ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆಯ ಪ್ರಕೋಪ ಮುಂದುವರೆದಿದೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 2 ಕೋಟಿ 33 ಲಕ್ಷ 40 ಸಾವಿರದ 938ಕ್ಕೆ ತಲುಪಿದ್ದರೆ, ಪ್ರಾಣ ಕಳೆದುಕೊಂಡವರ ಸಂಖ್ಯೆ 2 ಲಕ್ಷ 54 ಸಾವಿರದ 197ಕ್ಕೆ ತಲುಪಿದೆ. ಇನ್ನೂ ದೇಶಾದ್ಯಂತ 30 ಲಕ್ಷಕ್ಕೂ ಅಧಿಕ ಸಕ್ರೀಯ ಪ್ರಕರಣಗಳಿವೆ. ಏತನ್ಮಧ್ಯೇ ಕೊರೊನಾ ವೈರಸ್ ಎರಡನೇ ಅಲೆಯ ಪ್ರಕೋಪದ ಜೊತೆಗೆ ಇದೀಗ ಮತ್ತೊಂದು ಹೊಸ ರೋಗದ ಅಪಾಯ ಹೆಚ್ಚಾಗುತ್ತಿದೆ. ಈ ಹೊಸ ಅಪಾಯಕ್ಕೆ ವೈದ್ಯರು ಮ್ಯೂಕರ್ಮೈಕೊಸಿಸ್  Mucormycosis ಹೆಸರನ್ನಿಟ್ಟಿದ್ದಾರೆ. ರೋಗಿಗಳಲ್ಲಿ ಇದೀಗ ಕೊರೊನಾ (Covid-19) ಲಕ್ಷಣಗಳ ಜೊತೆಗೆಯೇ ಮ್ಯೂಕರ್ಮೈಕೊಸಿಸ್ ಲಕ್ಷಣಗಳೂ ಕೂಡ ಕಾಣಿಸಲಾರಂಭಿಸಿವೆ.


COMMERCIAL BREAK
SCROLL TO CONTINUE READING

ಶೇ.50 ರಷ್ಟು ರೋಗಿಗಳು ಸಾವನ್ನಪ್ಪುತ್ತಿದ್ದಾರೆ
ದೇಶದ ಮೂರು ರಾಜ್ಯಗಳಗಿರುವ ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನ್ ಗಳಲ್ಲಿ ಮ್ಯೂಕರ್ಮೈಕೊಸಿಸ್ ಪ್ರಕರಣಗಳ ಪ್ರಕೋಪದ ಕಾರಣ ಹಾಹಾಕಾರ ಸೃಷ್ಟಿಯಾಗಿದೆ. ಈ ಕುರಿತು ಹೇಳಿಕೆ ಖುದ್ದು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೊಪೆ, ಮಹಾರಾಷ್ಟ್ರದಲ್ಲಿ (Maharashtra) ಸುಮಾರು 2000ಕ್ಕೂ ಅಧಿಕ ಮ್ಯೂಕರ್ಮೈಕೊಸಿಸ್ ಸಕ್ರೀಯ ಪ್ರಕರಣಗಳಿವೆ ಎಂದಿದ್ದಾರೆ. ಗುಜರಾತ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿಯೂ ಕೂಡ ಇದರ ಪ್ರಕೋಪ ಹೆಚ್ಚಾಗುತ್ತಿದೆ. ಪರಿಸ್ಥಿತಿ ಯಾವ ಮಟ್ಟಕ್ಕೆ ತಿರುಗಿದೆ ಎಂದರೆ, ಈ ರೋಗದಿನ ಬಾಧಿತರಾದವರಲ್ಲಿ ಶೇ.50 ರಷ್ಟು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಈ ರಾಜ್ಯಗಳಲ್ಲಿ ಇದೀಗ ಮ್ಯೂಕರ್ಮೈಕೊಸಿಸ್ ಪ್ರಕರಣಗಳ ಮೇಲೆ ಗಮನ ಕೆಂದ್ರೀಕರಿಸಲಾಗುತ್ತಿದೆ.


