ನವದೆಹಲಿ : ದೇಶಾದ್ಯಂತ ಕರೋನವೈರಸ್ (Coronavirus) ಹಾವಳಿ ಹೆಚ್ಚುತ್ತಿದೆ. ಪ್ರತಿದಿನ ಸಾವು ನೋವಿನ ಸುದ್ದಿ ಕೇಳುತ್ತಿದ್ದ ಮಧ್ಯೆ ಖುಷಿ ಪಡುವ ಸುದ್ದಿಯೊಂದು ಬಂದಿದೆ. ಶೀಘ್ರದಲ್ಲೇ 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೂ ಕರೋನಾ ಲಸಿಕೆ ಟ್ರಯಲ್ (Corona Vaccine Trail) ಆರಂಭವಾಗುವ ಎಲ್ಲಾ ಸಾಧ್ಯತೆಗಳಿವೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ (Bharat Biotech) 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಪ್ರಾಯೋಗಿಕವಾಗಿ ಲಸಿಕೆ ಹಾಕಿಸಲು ಅನುಮತಿ ಕೇಳಿದೆ.
ಕೋವಾಕ್ಸಿನ್ ಟ್ರಯಲ್ ಗೆ ತಜ್ಞರ ಸಮಿತಿ ಶಿಫಾರಸು :
ತಜ್ಞರ ಸಮಿತಿಯು ಮಂಗಳವಾರ ಭಾರತ್ ಬಯೋಟೆಕ್‌ನ COVID-19 ಲಸಿಕೆ Covaxinನ ಎರಡನೇ ಮತ್ತು ಮೂರನೇ ಹಂತದ ಪರೀಕ್ಷೆಗೆ ಶಿಫಾರಸು ಮಾಡಿದೆ. ಅಂದರೆ 2ವರ್ಷದಿಂದ 18 ವರ್ಷದವರೆಗಿನವರಿಗೆ ನೀಡುವ ಕೋವಿಡ್ ಲಸಿಕೆಯ (COVID Vaccine) ಪರೀಕ್ಷೆ ನಡೆಸಲು ಶಿಫಾರಸು ಮಾಡಿದೆ. ದೆಹಲಿ ಮತ್ತು ಪಾಟ್ನಾದ ಏಮ್ಸ್ (AIMS) ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇದರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದನ್ನೂ ಓದಿ : Ganga River- ಇಲ್ಲಿಯವರೆಗೆ 73 ಶವಗಳು ಪತ್ತೆ, ಜೆಸಿಬಿಯಿಂದ ಮುಂದುವರೆದ ಸಮಾಧಿ ಕಾರ್ಯ
ಎರಡನೇ-ಮೂರನೇ ಹಂತದ ಪರೀಕ್ಷೆಗೆ ಶಿಫಾರಸು :
ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ಕೋವಿಡ್ -19 ವಿಷಯ ತಜ್ಞರ ಸಮಿತಿ ಮಂಗಳವಾರ ಭಾರತ್ ಬಯೋಟೆಕ್ (Bharat Biotech) ಸಂಸ್ಥೆ ಮಾಡಿರುವ ಮನವಿಯ ಬಗ್ಗೆ ವಿಚಾರ ವಿಮರ್ಶೆ ನಡೆಸಿದೆ. 2 ರಿಂದ 18 ವರ್ಷದೊಳಗಿನವರ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವುದು ಸೇರಿದಂತೆ ಇನ್ನೂ ಅನೇಕ ವಿಷಯಗಳಿಂದಾಗಿ ಕೋವಾಕ್ಸಿನ್ ನ ಎರಡನೇ ಮತ್ತು ಮೂರನೇ ಚರಣಕ್ಕಾಗಿ ಅನುಮತಿ ನೀಡುವಂತೆ ಕಂಪನಿ ಮನವಿ ಸಲ್ಲಿಸಿದೆ. ಮೂಲಗಳ ಪ್ರಕಾರ, ಕಂಪನಿಯ ಈ ಮನವಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವ ತಜ್ಞರ ಸಮಿತಿಯು, ಎರಡನೇ ಮತ್ತು ಮೂರನೇಯ ಚರಣದ ಪರೀಕ್ಷೆಗೆ ಅನುಮತಿ ನೀಡಲು ಶಿಫಾರಸು ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ : ಯುವಕರಿಗೆ ಕೊರೊನಾ ಬರುವ ಸಾಧ್ಯತೆ ಜಾಸ್ತಿ..! ಕಾರಣವೇನು ಗೊತ್ತೇ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.