ನೀರು ಕುಡಿದರೂ ಸಹ ಸಾಕು ಎಂದೆನಿಸುವುದಿಲ್ಲ. ಪದೇ ಪದೇ ಬಾಯಿ ಒಣಗುತ್ತಲೇ ಇರುತ್ತದೆ. 


ಮಸುಕಾದ ದೃಷ್ಟಿ: 
ಡಯಾಬಿಟಿಸ್ ಸಮಸ್ಯೆ ಇರುವವರಲ್ಲಿ ಬೆಳಿಗ್ಗೆ ಎದ್ದ ತಕ್ಷಣ ದೃಷ್ಟಿ ಸ್ವಲ್ಪ ಮಸುಕಾದಂತೆ ಭಾಸವಾಗುತ್ತದೆ. ಇದು ನಿಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಲ್ಲ ಎಂಬುದರ ಸಂಕೇತವಾಗಿದೆ. 


ವಾಕರಿಕೆ: 
ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ವಾಕರಿಕೆಯಂತಹ ಸಮಸ್ಯೆ ನಿಮ್ಮನ್ನು ಬಾಧಿಸಬಹುದು. ಯಾವಾಗಲೋ ಒಮ್ಮೆ ಈ ರೀತಿ ಆದರೆ ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ, ನಿಯಮಿತವಾಗಿ ಈ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ತಡಮಾಡದೆಯೇ ವೈದ್ಯರನ್ನು ಸಂಪರ್ಕಿಸಿ. 


ಇದನ್ನೂ ಓದಿ- ನೀವು ಕೂಡಾ ಈ ಹಣ್ಣುಗಳ ಸಿಪ್ಪೆ ಸುಲಿದು ತಿನ್ನುತ್ತೀರಾ? ಹಾಗಿದ್ದರೆ ಈ ಸುದ್ದಿ ಓದಿ


ಮೇಲೆ ಉಲ್ಲೇಖಿಸಲಾದ ಮೂರು ಪ್ರಮುಖ ರೋಗ ಲಕ್ಷಣಗಳ ಹೊರತಾಗಿ ಅತಿಯಾದ ಆಯಾಸ, ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ, ಮೂರ್ಛೆ ಹೋಗುವುದು. ಈ ರೀತಿಯ ಲಕ್ಷಣಗಳು ಕೂಡ ನಿಮಗೆ ಮಧುಮೇಹದ ಎಚ್ಚರಿಕೆಯ ಗಂಟೆಯಾಗಿರಬಹುದು ಎನ್ನಲಾಗುತ್ತದೆ. ನಿಮ್ಮಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡು ಬಂದರೆ ತಡಮಾಡದೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.