ಇದನ್ನೂ ಓದಿ- ಇದುವರೆಗೆ 44 ದೇಶಗಳಿಗೆ ತಲುಪಿದ Corona ಭಾರತೀಯ ರೂಪಾಂತರಿ, WHO ಹೇಳಿದ್ದೇನು ?


ಚಿಂತೆ ಹೆಚ್ಚಿಸಿದ Mucormycosis
Mucormycosis ಲಕ್ಷಣಗಳಲ್ಲಿ ಒಂದು ಬ್ಲಾಕ್ ಫಂಗಸ್ ಕೂಡ ಇದ್ದು, ಇದರಿಂದ ಶೇ.50 ರಷ್ಟು ರೋಗಿಗಳು ತಮ್ಮ ಪ್ರಾಣಕಳೆದುಕೊಂಡಿದ್ದಾರೆ (Mucormycosis Death Cases). ಒಂದು ವೇಳೆ ಇದರಿಂದ ಜನರು ಪ್ರಾಣರಕ್ಷಿಸಿಕೊಂಡರು ಕೂಡ ಅವರು ದೃಷ್ಟಿಕಳೆದುಕೊಳ್ಳುತ್ತಿದ್ದಾರೆ. ಇತರ ಇತರೆ ಲಕ್ಷಣಗಳಲ್ಲಿ ತಲೆನೋವು, ಜ್ವರ, ಕಣ್ಣು ಹಾಗೂ ಮೂಗಿನಲ್ಲಿ ನೋವು ಶಾಮೀಲಾಗಿವೆ.


ಇದನ್ನೂ ಓದಿ- COVID-19: 14 ದಿನಗಳ Quarantine ನಂತರ ಆರ್‌ಟಿ-ಪಿಸಿಆರ್ ಟೆಸ್ಟ್ ಏಕೆ ಅಗತ್ಯವಿಲ್ಲ?


ಗುಜರಾತ್ ಹಾಗೂ ರಾಜಸ್ಥಾನಗಳಲ್ಲಿ ಬೆಳಕಿಗೆ ಬಂದ ಹೊಸ ಪ್ರಕರಣಗಳು ಮ್ಯೂಕರ್ಮೈಕೊಸಿಸ್  
ಗುಜರಾತ್ (Gujarat) ಹಾಗೂ ರಾಜಸ್ಥಾನಗಳಲ್ಲಿಯೂ (Rajasthan) ಕೂಡ Mucormycosisನ ಹಲವು ಪ್ರಕರಣಗಳು ವರದಿಯಾಗಿವೆ. ಗುಜರಾತ್ ರಾಜ್ಯದಲ್ಲಿ ಸುಮಾರು 100 ಜನರು ಈ ಮಾರಕ ಕಾಯಿಲೆಗೆ ಗುರಿಯಾಗಿದ್ದಾರೆ. ಇವರಲ್ಲಿ ಬ್ಲಾಕ್ ಫಂಗಸ್ ಲಕ್ಷಣಗಳಿವೆ. ಗುಜರಾತ್ ನ ರಾಜಕೊಟ್ ನಲ್ಲಿ ಈ ರೋಗಿಗಳಿಗೆ ವಿಶೇಷ ಆಸ್ಪತ್ರೆ ಸಿದ್ಧಪಡಿಸಲಾಗಿದೆ, ಸ್ಪೆಷಲ್ ವಾರ್ಡ್ ವ್ಯವಸ್ಥೆ ಕೂಡ ಮಾಡಲಾಗಿದೆ.


ಇದನ್ನೂ ಓದಿ- Corona Vaccine Good news : 2-18 ವರ್ಷದೊಳಗಿನವರಿಗೆ Covaxin ಟ್ರಯಲ್ ಗೆ ಶಿಫಾರಸು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.