ನವದೆಹಲಿ:  Nasal Breathing - ಹಲವು ಬಾರಿ ನಾವು ಮಲಗಿರುವಾಗ ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತೇವೆ, ಆದರೆ, ಈ ಸಂಗತಿ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂಗತಿ ನಿಮಗೆ ತಿಳಿದಿದೆಯೇ.  ಮೊದಲು ಮೂಗು ಮತ್ತು ಬಾಯಿಯ ಮೂಲಕ  ಉಸಿರಾಟದ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳೋಣ ಮತ್ತು ಮೂಗಿನ ಉಸಿರಾಟವನ್ನು ನೀವು ಹೇಗೆ ಸುಧಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದರಿಂದ ಆರೋಗ್ಯಕ್ಕೇನು ಹಾನಿ?
ತಜ್ಞರ ಪ್ರಕಾರ, ಮೂಗಿನ ಮೂಲಕ ಉಸಿರಾಡುವುದರಿಂದ (Breathing) ನಮಗೆ ಹಲವು ರೀತಿಯಲ್ಲಿ ಲಾಭಗಳು ಸಿಗುತ್ತವೆ ಎನ್ನುತ್ತಾರೆ. ಇದು ತೂಕ ಇಳಿಕೆಗೆ ಸಹಕಾರಿಯಾಗಿದೆ. ಉಸಿರಾಟದ ಪ್ರಕ್ರಿಯೆಯಲ್ಲಿ ನಾವು ಆಮ್ಲಜನಕವನ್ನು ಒಳಗೆ ತೆಗೆದುಕೊಂಡು, ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಹಾಕುತ್ತೇವೆ. ಸಾಮಾನ್ಯವಾಗಿ ನಾವು ಮೂಗಿನ ಮೂಲಕ ಉಸಿರಾಡುತ್ತೇವೆ, ಆದರೆ ಮೂಗು ಕಟ್ಟಿದ (Nasal Congestion) ಸಂದರ್ಭದಲ್ಲಿ, ಅನೇಕ ಬಾರಿ ನಾವು ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತೇವೆ. ಹೆಚ್ಚಿನ ಜನರು ಮಲಗುವಾಗ ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತಾರೆ, ಇದು ಆರೋಗ್ಯಕ್ಕೆ (Health Tips) ಹಾನಿಯನ್ನುಂಟು ಮಾಡುತ್ತದೆ.


ಇದನ್ನೂ ಓದಿ-Almond Tea Benefits: ನೀವು ಎಂದಾದರೂ ಬಾದಾಮಿ ಚಹಾವನ್ನು ಪ್ರಯತ್ನಿಸಿದ್ದೀರಾ? ಇದರ 5 ಪ್ರಯೋಜನವನ್ನು ತಪ್ಪದೇ ತಿಳಿಯಿರಿ


ಸಂಪೂರ್ಣ ಆರೋಗ್ಯಕ್ಕಾಗಿ Nasal breathing
ಮೂಗಿನ ಉಸಿರಾಟವು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಜ್ಞರ ಪ್ರಕಾರ, ನಿದ್ದೆ ಮಾಡುವಾಗ ನಿಮ್ಮ ದೇಹವು ಹೆಚ್ಚು ಚೇತರಿಸಿಕೊಳ್ಳುತ್ತದೆ. ಇದು ತೂಕ ಇಳಿಸುವಲ್ಲಿ (Weight Loss) ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕಾಗಿ ನಿಮ್ಮ ನರ್ವಸ್ ಸಿಸ್ಟಂ ಸಂಪೂರ್ಣ ವಿಶ್ರಾಂತಿಯ ಮಾಡ್ ನಲ್ಲಿ ಮತ್ತು ಶರೀರ ಡೈಜೆಸ್ಟ್ ಮೋಡ್ ನಲ್ಲಿರುವುದು ತುಂಬಾ ಮುಖ್ಯ. ಹೀಗಾಗಿ ಮೂಗಿನಿಂದ ಉಸಿರಾಟ ಇದಕ್ಕಾಗಿ ನಿಮಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ-ನಿಮ್ಮ ಅಡುಗೆ ಮನೆಯಲ್ಲಿರುವ ಅರಿಶಿನವು ಕಲಬೆರಕೆಯಾಗಿದೆಯೇ ಪರೀಕ್ಷಿಸುವ ಮಾರ್ಗ ಇಲ್ಲಿದೆ


ನೀವು ನಿಮ್ಮ ಮೂಗಿನಿಂದ ಉಸಿರಾಟದ ಪ್ರಕ್ರಿಯೆಯನ್ನು ಸುಧಾರಿಸಬಹುದು
ಹಲವು ಬಾರಿ, ಮೂಗಿನ ದಾರಿಯಲ್ಲಿ ಅಡಚಣೆ ಉಂಟಾಗಿಗಿ, ನೀವು ನಿಮ್ಮ ಬಾಯಿಯ ಮೂಲಕ ಉಸಿರಾಟವನ್ನು ಪ್ರಾರಂಭಿಸುತ್ತೀರಿ. ಮೂಗಿನ ಉಸಿರಾಟವನ್ನು ಸುಧಾರಿಸಲು, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. Nasal Passage ಬ್ಲಾಕ್ ಆಗಿದ್ದರೆ, ಉತ್ತಮ ಗುಣಮಟ್ಟದ ವಿಟಮಿನ್ ಸಿ ಪೂರಕ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಕರ್ಕ್ಯುಮಿನ್ ನಿಂದ ಸೈನಸ್ ತಡೆಗಳನ್ನು ನೀವು ನಿವಾರಿಸಬಹುದು. ಸತು ಸಮೃದ್ಧವಾಗಿರುವ ಆಹಾರಗಳು ಮತ್ತು ಪೂರಕಗಳು ಮೂಗಿನ ಉಸಿರಾಟವನ್ನು ಸುಧಾರಿಸುವಲ್ಲಿ ಸಹಕಾರಿ. ಪೂರಕ ಆಹಾರ ಮತ್ತು ಡೋಸೇಜ್ ಬಗ್ಗೆ ನಿಮ್ಮ ಪೌಷ್ಟಿಕ ತಜ್ಞರನ್ನು ಸಂಪರ್ಕಿಸಿ.


ಇದನ್ನೂ ಓದಿ-Men's health: ನಿತ್ಯ ರಾತ್ರಿ ಹಾಲಿನ ಜೊತೆ ಇದನ್ನು ಬೆರೆಸಿ ಕುಡಿದರೆ, ಪುರುಷರಿಗೆ ಸಿಗುತ್ತೆ ಅದ್ಭುತ ಪ್ರಯೋಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.