ಐಸ್ ಕ್ರೀಮ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಂತೆ, ಇಷ್ಟೆಲ್ಲಾ ಲಾಭಗಳಿವೆ.!

Ice Cream Health Benefits : ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಇಷ್ಟಪಡುವ ಪದಾರ್ಥಗಳಲ್ಲಿ ಐಸ್ ಕ್ರೀಮ್ ಕೂಡ ಒಂದು. ಕೆಲವು ಜನರು ಐಸ್ ಕ್ರೀಮ್‌ ಅನ್ನು ಸ್ಟ್ರೆಸ್ ಬಸ್ಟರ್ ಎಂದು ಕಂಡುಕೊಳ್ಳುತ್ತಾರೆ.

Written by - Chetana Devarmani | Last Updated : Nov 8, 2023, 11:08 AM IST
  • ಐಸ್ ಕ್ರೀಮ್ ಆರೋಗ್ಯ ಪ್ರಯೋಜನಗಳು
  • ಐಸ್ ಕ್ರೀಮ್ ತಿನ್ನುವುದರ ಲಾಭಗಳು
  • ಸ್ಟ್ರೆಸ್ ಬಸ್ಟರ್ ಆಗಬಹುದು ಐಸ್ ಕ್ರೀಮ್
ಐಸ್ ಕ್ರೀಮ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಂತೆ, ಇಷ್ಟೆಲ್ಲಾ ಲಾಭಗಳಿವೆ.! title=
ICE Cream

Benefits Of Eating Ice Cream : ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಐಸ್ ಕ್ರೀಮ್ ಇಷ್ಟಪಡದವರೇ ಇಲ್ಲ. ಮಕ್ಕಳು ಎಷ್ಟೇ ಐಸ್ ಕ್ರೀಮ್ ಬೇಕು ಎಂದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬಹುತೇಕ ಪೋಷಕರು ಹೇಳುತ್ತಾರೆ. ಆದರೆ ಐಸ್ ಕ್ರೀಮ್ ತಿನ್ನುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. 

ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಇಷ್ಟಪಡುವ ಪದಾರ್ಥಗಳಲ್ಲಿ ಐಸ್ ಕ್ರೀಮ್ ಕೂಡ ಒಂದು. ಕೆಲವು ಜನರು ಐಸ್ ಕ್ರೀಮ್‌ ಅನ್ನು ಸ್ಟ್ರೆಸ್ ಬಸ್ಟರ್ ಎಂದು ಕಂಡುಕೊಳ್ಳುತ್ತಾರೆ. ನೀವು ಹೆಚ್ಚು ಐಸ್ ಕ್ರೀಮ್ ತಿಂದರೆ ಕೆಮ್ಮು ಬರುತ್ತ ಎಂಬುದು ಸಾಮಾನ್ಯ ನಂಬಿಕೆ. ಎಲ್ಲರೂ ಯೋಚಿಸುವಂತೆ, ಐಸ್ ಕ್ರೀಮ್ ತಿನ್ನುವುದರಿಂದ ಕೆಲವು ಅನಾನುಕೂಲತೆಗಳಿರಬಹುದು, ಆದರೆ ಅದರಿಂದ ಕೆಲವು ಪ್ರಯೋಜನಗಳಿವೆ.  

ಐಸ್ ಕ್ರೀಮ್ ರುಚಿಯನ್ನು ಮಾತ್ರವಲ್ಲದೆ ಕೆಲವು ಪೌಷ್ಟಿಕಾಂಶದ ಮೌಲ್ಯವನ್ನೂ ಹೊಂದಿದೆ. ಐಸ್ ಕ್ರೀಮ್ ಸಂಪೂರ್ಣ ಪೌಷ್ಟಿಕಾಂಶದ ಆಹಾರವಲ್ಲದಿದ್ದರೂ, ಪ್ರಸಿದ್ಧ ಪೌಷ್ಟಿಕತಜ್ಞ ಲಾರಾ ಎಂ. ಅಲ್ಲೆ ಐಸ್ ಕ್ರೀಮ್ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳುತ್ತಾರೆ.

ಐಸ್ ಕ್ರೀಮ್ ಉತ್ತಮ ಗುಣಮಟ್ಟದ್ದಾಗಿದ್ದರೆ ಮತ್ತು ಅದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಸೇರಿಸದಿದ್ದರೆ, ಖಂಡಿತವಾಗಿಯೂ ಐಸ್ ಕ್ರೀಮ್ ನಮ್ಮ ದೇಹಕ್ಕೆ ಉಪಯುಕ್ತ ಪೋಷಕಾಂಶಗಳನ್ನು ಹೊಂದಿರುತ್ತದೆ. 

ಐಸ್ ಕ್ರೀಮ್ ತಿನ್ನುವುದರಿಂದ ಎಂಡಾರ್ಫಿನ್ ಎಂಬ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸು ಮುದಗೊಳ್ಳುತ್ತದೆ. ನಮಗೆ ಗೊತ್ತಿಲ್ಲದೆಯೇ ಸಂತೋಷ ನಮ್ಮೊಳಗೆ ಬರುತ್ತದೆ. 

ಇದನ್ನೂ ಓದಿ : ಪದೆ ಪದೇ ಬಿಸಿ ಮಾಡಿ ತಿಂದರೆ ವಿಷವಾಗುತ್ತೆ ಈ 5 ಆಹಾರ! 

ಐಸ್ ಕ್ರೀಮ್ ತಿನ್ನುವುದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಪೂರೈಕೆ ಹೆಚ್ಚಾಗುತ್ತದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಐಸ್ ಕ್ರೀಮ್ ತಿನ್ನುವುದರಿಂದ ನಮ್ಮ ದೇಹದಲ್ಲಿ ಶಕ್ತಿಯು ಬಹುಬೇಗ ಹೆಚ್ಚುತ್ತದೆ. ಸಾಮಾನ್ಯ ಆಹಾರಕ್ಕೆ ಹೋಲಿಸಿದರೆ ಐಸ್ ಕ್ರೀಮ್ ನಮಗೆ ಬೇಗನೆ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹಲ್ಲಿನ ಸಮಸ್ಯೆಗಳ ಸಮಯದಲ್ಲಿ ಐಸ್ ಕ್ರೀಮ್ ನಮಗೆ ತುಂಬಾ ಉಪಯುಕ್ತವಾಗಿದೆ. ಹಲ್ಲು ತೆಗೆದ ನಂತರ ಐಸ್ ಕ್ರೀಂ ತಿಂದರೆ ಗಾಯ ಬಹುಬೇಗ ವಾಸಿಯಾಗುತ್ತದೆ ಎಂದು ವೈದ್ಯರೂ ಒಪ್ಪುತ್ತಾರೆ. ಆ ಸಮಯದಲ್ಲಿ ಐಸ್ ಕ್ರೀಮ್ ತಿಂದರೆ ತುಂಬಾ ಒಳ್ಳೆಯದು ಎಂದೂ ಹೇಳಲಾಗುತ್ತದೆ.

ಇದನ್ನೂ ಓದಿ : ಪ್ರತಿದಿನ ಮೊಳಕೆ ಬರಿಸಿದ ಈ ಕಾಳು ಸೇವಿಸಿ.. ಸರ್ವರೋಗಕ್ಕೂ ಒಂದೇ ಮದ್ದು!

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News